Advertisement
1. ತಪಾಸಣಾ ಯಂತ್ರಗಳು ಹಿಮ ಕರಡಿಯನ್ನು ಪತ್ತೆ ಮಾಡಲಾರವುಕೆಲ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಒದಗಿಸಲು ತಪಾಸಣ ಯಂತ್ರಗಳನ್ನು ಇಟ್ಟಿರುವುದನ್ನು ನೀವು ನೋಡಿರಬಹುದು. ಇವುಗಳಲ್ಲಿ ಥರ್ಮಲ್ ಸೆನ್ಸಾರ್‌ಗಳಿಂದ ಕೆಲಸ ಮಾಡುವಂಥ ಯಂತ್ರಗಳಿರುತ್ತವೆ. ಅಂದರೆ ವಸ್ತುವೊಂದು ಹೊರಸೂಸುವ ಶಾಖದಿಂದ ಅದರ ತಪಾಸಣೆ ಮಾಡುತ್ತವೆ. ಈ ಯಂತ್ರದೊಳಗೆ ಹಿಮ ಕರಡಿ ಏನಾದರೂ ಹೋದರೆ ಅವನ್ನು ಯಂತ್ರ ಪತ್ತೆ ಮಾಡುವುದೇ ಇಲ್ಲ. ಮನುಷ್ಯರು ಹೋದರೆ ಮಾತ್ರ ಪತ್ತೆ ಮಾಡುತ್ತದೆ. ಅದು ಯಾಕೆ ಗೊತ್ತಾ ಮೊದಲೇ ಹೇಳಿದಂತೆ ಈ ಥರ್ಮಲ್ ಸೆನ್ಸಾರ್‌ಗಳು ಕೆಲಸ ಮಾಡುವುದು ವಸ್ತು ಹೊರಸೂಸುವ ಶಾಖವನ್ನು ಅವಲಂಬಿಸಿ. ಆದರೆ ಹಿಮಕರಡಿಯ ಮೈ ಶಾಖವನ್ನು ಹೊರಸೂಸುವುದೇ ಇಲ್ಲ. ಅವುಗಳು ವಾಸಿಸುವುದು ಶೀತಲ ಪ್ರದೇಶದಲ್ಲಾದ್ದರಿಂದ ಅಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಅಗತ್ಯ ತುಂಬಾ ಇರುತ್ತೆ ಹೀಗಾಗಿ ಅದರ ಮೈ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆಯೇ ಹೊರತು ಹೊರಸೂಸುವುದಿಲ್ಲ.
ಯಾವತ್ತಾದರೂ ಬೆಕ್ಕು ಮೇಲಿನಿಂದ ಕೆಳಗೆ ಹಾರುವುದನ್ನು ನೋಡಿದ್ದೀರ? ಅದು ಬೇಕಂತಲೇ ಹಾರಲಿ ಅಥವಾ ಅಕಸ್ಮಾತ್ ಆಗಿ ಮೇಲಿನಿಂದ ಬೀಳುವುದಿರಲಿ, ಹೇಗೇ ಬಿದ್ದರೂ ಅದಕ್ಕೆ ಅಪಾಯ ತುಂಬಾ ಕಡಿಮೆ. ಅದು ಸುರಕ್ಷಿತವಾಗಿ ಭೂಮಿಗೆ ಬಂದು ಬೀಳುತ್ತದೆ. ಬೀಳುವಾಗ ತಲೆ ಕೆಳಗಾಗಿದ್ದರೂ ನೆಲ ಮುಟ್ಟುವ ಹೊತ್ತಿನಲ್ಲಿ ಕಾಲುಗಳು ಸರಿಯಾಗಿ ನೆಲದ ಮೇಲೆ ಊರಿರುತ್ತವೆ. ಅದೆಷ್ಟೋ ಅಂತಸ್ತಿನ ಮಹಡಿಯಿಂದ ಬಿದ್ದ ಬೆಕ್ಕೂ ಪ್ರಾಣಪಾಯದಿಂದ ಪಾರಾಗಿದೆ. ಇದಕ್ಕೆ ಕಾರಣ ಅವುಗಳ ಫ್ಲೆಕ್ಸಿಬಲ್ ಬೆನ್ನು. ಇದರಿಂದಾಗಿಯೇ ಅವುಗಳ ದೇಹ ಉಲ್ಟಾ ಇದ್ದರೂ ಕೂಡ ಭೂಮಿಗೆ ಬರುವಾಗ ಸರಿಯಾಗಿ ಅದು ಕಾಲಿನ ಮೇಲೆ ನಿಂತುಕೊಳ್ಳುತ್ತದೆ. ಆ ಸಮಯದಲ್ಲಿ ಕಾಲು, ಬೆನ್ನು ಎಲ್ಲವೂ ಒಂದು ಸ್ಪ್ರಿಂಗ್ ರೀತಿ ವರ್ತಿಸುತ್ತದೆ. ಹೀಗಾಗಿ ಎತ್ತರದಿಂದ ಬೀಳುವಾಗ ಅವುಗಳಿಗೆ ಅಪಾಯ ಕಡಿಮೆ.