Advertisement

ಸಿಬಿಐಗೆ ಕೊಡದ ಉದ್ದೇಶ ಏನು: ಸಿ.ಟಿ. ರವಿ ಪ್ರಶ್ನೆ

10:36 PM Jun 01, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿರುವುದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ? ಈ ಪ್ರಕರಣವನ್ನು ಇನ್ನೂ ಸಿಬಿಐಗೆ ಹಸ್ತಾಂತರಿಸದೆ ಇರುವುದರ ಉದ್ದೇಶವೇನು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದೊಡ್ಡ ಹಗರಣವಾದರೂ ಇನ್ನೂ ಯಾಕೆ ಸಿಬಿಐಗೆ ಕೊಟ್ಟಿಲ್ಲ? ಸಚಿವ ನಾಗೇಂದ್ರರನ್ನು ಯಾಕೆ ವಜಾ ಮಾಡಿಲ್ಲ ಎಂಬ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next