Advertisement

ಕೇರಳದಲ್ಲಿ ಆಫ್ರಿಕನ್​ ಹಂದಿ ಜ್ವರ ಪತ್ತೆ; ಹೆಚ್ಚಿದ ಆತಂಕ

06:56 PM Oct 29, 2022 | Team Udayavani |

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಆಫ್ರಿಕನ್‌ ಹಂದಿ ಜ್ವರ ಈಗ ಕೇರಳದಲ್ಲೂ ಆತಂಕ ಹೆಚ್ಚಿಸುತ್ತಿದೆ. ಕೊಟ್ಟಾಯಂ ಬಳಿಕ ತ್ರಿಶೂರ್‌ನ ಕಾಡಂಗೋಡೆಯಲ್ಲಿ 40 ಹಂದಿಗಳು ಈ ವೈರಸ್‌ಗೆ ಬಲಿಯಾಗಿವೆ. ಹೀಗಾಗಿ, 600ಕ್ಕೂ ಅಧಿಕ ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.

Advertisement

ಏನಿದು ಜ್ವರ?
ಇದು ಶೇ.100ರಷ್ಟು ಮರಣ ಸಾಧ್ಯತೆಯಿರುವ ವೈರಲ್‌ ರೋಗ. ಇದು ಮನುಷ್ಯರಿಗೆ ಹರಡುವುದಿಲ್ಲ. ಆದರೆ, ಒಂದು ಹಂದಿಯಿಂದ ಮತ್ತೂಂದು ಹಂದಿಗೆ ಹರಡುತ್ತದೆ. ಹಂದಿಗಳ ನಡುವೆ ಪರಸ್ಪರ ದೈಹಿಕ ಸಂಪರ್ಕ ಮತ್ತು ಶರೀರದ ದ್ರವಗಳ ವಿನಿಮಯದಿಂದ ವೈರಸ್‌ ವ್ಯಾಪಿಸುತ್ತದೆ. ಅಲ್ಲದೇ, ಸರಿಯಾಗಿ ಬೇಯಿಸದ ಸೋಂಕಿತ ಆಹಾರವನ್ನು ಹಂದಿಗಳಿಗೆ ನೀಡುವುದರಿಂದಲೂ ಇದು ಹಬ್ಬುತ್ತದೆ.

ರೋಗಲಕ್ಷಣಗಳು
ವಿಪರೀತ ಜ್ವರ, ಹಸಿವಿಲ್ಲದಿರುವಿಕೆ, ದೌರ್ಬಲ್ಯ, ಚರ್ಮದಲ್ಲಿ ಕೆಂಪು ಮಚ್ಚೆ, ವಾಂತಿ -ಭೇದಿ, ಕೆಮ್ಮು ಮತ್ತು ಉಸಿರಾಟದ ತೊಂದರೆ. ಆರಂಭದಲ್ಲಿ ಹಂದಿಗಳ ತಾಪಮಾನ 40.5 ಡಿ.ಸೆ.ಗೆ ತಲುಪಲಿದೆ. ನಂತರ ಅವುಗಳು ಸಪ್ಪೆಯಾಗಿ, ಆಹಾರ ಸೇವಿಸುವುದನ್ನು ಸ್ಥಗಿತಗೊಳಿಸುತ್ತವೆ.

ಕೇರಳ ಸರ್ಕಾರ ಕೈಗೊಂಡ ಕ್ರಮಗಳು
– ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಆದೇಶ
– ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿಗಳ ಸಾಗಣೆ ಸ್ಥಗಿತ
– ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿ ಮಾಂಸ, ಮೇವು ಸಾಗಣೆ ಸ್ಥಗಿತ
– ಇಂಥ ಪ್ರದೇಶದ ಸುತ್ತಲಿನ 10 ಕಿ.ಮೀ. ಅನ್ನು ರೋಗ ನಿಗಾ ವಲಯ ಎಂದು ಘೋಷಣೆ

ಪರಿಣಾಮವೇನು?
ಸೋಂಕಿತ ಹಂದಿಗಳು ಸಾಯಲಾರಂಭಿಸುತ್ತವೆ. ಈ ಸೋಂಕು ಮನುಷ್ಯರಿಗೆ ಹಬ್ಬುವುದಿಲ್ಲ. ಆದರೆ, ಭಾರೀ ಸಂಖ್ಯೆಯ ಹಂದಿಗಳು ಸೋಂಕಿಗೆ ಬಲಿಯಾಗುವ ಕಾರಣ, ಹಂದಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗುತ್ತದೆ. ಇದು ಹಂದಿ ಸಾಕಣೆಯನ್ನೇ ಉದ್ಯಮವಾಗಿಸಿಕೊಂಡವರಿಗೆ ಭಾರೀ ಹೊಡೆತ ನೀಡುತ್ತದೆ. ಈ ವೈರಸ್‌ಗೆ ಲಸಿಕೆ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next