Advertisement
ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಅಡಿಕೆ, ಕಾಳುಮೆಣಸು, ರಬ್ಬರ್‌ಗಳ ಬೆಲೆ ಕುಸಿತದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಆದರೆ ಈಗ ಅಡಿಕೆಯು ವಿಷಕಾರಕ ಎಂಬ ನಿಟ್ಟಿನಲ್ಲಿ ನಿಷೇಧದ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಕುರಿತು ಸಂಸದರು ಮಾತನಾಡುತ್ತಿಲ್ಲ. ಹಿಂದೆ ಸುಳ್ಯದಿಂದ ಮಂಗಳೂರಿಗೆ ಪಾದಯಾತ್ರೆ ಮಾಡಿದ ಬಿಜೆಪಿಯವರು ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿಚಾರಗಳನ್ನು ಗಂಭೀರವಾಗಿಪರಿಗಣಿಸುತ್ತಿಲ್ಲ ಎಂದರು. ಎರಡು ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹತ್ಯೆಯಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಬಶೀರ್, ಹರೀಶ್ ಪೂಜಾರಿ ಮನೆಗೆ ಭೇಟಿ ನೀಡದೆ ಇಬ್ಬಗೆ ನೀತಿ ಅನುಸರಿಸಿದ್ದಾರೆ. ಪ್ರಸ್ತುತ ಯಾರೇ ಹತ್ಯೆಯಾದರೂ ಅವರು ನಮ್ಮ ಕಾರ್ಯಕರ್ತರು ಎನ್ನುವ ಮೂಲಕ ಓಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಎಲ್ಲ ತನಿಖಾ ಸಂಸ್ಥೆಗಳು ಅವರ ಅಧೀನದಲ್ಲೇ ಇದ್ದು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
Related Articles
ಮೇಯರ್ ಕವಿತಾ ಸನಿಲ್, ಪ್ರಮುಖರಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಪ್ರಶಾಂತ್ ಕಾಜವ, ಜೆಸಿಂತಾ ವಿಜಯ್, ಅಪ್ಪಿ, ಉಮರ್ ಫಾರೂಕ್, ಅಬೂಬಕ್ಕರ್ ಕುದ್ರೋಳಿ, ಯು.ಎಚ್. ಖಾಲಿದ್, ಆಸಿಫ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
Advertisement
ಮಾನಹಾನಿ ಮಾಡಿಲ್ಲ: ಪ್ರತಿಭಾಕಾರ್ಪೊರೇಟರ್ ಪ್ರತಿಭಾ ಕುಳಾç ಮಾತನಾಡಿ, ತಾನು ಈ ಹಿಂದೆ ಭಾಷಣದಲ್ಲಿ ಶರತ್ ಮಡಿವಾಳ ಅವರ ಹೆಸರನ್ನು ಪ್ರಸ್ತಾಪಿಸಿರುವ ಬಗ್ಗೆ ಶರತ್ ತಂದೆ ಅವರು ನಾನು ಮಾನಹಾನಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ತಾನು ಮಾನಹಾನಿಯ ಯಾವುದೇ ಹೇಳಿಕೆ ನೀಡಿಲ್ಲ. ಹಿಂದುಳಿದ ವರ್ಗಗಳ ಯುವಕರು ಹತ್ಯೆಯಾಗುತ್ತಿದ್ದಾರೆ ಎಂದಷ್ಟೇ ಹೇಳಿದ್ದೆ ಎಂದರು.