Advertisement

ಪ್ಯಾಶನ್ ಫ್ರೂಟ್ : ಏನಿದು ಹೊಸ ಬಗೆಯ ಹಣ್ಣು?

07:46 PM Jun 13, 2021 | ಶ್ರೀರಾಜ್ ವಕ್ವಾಡಿ |

ನಮ್ಮ ಪರಿಸರ ದಲ್ಲಿ ಅದೆಷ್ಟೋ ಬಗೆಯ ಹಣ್ಣುಗಳು ಇವೆ.  ಆದರೆ ಬಹುತೇಕ ಹಣ್ಣುಗಳ ಉಪಯೋಗ ಮಾತ್ರ ನಮಗೆ ತಿಳಿದಿಲ್ಲ.ನಿಸರ್ಗದತ್ತವಾದ ಇಂತಹ ಹಣ್ಣುಗಳು ಆರೋಗ್ಯಕ್ಕೆ ಉತ್ತಮ.  ಇಂತಹ  ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಸಹ ಒಂದು.  ಇದನ್ನು ಶರಬತ್ ಕಾಯಿ ಎಂದು ಕೂಡ ಕರೆಯಲಾಗುತ್ತದೆ.

Advertisement

ಇದು ಗಸಗಸೆ ರೀತಿಯ ಬೀಜಗಳನ್ನು ಹೊಂದಿದ್ದು,  ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ. ಕಡು ಕೆಂಪು ಹಾಗೂ ಹಳದಿ ಹೀಗೆ ಎರಡು ವಿಧಗಳಿವೆ.

ಇದನ್ನೂ ಓದಿ : ಬೆಳಕು, ಕತ್ತಲೆಗಳ ಘರ್ಷಣೆಯಿಂದ ಹೊರಬಂದ ಹಾಡು ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..

ಈ ಹಣ್ಣು ಹುಳಿ ರುಚಿಯನ್ನು ಹೊಂದಿದ್ದರು,  ಆರೋಗ್ಯ ವಿಚಾರದಲ್ಲಿ ಸಿಹಿ ಗುಣಗಳನ್ನು ಹೊಂದಿದೆ . ಇದನ್ನು ಬೆಳೆಯಲು ಉಷ್ಣ ವಲಯ ಅತ್ಯುತ್ತಮ. ಬಳ್ಳಿ ಆಗಿರುವುದರಿಂದ ಯಾವುದಾದರೂ ಮರದ ಮೇಲೂ ಬೆಳೆಯಲು ಬಿಡಬಹುದು. ಬಳ್ಳಿ ನೆಟ್ಟು, ಒಂದು ವರ್ಷದಲ್ಲಿ ಹಣ್ಣುಗಳನ್ನು ಕೊಯ್ಯಲ  ಸಾಧ್ಯ. ಇದು ಉಷ್ಣ ವಲಯ ದಲ್ಲಿ ಬೆಳೆಯಲು ಅತಿ ಸೂಕ್ತ.

ಆರೋಗ್ಯ ಪ್ರಯೋಜನಗಳು :

Advertisement

ಪ್ಯಾಶನ್ ಫ್ರೂಟ್  ನಲ್ಲಿ ವಿಟಮಿನ್ ಎ,  ವಿಟಮಿನ್ ಸಿ, ಕೆರೋಟಿನ್, ಪೊಟಾಷಿಯಮ್,  ಫೈಬರ್ ಹಾಗೂ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿ ಇದ್ದು,  ರಕ್ತ ಕಣಗಳನ್ನು  ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ.ಡಯಾಬಿಟೀಸ್ ಹೊಂದಿರುವವರು ಇದನ್ನು ಸೇವಿಸಿದರೆ ಇನ್‌ ಸುಲಿನ್ ಪ್ರಮಾಣ ಕಡಿಮೆ ಮಾಡಲು ಸಹಕಾರಿ.

ಡೆಂಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಪ್ಲೇಟ್ ಲೆಟ್ ಹೆಚ್ಚಿಸಲು ಅತ್ಯಂತ  ಸರಳ  ಮನೆ ಮದ್ದು ಇದು.  ಇನ್ನು, ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ ಫೈಬರ್ ಅಂಶ ಹೃದಯದ ಆರೋಗ್ಯ ಕಾಪಾಡಲು ಉಪಕಾರಿ.

ಹುಳಿ ಸಿಹಿಯಾದ ಈ ಹಣ್ಣಿನ ಜ್ಯೂಸ್ ಒಮ್ಮೆ  ಸವಿದವರು  ಮತ್ತೆ ಮತ್ತೆ ಸವಿಯಲು ಬಯಸದೇ ಇರಲಾರರು ! ಈ ಹಣ್ಣಿ ಜ್ಯೂಸ್ ಮಾಡಲು ಸಹ ಅತಿ ಸುಲಭ.  ಪ್ಯಾಶನ್ ಫ್ರೂಟ್ ಬೀಜಗಳನ್ನು ತೆಗೆದು ನೀರು ಹಾಗೂ ಸಕ್ಕರೆ ಬೆರೆಸಿ ಕುಡಿದರೆ ದೇಹಕ್ಕೂ ಮನಸ್ಸಿಗೆ ತಂಪು. ಹುಳಿ ಇಷ್ಟ ಪಡೆವವರು ಹೀಗೂ ತಿನ್ನಬಹುದು . ವಿದೇಶಗಳಲ್ಲಿ ಕೇಕ್ ಹಾಗೂ ಜಾಮ್ ರೂಪದಲ್ಲಿ ಇದು ಲಭ್ಯ.

ತೇಜಸ್ವಿನಿ ಆರ್ ಕೆ

ಎಸ್ ಡಿ ಎಂ ಕಾಲೇಜು, ಉಜಿರೆ.

ಇದನ್ನೂ ಓದಿ : ತೊರೆದು ಜೀವಿಸಬಹುದೇ ಹರಿ ನಿನ್ನ… ಅಶ್ವಿನಿ ಕೊಂಡದಕುಳಿ ಧ್ವನಿಯಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next