ಮಾಗಡಿ: ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಹಾತ್ಮ ಗಾಂಧಿಯೇ? ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಪಟ್ಟಣದ ಜೆ.ಪಿ.ಚಂದ್ರೇಗೌಡ ಕಚೇರಿ ಯಲ್ಲಿ ತಗ್ಗೀಕುಪ್ಪೆ ಜಿಪಂ ವ್ಯಾಪ್ತಿಗೆ ಬರುವ 6 ಪಂಚಾಯಿತಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿ, ಜೆಡಿಎಸ್‌ನಲ್ಲಿದ್ದಾಗ ಎಚ್‌ಡಿಕೆಯವರನ್ನು ಮನೆ ದೇವರೆಂದು ನಂಬಿದ್ದೆ.
ಕೆಲ ವಿಚಾರದಲ್ಲಿ ಜನರನ್ನು ದಿಕ್ಕುತಪ್ಪಿಸಲು ಸುಳ್ಳು ಹೇಳಬಾರದು ಎಂದು ಹೇಳಿದ್ದಕ್ಕೆ ನನ್ನ ವಿರುದ್ಧವೇ ಮಾತನಾಡಿದರು. ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಎಚ್‌ಡಿಕೆ ಕೇವಲ 10 ಅಥವಾ 20 ತಿಂಗಳು ಸಿಎಂ ಆಗ್ತಾರೆಯಷ್ಟೆ. ವಿಶೇಷ ಯೋಜನೆ ಮೀಸಲು ಬದಲಾವಣೆ ಅಸಾಧ್ಯ. ಈವರೆಗೂ ಎಚ್‌ಡಿಕೆ ಮತ ದಾರರಿಗೆ ನೀಡಿದ ಭರವಸೆಗಳಲ್ಲಿ ಒಂದಾ ದರೂ ಈಡೇರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಎಚ್‌ಡಿಕೆ ಸಿಎಂ ಆಗ್ತಾರೆ, ಹೊಸ ಯೋಜನೆ ಕೊಡುತ್ತಾರೆ ಎಂದು ಕನಸು ಕಾಣಿದ ಜನರಿಗೆ ಏನು ಕೊಟ್ಟರು? ರಾಮನಗರ ಮತ್ತು ಚೆನ್ನಪಟ್ಟಣದಲ್ಲಿ ಕೊರೊನಾ ಸಂಕಷ್ಟಕ್ಕೆ 20 ಸಾವಿರ ಕಿಟ್ ವಿತರಿಸಿದರು. ಜೆಡಿಎಸ್ ಶಾಸಕರಿಗೆ ಅಧಿಕ 52 ಸಾವಿರ ಮತ ನೀಡಿದ ಮಾಗಡಿ ಜನರು ನೆನಪಿಗೆ ಬರಲಿಲ್ಲವೇ? ಮಲತಾಯಿ ಧೋರಣೆ ಅನುಸರಿಸಿದ್ದಾರೆ.
ಕಣ್ವ ನದಿಯಿಂದ ವೈ.ಜಿ.ಗುಡ್ಡ, ಮಂಚನ ಬೆಲೆಗೆ ನೀರು ಹರಿಸುವ ಯೋಜನೆ ಸಂಸದ ಡಿ.ಕೆ.ಸುರೇಶ್ ಚಿಂತನೆಯಾಗಿದ್ದು, ಅದಕ್ಕೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮಂಜೂರು ನೀಡಿದ್ದರು. ಅನುಷ್ಠಾಗೊಳಿಸಬೇಕಾದಾಗ ಸಿಎಂ ಗಮನಕ್ಕೆ ತರಬೇಕಿದ್ದರಿಂದ ಎಚ್ ಡಿಕೆಗೆ ಗೊತ್ತಾಗಿದ್ದು ಎಂದರು.
ಜಿಪಂ ದಿಶಾ ಕಮಿಟಿ ಸದಸ್ಯ ಚಂದ್ರೇ ಗೌಡ, ತಾಪಂ ಅಧ್ಯಕ್ಷ ನಾರಾ ಯಣಪ್ಪ, ಪುರಸಭಾ ಸದಸ್ಯ ಎಚ್.ಜೆ. ಪುರು ಷೋತ್ತಮ್, ರಘು, ಗುರು ಸ್ವಾಮಿ, ಮುರಳಿ, ಕಲ್ಪನಾ ಶಿವಣ್ಣ, ತೋ.ವಿ. ಗಿರೀಶ್, ಸಿ.ಜಯರಾಮು, ಸುಂದ್ರ, ಇನಾಯಿತ್ ಉಲ್ಲಾ, ಎಂ.ಅರ್.ಮಂಜುನಾಥ್, ನರಸಿಂಹ ಮೂರ್ತಿ, ಪ್ರಶಾಂತ್, ಸೀಗೇಕುಪ್ಪೆ ಶಿವಣ್ಣ, ಸುಮಾ ರಮೇಶ್, ಜಯಣ್ಣ, ರಂಗಸ್ವಾಮಿ, ಚಕ್ರಭಾವಿ ದೀಪಕ್, ಕಾಂತರಾಜು ಇದ್ದರು.