ಪ್ರಧಾನಿ ನರೇಂದ್ರ ಮೋದಿ ಭಾರತ ಸರ್ಕಾರದ ಮುಖ್ಯಸ್ಥರು. ಅಷ್ಟೇ ಅಲ್ಲ ಮಿನಿಸ್ಟರ್ ಆಫ್ ಕೌನ್ಸಿಲ್ ನ ಹೊಣೆಗಾರಿಕೆ ಇವರದ್ದೇ. ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಮಂತ್ರಿ ಸಂಪುಟದ ಅತೀ ಹಿರಿಯ ಸದಸ್ಯ ಹಾಗೂ ಸರ್ಕಾರದ ಕಾರ್ಯಕಾರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಪ್ರಧಾನಿ ಎಲ್ಲೇ ಹೋಗಲಿ ಅವರನ್ನು ಸದಾ ಎಸ್ ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಹಿಂಬಾಲಿಸುತ್ತಿರುತ್ತದೆ. ಇದು ಎಲ್ಲರೂ ಗಮನಿಸಿರುವ ವಿಷಯ. ಆದರೆ ಪ್ರಧಾನಿ ಅವರು ವಿಶೇಷ ವಿಮಾನದಿಂದ ಇಳಿಯುವ ಮುನ್ನ, ಕಾರು ಇಳಿಯುವ ಮುನ್ನ ಕಪ್ಪು ಬಟ್ಟೆ ಧರಿಸಿರುವ ಎಸ್ ಪಿಜಿ ಒಬ್ಬೊಬ್ಬರಾಗಿ ಇಳಿಯುವಾಗ ಅವರ ಕೈಯಲ್ಲೊಂದು ಕಪ್ಪು ಸೂಟ್ ಕೇಸ್ ಇರುವುದನ್ನು ಗಮನಿಸಿದ್ದೀರಿ ಅಲ್ಲವೇ? ಹೌದು ಏನಿದು, ಗಣರಾಜ್ಯೋತ್ಸವ ವೇಳೆ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ಅವರನ್ನು ಹಿಂಬಾಲಿಸುವಾಗ ಕಪ್ಪು ಬ್ರೀಫ್ ಕೇಸ್ ಹಿಡಿದೇ ಓಡಾಡುವುದು ಯಾಕೆ ಎಂಬ ಕುತೂಹಲ ಇದ್ದರೆ ಮುಂದೆ ಓದಿ…
ಪ್ರಧಾನಿಯಾದವರಿಗೆ ಮತ್ತು ಅವರ ಕುಟುಂಬದ ರಕ್ಷಣೆ, ಹೊಣೆಗಾರಿಕೆ ಎಸ್ ಪಿಜಿ ನೋಡಿಕೊಳ್ಳುತ್ತದೆ. ಎಸ್ ಪಿಜಿ ಭದ್ರತೆ ದೇಶದಲ್ಲಿಯೇ ಅತೀ ಬಲಿಷ್ಠವಾದ ಭದ್ರತೆಯಾಗಿದೆ. ಈ ವಿಶೇಷ ಭದ್ರತಾ ಪಡೆ(ಎಸ್ ಪಿಜಿ) ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುತ್ತದೆ. ಇದರಲ್ಲಿ ಎಫ್ ಎನ್ ಎಫ್ 2000 ರೈಫಲ್ಸ್ (ಬೆಂಕಿಯಂತೆ ಉಗುಳುವ ಗ್ಯಾಸ್ ಆಪರೇಟೆಡ್ ಸಿಸ್ಟಮ್), ಆಟೊಮ್ಯಾಟಿಕ್ ಗನ್ಸ್ ಮತ್ತು 17-Mನಂತಹ ಡೇಂಜರಸ್ ಪಿಸ್ತೂಲ್ ಗಳನ್ನು ಎಸ್ ಜಿಪಿ ಬಳಿ ಇರುತ್ತದೆ.
ಈ ಬ್ರೀಫ್ ಕೇಸ್ ವಾಸ್ತವವಾಗಿ ಇದು ನ್ಯೂಕ್ಲಿಯರ್ ಬಟನ್ ಆಗಿದೆ. ಪ್ರಧಾನಿ ಅವರನ್ನು ಹಿಂಬಾಲಿಸುವಾಗ ಕೆಲವು ಅಡಿಗಳ ಅಂತರ ಇಟ್ಟುಕೊಂಡೇ ಎಸ್ ಪಿಜಿ ಸುತ್ತುವರಿದಿರುತ್ತದೆ. ಇದು ನೋಡಲು ತುಂಬಾ ತೆಳುವಾಗಿರುತ್ತದೆ. ನಿಜಕ್ಕೂ ಇದೊಂದು ಸುಲಭವಾಗಿ ಒಯ್ಯಬಲ್ಲ ಬುಲೆಟ್ ಪ್ರೂಫ್ ರಕ್ಷಾ ಕವಚ. ಸುಲಭವಾಗಿ ಮಡಚಬಲ್ಲ ಬ್ರೀಫ್ ಕೇಸ್ ಆಕಸ್ಮಿಕ ದಾಳಿ ನಡೆದರೆ ಬ್ರಿಫ್ ಕೇಸ್ ತೆರೆದು ರಕ್ಷಾ ಕವಚವನ್ನಾಗಿ ಮಾಡಿಕೊಂಡು ಪ್ರಧಾನಿ ಅವರನ್ನು ರಕ್ಷಿಸುವ ತಂತ್ರಗಾರಿಕೆ ಇದರಲ್ಲಿದೆ.
ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ವಿಶೇಷ ಭದ್ರತಾ ಪಡೆ ಈ ಬ್ರೀಫ್ ಕೇಸ್ ನಲ್ಲಿರುವ ರಹಸ್ಯ ಬಟನ್ ಅದುಮಿದರೆ ಸಾಕು ಕೆಳಮುಖ ಮಾಡಿ ರಕ್ಷಾ ಕವಚ ತೆರೆದುಕೊಳ್ಳುವ ಮೂಲಕ ಪ್ರಧಾನಿ ಅವರ ರಕ್ಷಣೆಗೆ ನಿಂತು ದಾಳಿಯಿಂದ ರಕ್ಷಿಸುವುದು ಎಸ್ ಪಿಜಿ ಹೊಣೆಗಾರಿಕೆಯಾಗಿದೆ. ಇದು ವಿವಿಐಪಿಗಳನ್ನು ತಕ್ಷಣಕ್ಕೆ ಹಾಗೂ ತಾತ್ಕಾಲಿಕವಾಗಿ ರಕ್ಷಿಸುವ ಸಾಧನವಾಗಿದೆ.
ಎಸ್ ಪಿಜಿ ಬ್ರೀಫ್ ಕೇಸ್ ಕೇಸ್ ನಲ್ಲಿದೆ ರಹಸ್ಯ ಪಾಕೆಟ್!
ಪ್ರಧಾನಿ ಅವರನ್ನು ಸರ್ಪಗಾವಲಿನಂತೆ ಕಾಯುತ್ತಿರುವ ಎಸ್ ಪಿಜಿ ಕಮಾಂಡೋಗಳ ಕೈಯಲ್ಲಿರುವ ಬ್ರೀಫ್ ಕೇಸ್ ನೊಳಗೆ ರಹಸ್ಯ ಪಾಕೆಟ್ (ಅಂತಸ್ತು) ಇರುತ್ತದೆ. ಇದರಲ್ಲಿ ಅತ್ಯಾಧುನಿಕ ಪಿಸ್ತೂಲ್ ಗಳು ಇದ್ದಿರುತ್ತದೆ. ದಾಳಿಯಾದ ತಕ್ಷಣವೇ ಬ್ರೀಫ್ ಕೇಸ್ ನಲ್ಲಿರುವ ಆಯುಧದಿಂದ ಎದುರಾಳಿ ಮೇಲೆ ಪ್ರತಿದಾಳಿ ನಡೆಸುತ್ತದೆ ಎಸ್ ಪಿಜಿ ತಂಡ.
ಆದರೆ ನ್ಯೂಕ್ಲಿಯರ್ ಆಯುಧವನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಪ್ರಧಾನಿಯಾದವರಿಗೆ ಇಲ್ಲ ಎಂಬುದು ತಿಳಿದಿರಲಿ. ಈ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ನ್ಯೂಕ್ಲಿಯರ್ ಕಮಾಂಡ್ ಅಥಾರಿಟಿಗೆ. ಅಷ್ಟೇ ಅಲ್ಲ ಯಾವುದಾದರೂ ಅಪಾಯ, ದಾಳಿ ಎದುರಾಗುವಂತಿದ್ದರೆ ಕೌಂಟರ್ ಅಸ್ಸಾಲ್ಟ್ ಟೀಂ (Counter Assault Team) ಎಸ್ ಪಿಜಿಗೆ ಕ್ಷಿಪ್ರವಾಗಿ ಮಾಹಿತಿ ನೀಡುತ್ತದೆ. ನಂತರ ಎಸ್ ಪಿಜಿ ಕಾರ್ಯಪ್ರವೃತ್ತವಾಗುತ್ತದೆ.
ಎಸ್ ಪಿಜಿ ಕಮಾಂಡೋಗಳನ್ನು Central Armed Police Force ಮತ್ತು Railway Protection Forceನಿಂದ ಆಯ್ಕೆ ಮಾಡಲಾಗುತ್ತದೆ. ಆದರೆ ಇವರ ಅಧಿಕಾರಿಗಳು ಐಪಿಎಸ್ ಅಥವಾ ಆರ್ ಪಿಎಫ್ ನವರೇ ಆಗಿರುತ್ತಾರೆ. ಎಸ್ ಪಿಜಿ ದೇಶದ ಗಣ್ಯಾತೀಗಣ್ಯರಿಗೆ ಭದ್ರತೆ ಒದಗಿಸುವ ಸೇವೆಯಲ್ಲಿ ತೊಡಗಿರುತ್ತದೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ ಪ್ರಧಾನಿ, ಗಣ್ಯರನ್ನು ರಕ್ಷಿಸುವ ಕಮಾಂಡೋಗಳಿಗೆ ಸೆಲ್ಯೂಟ್…