Advertisement
ಯಾಕೆ ಈ ಪರಿಶೀಲನೆ?ಬ್ಯಾಂಕುಗಳು ನೀಡಿದ ಸಾಲಗಳು ಸರಿಯಾಗಿ ಮತ್ತು ಸಮಯ ಪರಿಮಿತಿಯಲ್ಲಿ ಮರುಪಾವತಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಇಂದಿನ ದಿನಗಳಲ್ಲಿ ಮರುಪಾವತಿ ಸಮಸ್ಯೆಯಾಗಿದ್ದು, ಮರುಪಾವತಿಗಾಗಿ ಬ್ಯಾಂಕುಗಳು ಕೋರ್ಟ್ ಮೆಟ್ಟಿಲುಗಳನ್ನು ಹತ್ತುವ ಸಂದರ್ಭಗಳು ಮತ್ತು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ಸಮಯದಲ್ಲಿ ಈ ಎಲ್ಲಾ ದಾಖಲೆಗಳು ಮತ್ತು ಕಾಗದಪತ್ರಗಳು ಬೇಕಾಗುತ್ತವೆ. ಕೆಲವು ಕಾಗದ ಪತ್ರಗಳಲ್ಲಿ ಅವುಗಳ execution date ಕೂಡಾ ಅಷ್ಟೇ ಮುಖ್ಯ. ಸಾಲ ನೀಡಿದ ಕಾಗದ ಪತ್ರಗಳು, ಸಾಲ ನೀಡಿದ ದಿನದಿಂದ ಮೂರುವರ್ಷಗಳ ಕಾಲವಷ್ಟೇ ಪ್ರಚಲಿತ ಇರುತ್ತಿದ್ದು, ಮೂರು ವರ್ಷದ ಕಾಲಾವಧಿ ಮುಗಿಯುವ ಮೊದಲು ಬ್ಯಾಂಕುಗಳು ಕೆಲವು ನಿರ್ದಿಷ್ಟ ದಾಖಲೆಗಳನ್ನು ನವೀಕರಣ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನವೀಕರಣ ಮಾಡಿಕೊಳ್ಳದಿದ್ದರೆ, ಸಾಲ ಒಪ್ಪಿಗೆ ಪತ್ರ ಪಡೆಯದಿದ್ದರೆ, ಸಾಲ ಮರುಪಾವತಿಗಾಗಿ ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿದರೆ, ಸಂಬಂಧಪಟ್ಟ ಸಾಲವನ್ನು Time Barred Debt under Limitation Act ಎಂದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ ಮತ್ತು ಆ ಸಾಲದ ವಸೂಲಿ ಬ್ಯಾಂಕಿಗೆ ಕಷ್ಟದಾಯಕವಾಗುತ್ತದೆ. ಈ ವೈಫಲ್ಯಕ್ಕೆ ಬ್ಯಾಂಕ್ ಸಂಬಂಧಪಟ್ಟ ಮ್ಯಾನೇಜರ್ ಅನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇಂಥ ನ್ಯೂನತೆಗಳಿಗಾಗಿ ಸಾಕಷ್ಟು ಬ್ಯಾಂಕ್ ಮ್ಯಾನೇಜರ್‌ಗಳು ತೊಂದರೆಯಲ್ಲಿ ಸಿಲುಕಿಕೊಂಡಿ¨ªಾರೆ. ದಂಡವನ್ನೂ ತೆತ್ತಿ¨ªಾರೆ. ಅಂತೆಯೇ, ಪ್ರತಿಯೊಬ್ಬ ಮ್ಯಾನೇಜರ್‌ಗಳು ದಾಖಲೆ, ಕಾಗದಪತ್ರಗಳು ಮತ್ತು ಅವುಗಳ execution date ಬಗೆಗೆ ತೀವ್ರ ಎಚ್ಚರಿಕೆ ವಹಿಸುತ್ತಾರೆ.
ಕಾನೂನಾತ್ಮಕವಾಗಿ ಒಂದು ಸಾಲದ ದಾಖಲೆಗಳ ವಯಸ್ಸು ಸಾಮಾನ್ಯವಾಗಿ ಮೂರು ವರ್ಷಗಳು. ತಮಾಷೆಯಾಗಿ ಮೂರು ವರ್ಷಕ್ಕೆ ಸಾಲ ನಿರ್ಜೀವ ವಾಗುತ್ತದೆ ಎಂದು ಹೇಳುತ್ತಾರೆ. ಮೂರು ವರ್ಷ ಮುಗಿಯುವ ಒಳಗಾಗಿ ಅದಕ್ಕೆ ಜೀವ ತುಂಬಿ ಚಾಲನೆಯಲ್ಲಿ ಇಡಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಬ್ಯಾಂಕಿನ ಪರಿಭಾಷೆಯಲ್ಲಿ ನವೀಕರಣ ಎನ್ನುತ್ತಾರೆ.
Related Articles
Advertisement
ಇದಕ್ಕೆ ಪ್ರತಿ ಬ್ಯಾಂಕಿನಲ್ಲೂ ಅವರದೇ ಆದ ವಿಶೇಷ ನಮೂನೆ ಇರುತ್ತದೆ. ಒಕ್ಕಣೆಯಲ್ಲಿ ಕಾನೂನಾತ್ಮಕ ಸುರಕ್ಷಿತತೆ ಇರುತ್ತದೆ. ಕೆಲವು ಬ್ಯಾಂಕುಗಳಲ್ಲಿ ಇದನ್ನು ಬ್ಯಾಲೆನ್ಸ ಖಚಿತ (Balance Confirmation letter)ಪತ್ರ ಎಂದೂ ಕರೆಯತ್ತಾರೆ. ಇದು ಇಂಡಿಯನ್ ಲಿಮಿಟೇಷನ್ ಆಕ್ಟ ಮತ್ತು ಇಂಡಿಯನ್ ಕಾಂಟ್ರಾಕ್ಟ ಆಕ್ಟ ಪರಿಧಿಯಲ್ಲಿ ಬರುತ್ತಿದ್ದು, ಇದನ್ನು ಒಂದು ವ್ಯಕ್ತಿಯು ಇನ್ನೊಬ್ಬನಿಗೆ ತಾನು ಇಂತಿಷ್ಟು ಹಣವನ್ನು ಇನ್ನೊಬ್ಬನಿಗೆ ಕೊಡಬೇಕೆಂದು ಎಂದು ಬರಹದಲ್ಲಿ ತಿಳಿಸುವ ಪತ್ರ ಅಥವಾ ದಾಖಲೆ. ಇದನ್ನು ಕೆಲವು ನ್ಯಾಯಾಲಯಗಳು ಅ ಹಣವನ್ನು ಹಿಂತಿರುಗುವ ಕೊಡುವ ಪರೋಕ್ಷ ಭರವಸೆ ಅಥವಾ ಪ್ರಾಮಿಸ್ ಎಂದೂ ಹೇಳಿವೆ. ಸಮಯ ಪರಿಮಿತಿ ಮುಗಿದ ಸಾಲಕ್ಕೂ ಇದು ಅನ್ವಯವಾಗುತ್ತದೆ. ಈ ಪತ್ರವನ್ನು ಸಾಲ ತೆಗೆದುಕೊಂಡ ವ್ಯಕ್ತಿ ಅಥವಾ ಫರ್ಮನ ಅಧಿಕೃತ ವ್ಯಕ್ತಿ ಸಹಿ ಮಾಡಬೇಕಾಗುತ್ತಿದ್ದು ಬರಹದಲ್ಲಿ ಇರಬೇಕಾಗುತ್ತದೆ. ಬಾಯಿಮಾತಿನ ಒಪ್ಪಿಗೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಈ ಬರಹದಲ್ಲಿ ನೇರವಾಗಿ ಸಾಲದ ಬಾಕಿಯನ್ನು ಒಪ್ಪಿಕೊಳ್ಳುವ ಒಕ್ಕಣೆ ಇರಬೇಕು. ಕಂಪನಿಗಳ ಲೆಕ್ಕದ ಪುಸ್ತಕದಲ್ಲಿ ಕಂಪನಿಯ ಡೈರೆಕ್ಟರ್‌ಗಳು ತಮ್ಮ ಸಹಿಯೊಂದಿಗೆ ತಮ್ಮ ಸಾಲ ಬಾಕಿಯನ್ನು ಉಲ್ಲೇಖಿಸಿದರೆ, ಅದನ್ನು ಬ್ಯಾಂಕುಗಳು ಸಾಲ ಒಪ್ಪಿಗೆ ಪತ್ರವೆಂದು ಒಪ್ಪುತ್ತವೆ. ಆದರೆ, ಕಂಪನಿಯ ನೌಕರನ ಸಹಿ ಇದ್ದರೆ ಕಾನೂನು ಪ್ರಕಾರ ಬ್ಯಾಂಕಗಳು ಒಪ್ಪುವುದಿಲ್ಲ. ಒಪ್ಪಿಗೆ ಪತ್ರದ ದಿನದಿಂದ ಹೊಸ ಸಮಯ ಪರಿಮಿತಿಯ ಲೆಕ್ಕ ಆರಂಭವಾಗುತ್ತದೆ.
ಸುರಕ್ಷಿತತೆಯ ದೃಷ್ಟಿಯಲ್ಲಿ ಕೆಲವು ಬ್ಯಾಂಕುಗಳಲ್ಲಿ ಇಂಥ ಪತ್ರವನ್ನು ವರ್ಷಕ್ಕೊಮ್ಮೆ, ಮತ್ತೆ ಕೆಲವರು ತ್ತೈಮಾಸಿಕವಾಗಿ, ಇನ್ನೂ ಕೆಲವು ಚಾಣಾಕ್ಷ ಮ್ಯಾನೇಜರ್‌ಗಳು, ಬ್ಯಾಂಕುಗಳ ಮತ್ತು ತಮ್ಮ ವೈಯಕ್ತಿಕ ಸುರಕ್ಷಿತೆಯ ದೃಷ್ಟಿಯಲ್ಲಿ ಒಂದೆರಡು ಪತ್ರಗಳಿಗೆ ಸಾಲಗಾರನಿಂದ ಸಾಲ ನೀಡವಾಗಲೇ ಇನ್ನಿತರ ಕಾಗದಪತ್ರಗಳೊಂದಿಗೆ ಮೊದಲೇ ಸಹಿ ಪಡೆದು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಸಮಯ ಬಂದಾಗ ಉಪಯೋಗಿಸಿಕೊಳ್ಳುವ ಎಂದು. ಸಾಲ ನೀಡುವ ಹೊತ್ತಿನಲ್ಲಿ ಗ್ರಾಹಕರು ಸಹಿ ಮಾಡಲು ಸಹಕರಿಸುತ್ತಾರೆ ಎನ್ನುವ ದೃಷ್ಟಿಯಲ್ಲಿ ಬ್ಯಾಂಕಿನವರು ಈ ಮಾರ್ಗವನ್ನು ಅನುಸರಿಸುತ್ತಾರೆ ಎನ್ನುವ ಆರೋಪವಿದೆ. ಇದಕ್ಕೆ ಮುಖ್ಯ ಕಾರಣ ಕಾರ್ಯ ಬಾಹುಳ್ಯದಿಂದಾಗಿ ಭವಿಷ್ಯದಲ್ಲಿ ಇಂಥ ಪತ್ರಗಳನ್ನು ತೆಗೆದುಕೊಳ್ಳದಿರುವ ಮತ್ತು ಒಮ್ಮೆ ಸಾಲ ಬಿಡುಗಡೆಯಾದ ಮೇಲೆ ಗ್ರಾಹಕರು ಇಂಥ ಪತ್ರಗಳಿಗೆ ಸಹಿಹಾಕಲು ಸಹಕರಿಸದಿರುವ ಸಾಧ್ಯತೆ ಮತ್ತು ಈ ನ್ಯೂನತೆಗಳಿಗಾಗಿ ಬ್ಯಾಂಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯ. ಇಂಥಹ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವುದರಿಂದ ಕೆಲವು ಸಾಲಗಾರರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದನ್ನು ತಪ್ಪಿಸಬಹುದು.
ಮೇಲು ನೋಟಕ್ಕೆ ಇದೊಂದು ಸಾಮಾನ್ಯ ಕಾಗದ ಪತ್ರ. ಬ್ಯಾಂಕುಗಳು ಸಾಲ ನೀಡುವಾಗ ತೆಗದೆಕೊಳ್ಳುವ ಹಲವು ಹತ್ತು ಕಾಗದ ಪತ್ರಗಳಲ್ಲಿ ಒಂದಾಗಿರುವುದಿಲ್ಲ. ಇದನ್ನು ಸಾಲ ನೀಡಿದ ನಂತರ ಒಂದು ನಿರ್ದಿಷ್ಟ ಅವಧಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ, ಇದನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದಿರುವುದರಿಂದ ಆಗುವ ಅನಾಹುತ ಮಾತ್ರ ವಿಪರೀತವಾಗಿರುತ್ತದೆ. ಬ್ಯಾಂಕುಗಳು ಮತ್ತು ಮ್ಯಾನೇಜರ್‌ಗಳು ಇಬ್ಬರೂ ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾರೆ.
– ನಿರಂಜನ