Advertisement
ಈ ನಾಯಕ ಯಾರು ಎಂಬುದು ಇಲ್ಲಿ ಮುಖ್ಯವಲ್ಲ. ನಾಯಕನ ಪರ ದಾಟಗಳು ಮುಖ್ಯ. ಒಂದು ರೀತಿಯ ದಾರಿದ್ರ್ಯ ಆತನ ಜೀವನವನ್ನು ಸುತ್ತುವರಿದಿದೆ. ಧನಕನಕಗಳ ಕೊರತೆಯೊಂದೇ ದಾರಿದ್ರ್ಯವಲ್ಲ. ಧನಕನಕಗಳಿದ್ದೂ, ಆಳುಗಳು, ಸಹಾಯಕರು, ಆಜ್ಞಾಧಾರಕರು ಇದ್ದೂ ಶೂನ್ಯ ಸ್ಥಿತಿ. ಇದ ಕ್ಕೆ ಕುಜ ದೋಷ ವೇ ಪ್ರಧಾನ ಕಾರಣ.ಇನ್ನು ಕುಜ ದೋಷ ಕ್ಕೆ ಸರ್ಪ, ಶನಿ, ಕ್ಷೀಣ ಚಂದ್ರರು ಇನ್ನಿಷ್ಟು ಕೆಂಡ ಸುರಿದು ಯಾತನೆಯ ಕೆಂಡಗಳು ಪ್ರಜ್ವಲಿಸುವಂತೆ ಮಾಡಿದ್ದಾರೆ.
ಸಂತಾನವೇ ಆಗದಿರುವುದು ಒಂದು ಬಾಧೆ. ಆದರೆ ಸಂತಾನ ಭಾಗ್ಯ ಇದ್ದೂ ಪುತ್ರನ, ಪುತ್ರಿಯ ಉಪ ಟಳಗಳನ್ನು ಎದುರಿಸುತ್ತಿರುವ ಕೋಟಿಗಟ್ಟಲೆ ಜನರಿದ್ದಾರೆ. ಶ್ರದ್ಧೆ, ಮೇಧಾ ಶಕ್ತಿ, ಯಶಸ್ಸು, ಪ್ರಜ್ಞಾ ಬ ಲ, ವಿದ್ಯೆ, ಬುದ್ಧಿ, ಸಂಪತ್ತು, ತೇಜಸ್ಸು, ಆರೋಗ್ಯ, ಆಯಸ್ಸು ಇತ್ಯಾದಿ ಎಲ್ಲಾ ಸಮೃದ್ಧಿಯ ದಿಕ್ಕಿನಲ್ಲಿ ಸ್ವಸ್ಥವಾಗಿದೆ ಎಂದು ತಿಳಿದು ಕೊಂಡ ಸರಿಯಾದ ಸಂದರ್ಭದಲ್ಲಿಯೇ ಪುತ್ರನ, ಪುತ್ರಿಯ ಉಪಟಳ ಶುರುವಾದಾಗ ಎಲ್ಲಾ ಯಶಸ್ಸುಗಳನ್ನು ಪಡೆದು ಏನು ಬಂತು? ಇಡೀ ಜೀವನದಲ್ಲಿ ಕಾಪಿಟ್ಟು ಕೊಂಡು ಬಂದ ವಂಶದ ಮರ್ಯಾದೆ, ವರ್ಚಸ್ಸು ಇತ್ಯಾದಿ ಬೀದಿಗೆ ಬಂದು ಇನ್ನಿಲ್ಲದ ತಾಪತ್ರಯಗಳ ಗೋಜ ಲಿಗೆ ಬದುಕನ್ನು ತಂದು ನಿಲ್ಲಿಸಬಹುದಾಗಿದೆ. ಏನೇ ಮಾಡಿದರೂ ಪುತ್ರನಿಗೋ, ಪುತ್ರಿ ಗೋ ತಂದೆ-ತಾಯಿಯನ್ನು ಬಿಟ್ಟು ಅನ್ಯ ರೇಹಿತವಾಗಿ, ಹಿತೈಷಿಗಳಾ ಗಿ ಕಾಣುತ್ತಾ ರೆ. ಎಂತೆಂಥ ಸಮರ್ಥ ಶಕ್ತಿ ಶಾಲಿ ಜನರು ಈ ಬಳಲಿಕೆಯನ್ನು ಪಡೆದಿಲ್ಲ? ಬಹು ಮನ್ನಣೆ ಪಡೆದ ವ್ಯಕ್ತಿಗಳು ತಮ್ಮ ಸಾರ್ವಜನಿಕ ಜೀವನದ ಯಶಸ್ಸಿನ ನಾಗಾಲೋಟದಲ್ಲಿ ಮುಗ್ಗರಿಸಿನಗೆ ಪಾಟಲಿಗೆ ಈಡಾದ ದ್ದು ಸಂತಾನವೇ ಶನಿಯಾಗಿ ಕಾಡಿದಾಗ. ಇದಕ್ಕೆ ಸಾವಿರಾರು ಉದಾಹರಣೆ ಕೊಡಬಹುದು. ಇವರ ಜಾತಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುಜನ ಬಾಧೆ ಅಪಾರಮಟ್ಟದ್ದಾಗಿರುತ್ತದೆ. ತಣ್ಣಗೆ ಹರಿತ ವಾದ ಚೂರಿಯೊಂದನ್ನು ಬೆನ್ನಿಗಿರಿಸಿ ಕುಜನು ವಿರೋಧಿಗಳ ಮೂಲಕ ತಂದೆ -ತಾಯಿಗಳಿಗೆ ಈ ಯಾತನೆ ಕೊಡುತ್ತಿರುತ್ತಾನೆ. ಯಾರ ಬಳಿ ಯೂ ಹೇಳಿಕೊಳ್ಳಲಾಗದು. ಬವಣೆಯನ್ನು ತಣ್ಣಗೆ ಒಳಗೇ ಅನುಭವಿಸಲೂ ಆಗದು. ಇಂಥ ಯಾತನೆ ದೇವರಿಗೇ ಪ್ರಿಯ.
Related Articles
ಯಾವುದೋಮಾಯೆಯು ಸರ್ರನೆ ವ್ಯಕ್ತಿಗಳನ್ನು ವಿವಾಹೇತರ ಬಾಹ್ಯ ಸಂಬಂಧಗಳಿಗೆ ತಳ್ಳಿ ಬಿಡುತ್ತವೆ. ಸುಸ್ಥಿತ ಸಂಯೋಜನೆ ಹೊಂದಿರದಿದ್ದಲ್ಲಿ ಕುಜ-ಶುಕ್ರ ರು ಇಂಥದ್ದೊದು ಯಾತ ನೆ ಗೆ ಒಬ್ಬ ವ್ಯಕ್ತಿಯನ್ನು ತಳ್ಳಿ ಬಿಡಬಹುದು. ಈಗ ದೇಶಾದ್ಯಂತ ಅತ್ಯಾಚಾರದ ಸಂಬಂಧವಾಗಿ ಬಹುದೊಡ್ಡ ಚರ್ಚೆ, ಹೆಚ್ಚು ಹೆಚ್ಚು ಸ್ಫೋಟಕ ಸುದ್ದಿಗಳು ಕೇಳಿ ಬರುತ್ತಿವೆ. ಕುಜ ಗ್ರಹದ ಉಪಟಳ ವೇ ಇರ ದೆ ಸಹ ಜ ವ ಲ್ಲದ ಲೈಂಗಿಕ ಹಗರಣಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಘಟಿಸಲಾರವು. ಪ್ರಾರಂಭದಲ್ಲಿ ಅತ್ಯಂತ ಮನೋಲ್ಲಾಸದ ಸಂಗತಿಯಾಗಿ ಏರ್ಪಡುವ ಲೈಂಗಿಕ ಸಂಪರ್ಕಗಳು ಕಾಲ ಕ್ರಮೇಣ ಬಾಯೆ¤ರೆದು ನುಂಗುವ ಸರ್ಪದ, ಹೆಬ್ಟಾವಿನ ದುರ್ಗಮ ಗುಹೆಗಳಾಗುತ್ತವೆ. ಕ್ಷಣ ಮಾತ್ರದ ವಿವೇಚನಾರಹಿತ ಅಚಾ ತುರ್ಯ ಜೀವನದ ಸುಖವನ್ನೇ ಆಪೋಶನ ಪಡೆದು ಬಿಡುತ್ತವೆ. ಇಳಿ ವಯಸ್ಸಿನಲ್ಲಿ ಎಷ್ಟೆಲ್ಲಾ ಪಾಡು ಗ ಳನ್ನು ಪಡುತ್ತಾ, ಬವಣೆ ಹೊಂದಿ ನರಳುತ್ತಿರುವ ವ್ಯಕ್ತಿಗಳಲ್ಲಿ ಶುಕ್ರ ಹಾಗೂ ಕುಜ, ಕುಜ ಹಾಗೂ ರಾಹು, ಕುಜ ಹಾಗೂ ಶನಿ ಗ್ರಹಗಳು ನಿರ್ದಿಷ್ಟ ಸುಯೋಜನೆ ಗೋ, ದುಷ್ಟದೋಷಕ್ಕೋ ಒಳಗಾದಾಗ ಪಡಿ ಪಾಟಲುಗಳಿಗೆ ಸುಲಭವಾಗಿ ಲೈಸೆನ್ಸ್ ಸಿಕ್ಕಿತು ಎಂದೇ ಅರ್ಥ.
Advertisement
ಭಾರ ತೀ ಯ ಚಿತ್ರ ರಂಗ ದ ಮೇರು ನ ಟ ನೊ ಬ್ಬ ಅನು ಭ ವಿ ಸು ತ್ತಿ ರು ವ ಕುಜ ಶುಕ್ರ ಯುತಿ ದೋಷ ಅಂತಿಂಥ ದ್ದ ಲ್ಲ. ತನ್ನ ಸೂಕ್ಷ್ಮ ವಾ ದ ಮಂಡ ನೆ, ತೂಕ ದ ಮಾ ತು, ವಾಗ್ಮಿ ಯಾ ಗಿ, ಎಷ್ಟೆ ಲ್ಲಾ ಕೋರ್ಟ್ ಕೇಸು ಗ ಳ ನ್ನು ಗೆದ್ದ ಬಹು ದೊ ಡ್ಡ ಲಾಯ ರ್ ಒಬ್ಬ ರು, ವೈಯ ಕ್ತಿ ಕ ಜೀವ ನ ದ ಲ್ಲಿ ಕುಜ ಶುಕ್ರ ಯುತಿ ದೋಷ ದಿಂದ ಪ ಟ್ಟ, ಪಡು ತ್ತಿ ರು ವ ಬವ ಣೆ ಅಂತಿಂಥ ದ್ದ ಲ್ಲ. ಈಗ ನಿಧ ನ ರಾ ಗಿ ರು ವ ಬಹು ಚಾ ಣಾ ಕ್ಷ, ಸೂಕ್ಷ್ಮ ಸಂವೇ ದ ನೆ ಯ, ಪರ ರಾ ಜ್ಯ ದ ಮುಖ್ಯ ಮಂತ್ರಿ ಯೊ ಬ್ಬ ರು ಜೀವ ನ ದ ಅಂತ್ಯ ದ ಲ್ಲಿ ಅನು ಭ ವಿ ಸಿ ದ ಮನೋ ವೇ ದ ನೆ ಗೆ ಆ ಸಂದ ರ್ಭ ದ ಲ್ಲಿ ಕೂಡಿ ಬಂದ ದೋಷ ಯು ಕ್ತ ಕುಜ ನ ದಶಾ ಕಾ ಲವೇ ಆದದ್ದು ಒಂದು ಆಕಸ್ಮಿಕವೇನಲ್ಲ. ಅಕ್ರಮ ದೈಹಿಕ ಸಂಬಂಧ, ಸ್ತ್ರೀ ಶಾಪ, ಸ್ತ್ರೀಯರಿಗೆ ಪುರುಷ ರೂಕ್ಷ ದೋಷ ಇತ್ಯಾದಿಗಳು ಇನ್ನಿಲ್ಲದ ಯಾತನೆಗಳ ಸುರಿಮಳೆಯನ್ನೇ ಸುರಿದಾವು.
ವೈವಾಹಿಕ ವಿಳಂಬ, ಬಾಳ ಸಂಗಾತಿಗಳ ಬವಣೆ ಇತ್ಯಾದಿಬದುಕು ಎಲ್ಲಾ ಘಟ್ಟದಲ್ಲೂ ಸೂಕ್ಷ್ಮವಾದ ಒಂದು ಪರೀಕ್ಷೆ ಇದ್ದಂತೆ. ಜಟಿಲವಾದ ಗಣಿತವಿ ದ್ದಂತೆ. ಹೀಗಾಗಿ ಆಚಾ ರ, ವಿಚಾರಗಳನ್ನು, ರೂಢಿಯಲ್ಲಿನ ಸಂವಿಧಾನವನ್ನು ಮೀರಿ ವರ್ತಿಸಬಾರದು. ಹಾಗೆ ಅತಿ ಕ್ರಮಿಸಿ, ದುರ್ವರ್ತನೆ ತೋರಿದರೆ ಒಂದು ಘಟ್ಟದಲ್ಲಿ ಯಶಸ್ಸು ಸಿಕ್ಕಂತೆ ಅನಿಸಿದರೂ, ಪರಿಸ್ಥಿತಿ ಕೈ ಮೀರಿದಾಗ ಬಳಲಿಕೆ ಕಟ್ಟಿಟ್ಟದ್ದು. ಕುಜ ದೋಷ ವಿವಾಹ ನೆರವೇರದಂತೆ ಮಾಡಬಹುದು. ವಿವಾಹವಾದರೂ ವೈವಾಹಿಕ ಸುಖಕ್ಕೆಸವ ಕಳಿ ತಲೆ ದೋರಬಹುದು. ಮನೆಯಲ್ಲಿಯೇ ಎಲ್ಲ ವೂ ಸರಿಯಿಲ್ಲದಿದ್ದರೆ ಹೊರಗಿನದನ್ನು ನಿಯಂತ್ರಿಸಲು ಕಷ್ಟವಾದೀತು. ಅವಹೇಳನ, ವ್ಯಂಗ್ಯ, ನಗೆ ಪಾಟಲುಗಳಿಗೆ ಗುರಿಯಾಗಬಹುದು. ಗಂಡ ಹೆಂಡತಿಯರ ನಡುವಣ ಅಸ ಮ ತೋಲ ನ ಸ್ಥಿತಿ ಮಕ್ಕ ಳ ಮನೋ ಬಲವನ್ನು ಕುಸಿಯುವಂತೆ ಮಾಡ ಬಹುದು. ಚಿಕ್ಕ ತಪ್ಪೂ ಬದು ಕ ನ್ನು ಹಾಳು ಮಾಡ ಬ ಹು ದು. ಇಂದಿ ನ ವಿವಾಹಗಳು ಬೇಗ ಮುರಿದು ಬೀಳುತ್ತಿವೆ. ತಂದೆ-ತಾಯಿ ಗಳ ಸ್ವೇಚ್ಛೆ ಮಕ್ಕಳನ್ನು ಮಾನಸಿಕ ಯಾತನೆಗೆ ತಳ್ಳುತ್ತವೆ. ತಲೆ ಮಾರಿನ ಪ್ರಶ್ನೆ ನಿತ್ಯದ ಬವಣೆಗಳಾಗಿರಾಷ್ಟ್ರೀ ಯ ಸಮ ಸ್ಯೆಗಳಿಗೆ ಮೂಲವಾದೀತು. ಎಚ್ಚರ ಇರಲಿ. ಅನಂತ ಶಾಸ್ತ್ರಿ