Advertisement

ಕ್ಷೇತ್ರಕ್ಕೆ ಮಂಜೂರಾದ 100 ಕೋಟಿ ಏನಾಯ್ತು?

02:58 PM Apr 30, 2018 | Team Udayavani |

ನಂಜನಗೂಡು: ಇಲ್ಲಿನ ಉಪಚುನಾವಣಾ ಪೂರ್ವದಲ್ಲಿ ಸರ್ಕಾರದ ಮಂತ್ರಿ ಮಹೋದಯರು ಹೇಳಿದ ಪ್ರಕಾರ ಕ್ಷೇತ್ರಕ್ಕೆ ಮಂಜೂರಾದ 1000 ಕೋಟಿ ರೂ. ಏನಾಯಿತು ಎಂದು ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್‌ ಪ್ರಶ್ನಿಸಿದರು.

Advertisement

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಪಟ್ಟಣದ ವ್ಯಾಪ್ತಿಯ ಶಂಕರಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಯೂತ್‌ ಕ್ಲಬ್‌ ಅಧ್ಯಕ್ಷ  ನಾಗರಾಜು (ಗಾಂಧಿ) ಹಾಗೂ ಸದಸ್ಯರಾದ ಕುಮಾರ, ಉಮೇಶ, ಅರುಣಕುಮಾರ, ನಂಜಪ್ಪ ಮಧುಕುಮಾರ ಸೇರಿದಂತೆ ಹಲವಾರು ಸದಸ್ಯರನ್ನು ಭಾನುವಾರ ಪಕ್ಷದ ಚುನಾವಣಾ ಕಾರ್ಯಾಲಯದಲ್ಲಿ ಸ್ವಾಗತಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ತಮ್ಮ ಮಾವ ಶ್ರೀನಿವಾಸ್‌ ಪ್ರಸಾದ್‌ ಸಚಿವರಾಗಿದ್ದಾಗ ಮಂಜೂರು ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ಬಿಟ್ಟರೆ ಬೇರೆನೂ ಅಭಿವೃದ್ಧಿ ಕಾಣುತ್ತಿಲ್ಲ. ಕ್ಷೇತ್ರದ ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಹಾಗೂ ಸಚಿವರೆಲ್ಲ ಅಂದು ಹೇಳಿದ್ದು ಸುಳ್ಳೇ ಇರಬೇಕು. ಇಲ್ಲವಾದಲ್ಲಿ ಬಿಡುಗಡೆಯಾದ ಸಹಸ್ರಾರು ಕೋಟಿ ರೂ. ಕಾಮಗಾರಿ ಕಾಣಬೇಕಾಗಿತ್ತಲ್ಲ ಎಂದರು.

ಉಪಚುನಾವಣೆಯ ಪೂರ್ವದಲ್ಲಿ ಜನರನ್ನು ಮರಳು ಮಾಡಲು ಕಿತ್ತು ಹಾಕಿದ ನಗರಸಭೆಯ ಅತೀ ಮುಖ್ಯ ರಸ್ತೆಯನ್ನೇ ಇನ್ನೂ ದುರಸ್ತಿ ಮಾಡಲಾಗಿಲ್ಲ. ನಮ್ಮ ಶಾಸಕರ 11 ತಿಂಗಳ ಅಭಿವೃದ್ಧಿ ಏನು ಎಂಬುದನ್ನು ತಿಳಿಯಲು ಈ ರಸ್ತೆಯಲ್ಲಿ ಓಡಾಡಿದರೆ ಸಾಕು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಸೋಮಣ್ಣ, ಮಹೇಶ, ಪುಟ್ಟರಾಜು, ರಂಗಸ್ವಾಮಿ, ವಕೀಲ ಬೊಮ್ಮಾಯಿ, ಪಟ್ಟಣಾಧ್ಯಕ್ಷ ಬಾಲಚಂದ್ರು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next