Advertisement

ಕೋವಿಡ್ ಸಮಯದಲ್ಲಿ ಮನಮೋಹನ್‌ ಸಿಂಗ್ ಪಿಎಂ ಆಗಿದ್ದರೆ ಏನಾಗಿರುತ್ತಿತ್ತೋ: ಅರುಣ್ ಸಿಂಗ್ ಲೇವಡಿ

04:48 PM Sep 19, 2021 | Team Udayavani |

ದಾವಣಗೆರೆ: ಕೋವಿಡ್-19 ಸಂದರ್ಭದಲ್ಲಿ ಏನಾದರೂ ಮನಮೋಹನ್‌ ಸಿಂಗ್ ಅವರೇನಾದರೂ ಪ್ರಧಾನಿಯಾಗಿದ್ದರೆ ದೇಶದ ಪರಿಸ್ಥಿತಿ ಏನಾಗಿರುತ್ತಿತ್ತೋ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಲೇವಡಿ ಮಾಡಿದರು.

Advertisement

ಭಾನುವಾರ ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್‍ಯಕಾರಿಣಿಯಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕಾಕರಣ ಪ್ರಾರಂಭಿಸಿದ ಪ್ರಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದವರು. ಈಗ ಅವರೇ ಲಸಿಕೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನವರಿಗೆ ಜನಪರವಾದ ಯಾವುದೇ ವಿಚಾರಗಳೇ ಇಲ್ಲ ಎಂದು ಛೇಡಿಸಿದರು.

ಕಾಂಗ್ರೆಸ್ ದೇಶದ ಅಭಿವೃದ್ಧಿ ಒಳಗೊಂಡಂತೆ ಪ್ರತಿಯೊಂದು ವಿಷಯದಲ್ಲೂ ನಕರಾತ್ಮಕ ರಾಜಕಾರಣ ಮಾಡುತ್ತಿದೆ ಎಂದು ಅರುಣ್‌ ಸಿಂಗ್ ವ್ಯಂಗ್ಯವಾಡಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ಎತ್ತುಗಳೆಲ್ಲವೂ ಕಸಾಯಿಖಾನೆ ಸೇರುತ್ತಿದ್ದವು: ನಳಿನ್ ಕಟೀಲ್

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್… ಮೂಲ ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಬಿಜೆಪಿ ಕೇಂದ್ರದ ಸಂಪುಟದಲ್ಲಿ 20 ಎಸ್ಸಿ-ಎಸ್ಟಿ. 17 ಹಿಂದುಳಿದ ವರ್ಗದವರನ್ನು ಸಚಿವರನ್ನಾಗಿ ಮಾಡಿದೆ. ಸಂಸತ್‌ನಲ್ಲಿ ನೂತನ ಸಚಿವರನ್ನ ಪರಿಚಯ ಮಾಡುವುದಕ್ಕೂ ಕಾಂಗ್ರೆಸ್ ಅಡ್ಡಿಪಡಿಸಿತು ಎಂದು ದೂರಿದರು.

Advertisement

ಕಾಂಗ್ರೆಸ್ ಈಗಾಗಲೇ ವಿನಾಶದ ಅಂಚಿನಲ್ಲಿದೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ನಡುವೆ ಜಗಳ ನಡೆಯುತ್ತಿದೆ. ಛತ್ತೀಸ್‌ಘಡ ದಲ್ಲೂ ಅದೇ ಪರಿಸ್ಥಿತಿ ಇದೆ. ಕಾಂಗ್ರೆಸ್ ನಕರಾತ್ಮಕ ರಾಜಕಾರಣ ಮಾಡುತ್ತಿದ್ದರೆ ಬಿಜೆಪಿ ಸದಾ ಸಕಾರತ್ಮಕ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next