Advertisement

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

06:28 PM Dec 01, 2022 | Team Udayavani |

1. ಐಟಿ ರಿಟರ್ನ್ಸ್ ತಿದ್ದುಪಡಿ
ನೀವು 2021-22ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದರೂ, ಅದರಲ್ಲಿ ತಪ್ಪುಗಳು ಕಂಡುಬಂದಿದ್ದರೆ, ಪರಿಷ್ಕೃತ ರಿಟರ್ನ್ಸ್ ಫೈಲ್‌ ಮಾಡಲು ಡಿ.31 ಕೊನೆಯ ದಿನ. ನಂತರ ಸಲ್ಲಿಸಿದರೆ ತಪ್ಪನ್ನು ಸರಿಪಡಿಸಲಾಗುವುದಿಲ್ಲ. ಆಗ, ನಿಮಗೆ ಐಟಿ ಇಲಾಖೆಯಿಂದ ನೋಟಿಸ್‌ ಜಾರಿಯಾಗುವ ಸಾಧ್ಯತೆಯಿರುತ್ತದೆ.

Advertisement

2. ಮುಂಗಡ ತೆರಿಗೆ
2022-23ರ ವಿತ್ತ ವರ್ಷದ ಮುಂಗಡ ತೆರಿಗೆಯ ಕೊನೆಯ ಕಂತು ಪಾವತಿಸಲು ಡಿ.15 ಕೊನೆಯ ದಿನ. ಯಾರ ವಾರ್ಷಿಕ ಆದಾಯ ತೆರಿಗೆ 10 ಸಾವಿರ ರೂ.ಗಿಂತ ಹೆಚ್ಚಿರುತ್ತದೋ, ಅವರೆಲ್ಲರೂ ಮುಂಗಡ ತೆರಿಗೆ ಪಾವತಿಸಲೇಬೇಕು. 15ರೊಳಗೆ ಈ ತೆರಿಗೆಯ ಶೇ.75ರಷ್ಟು ಮೊತ್ತವನ್ನು ಜಮೆ ಮಾಡದಿದ್ದರೆ, ಅಂಥವರಿಗೆ ಶೇ.1ರಷ್ಟು ಬಡ್ಡಿ ವಿಧಿಸಲಾಗುತ್ತದೆ.

3. ರೈಲು ಸಮಯ ಬದಲು:
ಡಿಸೆಂಬರ್‌ ತಿಂಗಳಲ್ಲಿ ಚಳಿ ಮತ್ತು ಮಂಜು ಹೆಚ್ಚಿರುವ ಕಾರಣ, ಹಲವಾರು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಇವೆ. ಕೆಲವು ರೈಲುಗಳ ಸಂಚಾರವನ್ನೇ ರದ್ದು ಮಾಡಲಾಗುತ್ತದೆ. ಹೀಗಾಗಿ, ಎಲ್ಲೇ ಪ್ರಯಾಣ ಮಾಡುವುದಿದ್ದರೂ ಮುಂಚಿತವಾಗಿ ಈ ಕುರಿತು ಪ್ಲ್ರಾನ್‌ ಮಾಡಿಕೊಳ್ಳಿ.

4. ಸಿಲಿಂಡರ್‌ ದರ ಪರಿಷ್ಕರಣೆ:
ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆ ಮಾಡುತ್ತವೆ. ಅದರಂತೆ, ಇಂದು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಾಗಲೂಬಹುದು, ಕಡಿಮೆಯಾಗಲೂಬಹುದು. ಕಳೆದ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ ರೇಟ್‌ ಇಳಿಕೆಯಾಗಿತ್ತು.

5. ಬ್ಯಾಂಕುಗಳಿಗೆ ಭರ್ಜರಿ ರಜೆ:
ಈ ತಿಂಗಳು ಬ್ಯಾಂಕುಗಳು 13 ದಿನಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ. ಕ್ರಿಸ್‌ಮಸ್‌ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ 13 ದಿನ ಬ್ಯಾಂಕ್‌ ರಜೆ ಇರಲಿದೆ.

Advertisement

6. ಹಣ ವಿತ್‌ಡ್ರಾಗೆ ಒಟಿಪಿ
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ)ನ ಗ್ರಾಹಕರು ಇನ್ನು ಎಟಿಎಂನಲ್ಲಿ ತಮ್ಮ ಕಾರ್ಡ್‌ ಹಾಕುತ್ತಿದ್ದಂತೆಯೇ, ನಿಮ್ಮ ಮೊಬೈಲ್‌ ಸಂಖ್ಯೆಗೆ ಒಂದು ಒಟಿಪಿ(ಒನ್‌ ಟೈಂ ಪಾಸ್‌ವರ್ಡ್‌) ಬರುತ್ತದೆ. ಆ ಒಟಿಪಿ ನಮೂದು ಮಾಡಿದ ಬಳಿಕವಷ್ಟೇ ನೀವು ಹಣ ವಿತ್‌ಡ್ರಾ ಮಾಡಬಹುದು. ವಂಚನೆ ತಡೆ ನಿಟ್ಟಿನಲ್ಲಿ ಬ್ಯಾಂಕ್‌ ಈ ನಿಯಮ ಡಿ.1ರಿಂದ ಜಾರಿ ಮಾಡುತ್ತಿದೆ.

7. ಲೈಫ್ ಸರ್ಟಿಫಿಕೇಟ್‌:
ಪಿಂಚಣಿದಾರರು ತಮ್ಮ ಲೈಫ್ ಸರ್ಟಿಫಿಕೇಟ್‌ ಸಲ್ಲಿಸಲು ನ.30 ಕೊನೆಯ ದಿನ. ಇನ್ನೂ ನೀವು ಜೀವಿತ ಪ್ರಮಾಣಪತ್ರ ಸಲ್ಲಿಸಿಲ್ಲವೆಂದಾದರೆ, ನಿಮಗೆ ಬರುವ ಪಿಂಚಣಿ ಸ್ಥಗಿತಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next