Advertisement

ಗಾಲ್ವಾನ್‌ ತೀರದ ಆ ಕರಾಳ 8ಗಂಟೆ: ಭಾರತದ ಜಾಗಕ್ಕೇ ನುಗ್ಗಿ ಸೊಕ್ಕು ಪ್ರದರ್ಶಿಸಿದ ಡ್ರ್ಯಾಗನ್‌

02:50 PM Jun 18, 2020 | Hari Prasad |

ಲಡಾಖ್‌: ಗಾಲ್ವಾನ್‌ ನದಿ ತೀರದಲ್ಲಿ ಸೋಮವಾರ ಚೀನೀ ಸೈನಿಕರ ವರ್ತನೆಯೇ ವಿಚಿತ್ರವಾಗಿತ್ತು.

Advertisement

ಪೀಪಲ್ಸ್‌ ಲಿಬರೇಶನ್‌ ಆರ್ಮಿಯ ತಂಡಗಳು ಕಬ್ಬಿಣದ ರಾಡು, ಮುಳ್ಳುತಂತಿ ಸುತ್ತಿದ ಕೋಲುಗಳಿಂದ 16 ಬಿಹಾರ್‌ ರೆಜಿಮೆಂಟ್‌ ಯೋಧರ ಮೇಲೆ ಅಮಾನುಷ ದಾಳಿ ನಡೆಸಿದವು ಎಂದು ದಾಳಿ ವೇಳೆ ಬದುಕುಳಿದು ಲೇಹ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ಶಸ್ತ್ರಾಸ್ತ್ರ ಇಟ್ಟುಕೊಂಡಿರದ ನಾವು ಪಿಎಲ್‌ಎ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದೆವು. ಕೆಲವರು ಜೀವ ಉಳಿಸಿಕೊಳ್ಳಲು ಗಾಲ್ವಾನ್‌ ನದಿಗೆ ಹಾರಿ ಪ್ರಾಣ­­­ಬಿಟ್ಟರು. ಕಣಿವೆಗಳ ಹಿಂದೆ ಓಡಿಹೋದವ­ರನ್ನೂ ಚೀನೀ ಸೈನಿಕರು ಬಿಡಲಿಲ್ಲ’ ಎಂದು ಹೇಳಿದ್ದಾರೆ.

110 ಮಂದಿಗೆ ಗಾಯ: ಚೀನೀ ಸೈನಿಕರ ಪೈಶಾಚಿಕ ಕೃತ್ಯದಿಂದಾಗಿ ಕನಿಷ್ಠ 24 ಭಾರತೀಯ ಯೋಧರಿಗೆ ಗಂಭೀರ ಗಾಯಗಳಾಗಿವೆ. 110ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ಅಗತ್ಯವಿದೆ.

ಚೀನ ವಿಲವಿಲ: ಗಾಲ್ವಾನ್‌ ತೀರದಲ್ಲಿ ಮಂಗಳವಾರ ಹತ್ತಾರು ಹೆಲಿಕಾಪ್ಟರ್‌ಗಳು ಮತ್ತೆ ಮತ್ತೆ ಹಾರಾಡಿವೆ. ಭಾರತೀಯ ಯೋಧರ ಪ್ರಹಾರಕ್ಕೆ ಪ್ರಾಣಬಿಟ್ಟ, ಗಂಭೀರ ಗಾಯಗೊಂಡ ತಮ್ಮ ಸೈನಿಕರನ್ನು ಚೀನ ಹೆಲಿಕಾಪ್ಟರ್‌ಗಳ ಮೂಲಕ ಮಿಲಿಟರಿ ಆಸ್ಪತ್ರೆಗಳಿಗೆ ಸಾಗಿಸಿದೆ. ಘರ್ಷಣೆ ವೇಳೆ ಚೀನದ 43ಕ್ಕೂ ಅಧಿಕ ಸೈನಿಕರು ಪ್ರಾಣಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಗಲಭೆಗೆ ನೈಜ ಕಾರಣವೇನು?
ಕರ್ನಲ್‌ ಸಂತೋಷ್‌ ಬಾಬು ನೇತೃತ್ವದ ಭಾರತೀಯ ಸೈನಿಕರ ತಂಡ ಗಸ್ತು ಪಾಯಿಂಟ್‌ 14ರ ಬಳಿ ಚೀನ ಅಕ್ರಮವಾಗಿ ಹೂಡಿದ್ದ ಟೆಂಟ್‌ ಅನ್ನು ಕಿತ್ತು ಹಾಕಿತ್ತು. ಆ ಬಳಿಕ ಚುಶುಲ್‌ ಮೀಟಿಂಗ್‌ ಪಾಯಿಂಟ್‌ನಲ್ಲಿ ನಡೆದ ಸಭೆಯಲ್ಲಿ ಎರಡೂ ಕಡೆಯವರೂ ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವ ಬಗ್ಗೆ ಒಪ್ಪಿಕೊಂಡಿದ್ದವು.
ಹೀಗಿದ್ದೂ ಚೀನ ಭಾರತದ ಭಾಗವಾಗಿರುವ ಗಸ್ತು ಪಾಯಿಂಟ್‌ 14ರಲ್ಲಿ ಹೊಸ ಡೇರೆಯನ್ನು ಅಕ್ರಮ­ವಾಗಿ ಹೂಡಿತ್ತು.

ಜೂ.6ರ ಕಮಾಂಡರ್‌ಗಳ ಸಭೆ­ಯಲ್ಲೂ ಚೀನ ‘ಪಿ-14 ಪ್ರದೇಶದಲ್ಲಿ ನಮ್ಮ ಟೆಂಟ್‌ ಅನ್ನು ಸುಟ್ಟಿದ್ದೀರಿ. ಯಾವುದೇ ಕಾರಣಕ್ಕೂ ನಾವು ಅಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ’ ಎಂದೇ ಮೊಂಡು ವಾದಿಸಿತ್ತು. ಚೀನ ಟೆಂಟ್‌ ತೆರವುಗೊಳಿಸಿದೆಯೇ ಇಲ್ಲವೇ ಎಂದು ತೆಲಂಗಾಣ ಮೂಲದ ಕರ್ನಲ್‌ ಸಂತೋಷ್‌ ಬಾಬು ನೇತೃತ್ವದ 16 ಬಿಹಾರ್‌ ರೆಜಿಮೆಂಟ್‌ ಯೋಧರು ನಿತ್ಯ ಪರಿಶೀಲನೆ ನಡೆಸುತ್ತಿದ್ದರು. ಇವರ ಬರುವಿಕೆಗಾಗಿ ಹೊಂಚು ಹಾಕಿ ಕುಳಿತಿದ್ದ ಮಾರಕಾಸ್ತ್ರ­ಸಜ್ಜಿತ ಚೀನೀ ಸೈನಿಕರು ನಿಶ್ಶಸ್ತ್ರ ಭಾರತೀಯ ಯೋಧರ ಮೇಲೆರಗಿ ಹೇಡಿಗಳಂತೆ ವರ್ತಿಸಿದ್ದಾರೆ.

ರಾಹುಲ್‌ ವಾಗ್ಧಾಳಿ
ಚೀನ ಸೈನಿಕರ ದಾಳಿ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ. ‘ಪ್ರಧಾನಿ ಏಕೆ ಮೌನವಾಗಿ­ದ್ದಾರೆ? ಎಲ್ಲಿ ಅಡಗಿದ್ದಾರೆ? ಸಾಕು, ಇದು ಸಾಕು. ಗಡಿಯಲ್ಲಿ ಏನಾಗು­ತ್ತಿದೆ ಎಂಬ ಸಂಗತಿ ನಮಗೆ ತಿಳಿಯ­ಬೇಕು’ ಎಂದು ಟ್ವಿಟ್ಟರಿನಲ್ಲಿ ಹೇಳಿ­ದ್ದಾರೆ. ‘ನಮ್ಮ ಯೋಧ­ರನ್ನು ಕೊಲ್ಲಲು ಚೀನಕ್ಕೆ ಎಷ್ಟು ಧೈರ್ಯ? ನಮ್ಮ ನೆಲವನ್ನು ವಶಪಡಿಸಿ­ಕೊಳ್ಳಲು ನಿಮ­ಗೆಷ್ಟು ಧೈರ್ಯ?’ ಎಂದು ಆಕ್ರೋಶ ಹೊರಹಾಕಿದ್ದಾರೆ.

ವೀರ ಮರಣ ಅಪ್ಪಿದ ಭಾರತೀಯ ಯೋಧರು
1. ಕರ್ನಲ್‌ ಬಿ. ಸಂತೋಷ್‌ ಬಾಬು
2. ಸುಭೇದಾರ್‌ ನುದುರಾಮ್‌ ಸೊರೆನ್‌
3. ನ.ಸು. ಮನ್‌ದೀಪ್‌ ಸಿಂಗ್‌
4. ನ.ಸು. ಸಟ್ನಾಂ ಸಿಂಗ್‌
5. ಹವಾಲ್ದಾರ್‌ ಕೆ. ಪಳನಿ
6. ಹವಾಲ್ದಾರ್‌ ಸುನಿಲ್‌ ಕುಮಾರ್‌
7. ಹವಾಲ್ದಾರ್‌ ಬಿಪುಲ್‌ ರಾಯ್‌
8. ನಾಯಕ್‌ ದೀಪಕ್‌ ಕುಮಾರ್‌
9. ಸಿಪಾಯಿ ರಾಜೇಶ್‌ ಒರಾಂಗ್‌
10. ಸಿಪಾಯಿ ಕುಂದನ್‌ ಕುಮಾರ್‌ ಓಝಾ
11. ಸಿಪಾಯಿ ಗಣೇಶ್‌ ರಾಮ್‌
12. ಸಿಪಾಯಿ ಚಂದ್ರಕಾಂತ ಪ್ರಧಾನ್‌
13. ಸಿಪಾಯಿ ಅಂಕುಶ್‌
14. ಸಿಪಾಯಿ ಗುರ್ಬಿಂದರ್‌
15. ಸಿಪಾಯಿ ಗುರುತೇಜ್‌ ಸಿಂಗ್‌
16. ಸಿಪಾಯಿ ಚಂದನ್‌ ಕುಮಾರ್‌
17. ಸಿಪಾಯಿ ಕುಂದನ್‌ ಕುಮಾರ್‌
18. ಸಿಪಾಯಿ ಅಮನ್‌ ಕುಮಾರ್‌
19. ಸಿಪಾಯಿ ಜೈ ಕಿಶೋರ್‌ ಸಿಂಗ್‌
20. ಸಿಪಾಯಿ ಗಣೇಶ್‌ ಹನ್ಸಾ

Advertisement

Udayavani is now on Telegram. Click here to join our channel and stay updated with the latest news.

Next