Advertisement
ಇಂದು ಜಗತ್ತು ಡಿಜಿಟಲೀಕರಣಗೊಂಡಿದೆ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಸಾಮಾಜಿಕ ಜಾಲತಾಣ, ಗೂಗಲ್ ಮತ್ತು ಇತರ ವೆಬ್ ಬ್ರೌಸರ್ ಗಳನ್ನು ಅವಲಂಬಿಸಿದ್ದೇವೆ. ಡಿಜಿಟಲ್ ಲೋಕದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ AI (ಆರ್ಟಿಫಿಶೀಯಲ್ ಇಂಟಲಿಜೆನ್ಸ್) ಅಥವಾ ಕೃತಕ ಬುದ್ಧಿಮತ್ತೆ ಹೆಸರು ಪ್ರತಿನಿತ್ಯ ಕೇಳಿಬರುತ್ತಿದೆ. ಏನಿದು ತಂತ್ರಜ್ಞಾನ ? ಇದರ ಕಾರ್ಯವೇನು ? ಮುಂದೆ ಓದಿ
Advertisement
ಕೃತಕ ಬುದ್ಧಿಮತ್ತೆಯಿಂದ ನಿರುದ್ಯೋಗದ ಪ್ರಮಾಣ ಹೆಚ್ಚಳ ?: ಅಮೇರಿಕ ಪ್ರತಿವರ್ಷ 5 ಮಿಲಿಯನ್ ಉದ್ಯೋಗಗಳನ್ನು ತಂತ್ರಜ್ಞಾನ ಮತ್ತು ವ್ಯಾಪಾರದಲ್ಲಾಗುವ ಬದಲಾವಣೆಗಳಿಂದ ಕಳೆದುಕೊಳ್ಳುತ್ತಿದ್ದು, 23 ಮಿಲಿಯನ್ ನಷ್ಟು ಹೊಸ ಉದ್ಯೋಗಗಳನ್ನು ಅದೇ ಕಾಲಾವಧಿಯಲ್ಲಿ ಸೃಷ್ಟಿಸಿ ಹೊಸ ದಾಖಲೆ ನಿರ್ಮಿಸುತ್ತಿದೆ. ಮೆಕಿನ್ಸೆ ಜಾಗತಿಕ ಸಂಸ್ಥೆಯ ವರದಿಯಂತೆ 2030ರ ಸುಮಾರಿಗೆ ಸರಿಸುಮಾರು 15 ಪ್ರತಿಶತದಷ್ಟು ಜಾಗತಿಕ ಕಾರ್ಮಿಕ ವರ್ಗ ಕೃತಕ ಬುದ್ಧಿಮತ್ತೆ ಅನುಷ್ಠಾನದಿಂದ ಸ್ಥಾನಪಲ್ಲಟಗೊಳ್ಳಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ: ಇಂದು ಫೇಸ್ ಬುಕ್, ಯೂಟ್ಯೂಬ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಮುಂತಾದವುಗಳಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಶೋಶಿಯಲ್ ಮೀಡಿಯಾಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಗಳನ್ನು ಸ್ವಯಂಕೃತವಾಗಿ ನಿರ್ವಹಿಸುತ್ತದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಲೇ ಇರುತ್ತದೆ. ಗಮನಿಸಬೇಕಾದ ಅಂಶವೆಂದರೆ 2018ರಲ್ಲಿ ಕೇವಲ 633 ಮಿಲಿಯನ್ ಡಾಲರ್ ಮೌಲ್ಯವಿದ್ದ ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಮಾರುಕಟ್ಟೆ, 2023 ರ ವೇಳೆಗೆ 2.1 ಬಿಲಯನ್ ಡಾಲರ್ ಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಕೃತಕ ಬುದ್ದಿಮತ್ತೆ ಎನ್ನುವುದು ಯಂತ್ರಗಳನ್ನು ಬುದ್ದಿವಂತರನ್ನಾಗಿಸುವ ವಿಜ್ಞಾನ. ನಮ್ಮ ಸ್ಮಾರ್ಟ್ ಫೋನ್ ಗಳು ಕೂಡ AI ಗಳಿಂದಲೇ ನಿಯಂತ್ರಿಸಲ್ಪಡುತ್ತಿದೆ. ಮುಖ್ಯವಾಗಿ ವಾಯ್ಸ್ ಅಸಿಸ್ಟೆಂಟ್ ಹಾಗೂ ರಿಯಲ್ ಟೈಮ್ ನ್ಯಾವಿಗೇಷನ್. ಅಮೆಜಾನ್ ಹಾಗೂ ನೆಟ್ ಫ್ಲಿಕ್ಸ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಶಿಫಾರಸ್ಸು ಮಾಡಲು ಆರ್ಟಿಫೀಶೀಯಲ್ ಇಂಟಲಿಜೆನ್ಸ್ ಗಳನ್ನು ಬಳಸುತ್ತಿದೆ. ಜಿಮೇಲ್ ಕೂಡ ಇದರ ಪ್ರಯೋಗದಲ್ಲಿ ನಿರತವಾಗಿದೆ.
ಆರ್ಟಿಫೀಶೀಯಲ್ ಇಂಟಲಿಜೆನ್ಸ್ ಡೇಟಾಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ನಾವು ಏನನ್ನು ಸರ್ಚ್ ಮಾಡುತ್ತೇವೆ, ವಾಯ್ಸ್ ಅಸಿಸ್ಟೆಂಟ್ ಅನ್ನು ಬಳಸಿಕೊಳ್ಳುವ ರೀತಿ, ಇಮೇಲ್ ನ್ನು ಉಪಯೋಗಿಸುವ ಮಾದರಿ, ಯಾವೆಲ್ಲಾ ಸೋಶಿಯಲ್ ಮೀಡಿಯಾ ಗ್ರೂಪ್ ಗಳಿಗೆ ಜಾಯಿನ್ ಆಗಿದ್ದೀರಾ ? ಅಮೇಜಾನ್, ಫ್ಲಿಫ್ ಕಾರ್ಟ್ ಮುಂತಾದವುಗಳ ಮೂಲಕ ಏನನ್ನು ಕೊಂಡುಕೊಂಡಿದ್ದೀರಾ ? ಮುಂತಾದವೆಲ್ಲಾ ಕೃತಕ ಬುದ್ದಿಮತ್ತೆ ದಾಖಲಿಸಿಕೊಂಡು ಅದರ ಪ್ರಕಾರ ಕಾರ್ಯನಿರ್ವಹಿಸುತ್ತದೆ.
ಇಂದು ಸಾಮಾಜಿಕ ಜಾಲತಾಣಗಳು ಪ್ರತಿದಿನವೂ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಇದರಲ್ಲಿ ಫೇಸ್ ಬುಕ್ ಸುಧಾರಿತ ಆರ್ಟಿಫೀಶೀಯಲ್ ಇಂಟಲಿಜೆನ್ಸ್ ಸಿಸ್ಟಂ ಬಳಸುತ್ತಿದ್ದು, ಜಾಹೀರಾತು ಮತ್ತು ಟಾರ್ಗೆಟ್ ಯೂಸರ್ ಗಳಿಗಾಗಿ, ಹಾಗೂ ಫೋಟೋಗಳಲ್ಲಿನ ವ್ಯಕ್ತಿಗಳನ್ನು ಗುರುತಿಸಲು ಬಳಸುತ್ತಿದೆ. ಇನ್ ಸ್ಟಾಗ್ರಾಂ ನಲ್ಲಿ ವಿಡಿಯೋಗಳನ್ನು ಗುರುತಿಸಲೆಂದೇ ಆರ್ಟಿಫೀಶೀಯಲ್ ಇಂಟಲಿಜೆನ್ಸ್ ಗಳನ್ನು ಉಪಯೋಗಿಸಲಾಗುತ್ತಿದೆ.
ಲಿಂಕ್ಡ್ ಇನ್ ನಲ್ಲಿ ಉದ್ಯೋಗಗಳನ್ನು ಶಿಫಾರಸ್ಸು ಮಾಡಲು ಏಐ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಇದು ಆರ್ಟಿಫೀಶೀಯಲ್ ಇಂಟಲಿಜೆನ್ಸ್ ಬಳಸುವ ಕುರಿತಾದ ಕೆಲವು ಉದಾಹರಣೆಗಳಾಗಿದ್ದು, ಇಂದು ಪ್ರತಿಯೊಂದು ಶೋಶಿಯಲ್ ಮಿಡಿಯಾ ಫ್ಲ್ಯಾಟ್ ಫಾರ್ಮ್ ಹಾಗೂ ಪೋಸ್ಟ್ ಗಳನ್ನು ಏಐ ನಿಯಂತ್ರಿಸುತ್ತಿದೆ ಎಂದರೆ ತಪ್ಪಾಗಲಾರದು.
ಆರ್ಟಿಫೀಶೀಯಲ್ ಇಂಟಲಿಜೆನ್ಸ್ ಮೂಲಕ ಸಾಮಾಜಿಕ ಜಾಲತಾಣ ಸಂಸ್ಥೆಗಳು, ಡೇಟಾಗಳ ವಿಶ್ಲೇಷಣೆ, ಟ್ರೆಂಡಿಂಗ್ ವಿಚಾರಗಳು, ಹ್ಯಾಶ್ ಟ್ಯಾಗ್ ಬಳಕೆ, ಬಳಕೆದಾರರ ವರ್ತನೆ(ಯೂಸರ್ ಬಿಹೇವಿಯರ್), ಮುಂತಾದವುಗಳನ್ನು ತಿಳಿದುಕೊಳ್ಳುತ್ತದೆ. ಮಾತ್ರವಲ್ಲದೆ ಈ ತಂತ್ರಜ್ಞಾನ ಪೋಸ್ಟ್, ಕಮೆಂಟ್, ಶೇರ್ ಸೇರಿದಂತೆ ಪ್ರತಿಯೊಂದನ್ನು ಗಮನಿಸಿ, ಅಗತ್ಯಬಿದ್ದರೆ ನಿಯಂತ್ರಿಸುವ ಕಾರ್ಯವನ್ನು ಕೂಡ ಮಾಡುತ್ತದೆ. ಒಟ್ಟಾರೆಯಾಗಿ ಇಂದು ಸಾಮಾಜಿಕ ಜಾಲತಾಣಗಳ ಮಾರುಕಟ್ಟೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಆರ್ಟಿಫೀಶೀಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಪರಿಣಾಮಕಾರಿಯಾಗಿದೆ.