Advertisement

ವಸ್ತುನಿಷ್ಠ ಇತಿಹಾಸ ಅಧ್ಯಯನ ಟಿಪ್ಪು ಬಗ್ಗೆ ಹೇಳುವುದೇನು?

05:19 AM Nov 10, 2017 | |

ಟಿಪ್ಪು ಸುಲ್ತಾನನಿಗಿಂತ ಎರಡು ಶತಮಾನ ಹಿಂದೆಯೇ ಅಸ್ತಿತ್ವದಲ್ಲಿದ 2ನೇ ಇಬ್ರಾಹಿಂ ಆದಿಲ್‌ ಶಾ. ಕನ್ನಡ, ಮರಾಠಿ, ದಕ್ಕನಿ ಮತ್ತು ಉರ್ದು ಭಾಷೆಗಳಲ್ಲಿ ಸಂವಹಿಸುತ್ತಿದ್ದ  ಈ “ಜಗದ್ಗುರು ಬಾದಶಾಹ’ ನಿಜಕ್ಕೂ ಜಾತ್ಯಾತೀತ ಐಕ್ಯತೆಗೆ ಒಂದು ಮಾದರಿ. 

Advertisement

ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಸೆಣಸಿದ 18ನೇ ಶತಮಾನದ ಆಡಳಿತಗಾರ ಟಿಪ್ಪು ಸುಲ್ತಾನ್‌ನ ಜಯಂತಿಯನ್ನು ಆಚರಿಸಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರವು ಸೈದ್ಧಾಂತಿಕ ಕೆಸರೆರಚಾಟಕ್ಕೆ ಕಾರಣವಾಗಿದೆ. 2015ರಲ್ಲಿ ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಪ್ರಾಯೋ ಜಿತವಾಗಿದ್ದಾಗ, ಅದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದರು. ಈಗ, 2017ರಲ್ಲಿ ಈ ವಿವಾದ ಮತ್ತೆ ತಲೆ ಎತ್ತಿ ನಿಂತಿದೆ. ಬಿಜೆಪಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು(ಖುದ್ದು ಕೋಮು ದ್ವೇಷ ಹರಡಿದ ಆರೋಪ ಎದುರಿಸಿದವರು) ಟಿಪು ಸುಲ್ತಾನನನ್ನು ಕೊಲೆಗಾರ, ಮತಾಂಧ ಮತ್ತು ಸಾಮೂಹಿಕ ಅತ್ಯಾಚಾರಿ ಎಂದು ಕರೆದಿರುವುದಷ್ಟೇ ಅಲ್ಲದೆ, ಈ ಆಚರಣೆಗೆ ತಮ್ಮನ್ನು ಆಹ್ವಾನಿಸಿದ ಕಾಂಗ್ರೆಸ್‌ನ ನಿರ್ಧಾರವನ್ನೂ ತಳ್ಳಿಹಾಕಿದ್ದಾರೆ. 

ಟಿಪ್ಪು ಸುಲ್ತಾನ ಎಂಬ “ಧ್ರುವೀಕರಣದ ಐಕಾನ್‌’ನ ಸುತ್ತ ರಾಜಕೀಯ ಚರ್ಚೆ ತೀವ್ರಗೊಂಡಿದೆ. ತೀವ್ರತೆ ಪಡೆಯುತ್ತಿರುವ ಈ ಚರ್ಚೆ ಒಂದು ಪ್ರಶ್ನೆಯನ್ನು ಎದುರಿಡುತ್ತಿದೆ: ಇತಿಹಾಸದ ವಸ್ತುನಿಷ್ಠ ಅಧ್ಯಯನ ನಡೆಸಿದರೆ ಅದರಿಂದ ಹೊರಹೊಮ್ಮುವ ಸಂಗತಿಯೇನು? ಟಿಪ್ಪು ಸುಲ್ತಾನ ನಮ್ಮ ದೇಶದ “ಮೊದಲ ಸ್ವಾತಂತ್ರ್ಯ ಹೋರಾಟಗಾರ’ನಾಗಿದ್ದ ಎನ್ನುವುದೋ? ಅಥವಾ ಆತ ಮತ್ತೂಬ್ಬ “ಕ್ರೂರ ಕೊಲೆಗಡುಕ’ನಾಗಿದ್ದ ಎನ್ನುವುದೋ?

ಮಿಲಿಟರಿ ರಾಕೆಟ್‌ಗಳು, ಲೂನಿಸೋಲಾರ್‌ ಕ್ಯಾಲೆಂಡರ್‌ಗಳು, ಭೂ ರಾಜಸ್ವ ವ್ಯವಸ್ಥೆಗಳ ಬಳಕೆಯಲ್ಲಿ ಅಗ್ರಪಂಕ್ತಿ ಹಾಕಿದ ಟಿಪ್ಪು ಸುಲ್ತಾನ ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಾ 1799ರಂದು ಶ್ರೀರಂಗಪಟ್ಟಣದಲ್ಲಿ ಕೊನೆಯು ಸಿರೆಳೆದ. ಭೂಮಾಲೀಕರು, ಮೇಲ್ಜಾತಿಗಳು ಮತ್ತು ಮಠಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅವನ್ನು ಶೂದ್ರರಿಗೆ ವಿತರಿಸುವಂಥ ಕ್ರಾಂತಿಕಾರಿ ಭೂಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದ. ಸೂಫಿಸಂನ ಚಿಸ್ತಿ/ಬಂದೇನವಾಜ್‌ ಸಂಪ್ರದಾಯದ ಅನುಯಾಯಿಯಾಗಿದ್ದ ಆತ ತನ್ನ ಆಡಳಿತಾವಧಿಯಲ್ಲಿ 156 ಮಂದಿರಗಳಿಗೆ ವಾರ್ಷಿಕ ಅನುದಾನ ನೀಡುತ್ತಿದ್ದ. ಹೀಗೆ ಆತನಿಂದ ಅನುದಾನ ಪಡೆದ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಬಹುಚರ್ಚಿತ ಶೃಂಗೇರಿ ಮಠವೂ ಸೇರಿತ್ತು. ಮರಾಠ ಸೇನೆಯು ಕೆಡವಿಹಾಕಿದ್ದ ಆ ಮಠದಲ್ಲಿ ಪವಿತ್ರ ವಿಗ್ರಹವನ್ನು ಮರುಸ್ಥಾಪಿಸುವುದಕ್ಕೆ ಕಾರಣವಾದ ಟಿಪ್ಪು, ಅಲ್ಲಿ ಪೂಜೆ ಪುನ ಸ್ಕಾರ ಗಳು ಮತ್ತೆ ಆರಂಭವಾಗುವಂತೆ ನೋಡಿಕೊಂಡ. ಅಲ್ಲದೇ ನಂಜನಗೂಡು, ಮೇಲುಕೋಟೆ, ಕಂಚಿ, ಕಳಲೆ, ದೇವನಹಳ್ಳಿ ಸೇರಿದಂತೆ ಇನ್ನೂ ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳು ಮೇಲಕ್ಕೇರುವಲ್ಲಿ ಟಿಪ್ಪುವಿನ ಸಹಾಯಹಸ್ತವಿದೆ. ಇದಷ್ಟೇ ಅಲ್ಲ, ಮೈಸೂರಿನ ಪ್ರಪ್ರಥಮ ಚರ್ಚ್‌ ಕೂಡ ಟಿಪ್ಪುವಿನ ಆಶ್ರಯದಲ್ಲೇ ನಿರ್ಮಿಸಲ್ಪಟ್ಟಿತು.  

ಆದರೂ, ಆತ ಧಾರ್ಮಿಕ ಹಿಂಸಾಚಾರ ಎಸಗಿದ ಮತ್ತು ಕೊಡಗಿನ ಕೂರ್ಗಿಗಳು ಮತ್ತು ದಕ್ಷಿಣ ಕನ್ನಡದ ಕ್ಯಾಥೋಲಿಕ್ಕ ರನ್ನು ಮತಾಂತರಗೊಳಿಸಿದ ಎನ್ನುವ ಸಂಗತಿ ರಾಜಕೀಯ ಭಿನ್ನಾಭಿಪ್ರಾಯದ ಭಾಗವಾಗಿದೆ.(ಆದಾಗ್ಯೂ ಅದೆಷ್ಟೋ ಇತಿ ಹಾಸಕಾರರು ಇದೆಲ್ಲ ಬ್ರಿಟಿಷರ ಪ್ರೊಪಗಾಂಡಾ ಎನ್ನುತ್ತಾರೆ). ನ್ಯಾಯಯುತವಾಗಿ ಹೇಳಬೇಕೆಂದರೆ, ಆಗ ಸಾವಿರಾರು ಜನರನ್ನು ಮತಾಂತರಿಸಲಾಯಿತು ಮತ್ತು ಕೊಲ್ಲಲಾಯಿತು. ಆದರೆ ಇದೆಲ್ಲ ನಡೆದದ್ದು ಪ್ರಾದೇಶಿಕ ಅಧಿಪತ್ಯ ಸ್ಥಾಪಿಸುವು

Advertisement

ದಕ್ಕಾಗಿ ನಡೆದ ಯುದ್ಧಗಳ ಸಮಯದಲ್ಲಿ. ಟಿಪ್ಪು ಯಾವುದೇ ಧಾರ್ಮಿಕ ಪೂರ್ವಗ್ರಹಗಳಿಲ್ಲದೇ ಮಾಪಿಳ್ಳೆಗಳಂಥ ಮುಸಲ್ಮಾ ನರನ್ನೂ ಕೊಂದ. ನೆನಪಿಡಿ: 18ನೇ ಶತಮಾನದಲ್ಲಿ ಯುದ್ಧ ಗಳಾಗುತ್ತಿದ್ದದ್ದು ಎರಡು ಎದುರಾಳಿ ಸಾಮ್ರಾಜ್ಯಗಳ ನಡು ವೆಯೇ ಹೊರತು, ಧಾರ್ಮಿಕ ಸಮುದಾಯಗಳ ಮಧ್ಯೆಯಲ್ಲ. ಹೀಗಾಗಿ ಮತ ಪ್ರಸಾರವು ಆಗ ಪ್ರಾಸಂಗಿಕವಾಗಿರುತ್ತಿತ್ತೇ ಹೊರತು ಅದು ಅವಿಭಾಜ್ಯ ಅಂಗವಾಗಿರುತ್ತಿರಲಿಲ್ಲ. 

ಇನ್ನು ಟಿಪ್ಪು ಸುಲ್ತಾನ ತನ್ನ ಆಡಳಿತದಲ್ಲಿ ಕನ್ನಡದದ ಪದಗಳನ್ನು ಬದಲಿಸಿ ಆ ಜಾಗಕ್ಕೆ ಪರ್ಶಿಯನ್‌ ಶಬ್ದಗಳನ್ನು ತಂದಿದ್ದ ಎಂಬ ವಿಷಯದಲ್ಲಿ  ಅನೇಕ ಕನ್ನಡ ಪರ ಸಂಘಟನೆಗಳು ಧ್ವನಿಯೆತ್ತಿವೆ. ಆದಾಗ್ಯೂ ಟಿಪ್ಪು ಕನ್ನಡದಲ್ಲಿ ನಿರರ್ಗಳನಾಗಿದ್ದರೂ, ಹದಿನಾರು ವರ್ಷಗಳ ತನ್ನ ಆಡಳಿತದಲ್ಲಿ ಆತನಿಗೆ ಅಂತಾರಾಷ್ಟ್ರೀ ಯ ತಾವಾದಿ ಪ್ರವೃತ್ತಿಯಿತ್ತು. ಆತ ತನ್ನನ್ನು ಆಗಿನ ಅಮೆರಿಕನ್‌ ಮತ್ತು ಫ್ರೆಂಚ್‌ ಕ್ರಾಂತಿಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದ. ನಿಸ್ಸಂಶಯವಾಗಿಯೂ ಒಂದು ವೇಳೆ ಆತನ ನಡೆ ಇನ್ನಷ್ಟು ಕನ್ನಡಪರವಾಗಿತ್ತೆಂದರೆ, ಅವು ಟಿಪ್ಪುವಿನ ಆಧುನಿಕ ಯುಗದ ಪ್ರಾದೇಶಿಕ ವಿಶ್ವಾಸಾರ್ಹತೆಗೆ ಬಲ ತುಂಬುತ್ತಿದ್ದವು. ಆದರೆ ಫಾರ್ಸಿ ಬಳಕೆಯು ಅತನ್ನು ಹೆಚ್ಚು ಅಂತಾರಾಷ್ಟ್ರೀಯಗೊಳಿಸಿದೆಯಷ್ಟೇ ಹೊರತು, ಆತನ ಪ್ರಾದೇಶಿಕತೆಯನ್ನೇನೂ ಕಡಿಮೆಗೊಳಿಸುವುದಿಲ್ಲ.
ಇದೇನೇ ಇದ್ದರೂ ಒಂದು ಸಂಗತಿಯ ಬಗ್ಗೆ ನಾವೆಲ್ಲ ಯೋಚಿಸ ಲೇಬೇಕು. ಈ ಜನ್ಮದಿನಾಚರಣೆಗಳು ಉತ್ತಮ ಸಮಾಜವನ್ನು ನಿರ್ಮಿಸುವ ಬದಲು ಒಂದು ರಾಜಕೀಯ ಪಕ್ಷಕ್ಕೆ ಓಟ್‌ಬ್ಯಾಂಕ್‌ ಗಿಟ್ಟಿಸಿಕೊಳ್ಳುವ ಮಾರ್ಗವಾಗುತ್ತಿವೆಯೇ? (ಟಿಪ್ಪು ಜಯಂತಿಯ ಹಾಗೆಯೇ ಬಸವ ಜಯಂತಿ, ವಾಲ್ಮೀಕಿ ಜಯಂತಿಯಂಥ ಆಚರಣೆಗಳ ವಿಷಯದಲ್ಲೂ ಇದೇ ಪ್ರಶ್ನೆ ಕೇಳಬಹುದಾಗಿದೆ.) ಪ್ರಾಯೋಗಿಕವಾಗಿ ಹೇಳುವುದಾದರೆ, ಇಂದು ಅನೇಕ ಸಮುದಾಯಗಳು ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ಸುರಕ್ಷತೆಯಂಥ ಅತ್ಯಗತ್ಯ ಸೌಕರ್ಯಗಳಿಂದ ವಂಚಿತವಾಗು ತ್ತಿವೆ. ಅದರಲ್ಲೂ ಮುಖ್ಯವಾಗಿ ಈ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಮುಸಲ್ಮಾನರು ಎಲ್ಲರಿಗಿಂತಲೂ(ದಲಿತರನ್ನು ಬಿಟ್ಟು) ಹಿಂದುಳಿದಿದ್ದಾರೆ.ಈ ಅಭಾವವನ್ನು ರಾಜಕೀಯ ಟೋಕನ್‌ ವಾದದಿಂದ ತುಂಬಲಾಗದು.  ಸಮಾಜಕ್ಕೆ ಹೆಚ್ಚು ಲಾಭವಾಗುವ ನಿಟ್ಟಿನಲ್ಲಿ ಯೋಚಿಸಿ ಹೇಳುವುದಾದರೆ, ನಾವು ಇನ್ನಿತರೆ “ಸ್ವೀಕಾರಾರ್ಹ ವ್ಯಕ್ತಿಗಳ’ ಜಯಂತಿಯನ್ನು ಆಚರಿಸಲು ಮುಂದಾಗಬೇಕು. ಅಂದರೆ ಕರ್ನಾಟಕದ ಮುಸಲ್ಮಾನರ ಇತಿಹಾಸವನ್ನು ಕೇವಲ “ಮೈಸೂ ರಿನ ಹುಲಿ’ಗಷ್ಟೇ ಸೀಮಿತಗೊಳಿಸಬಾರದು. ಉದಾಹರಣೆಗೆ ಎರಡನೇ ಇಬ್ರಾಹಿಂ ಆದಿಲ್‌ ಶಾಹ್‌ನ ಜಯಂತಿ ಆಚರಿಸಿದರೆ ಹೇಗೆ? ಟಿಪ್ಪು ಸುಲ್ತಾನನಿಗಿಂತ ಎರಡು ಶತಮಾನ ಹಿಂದೆಯೇ ಅಸ್ತಿತ್ವದಲ್ಲಿದ್ದಾತ ಈ “ಜಗದ್ಗುರು ಬಾದಶಾಹ’. ಆತನ ಸಾಮ್ರಾಜ್ಯ ಬಿಜಾಪುರದಿಂದ ಮೈಸೂರಿ ನವರೆಗೂ ಬೆಳಿದಿತ್ತು. ಸಂಗೀತದ ಮೂಲಕ ಹಿಂದೂ ಮತ್ತು ಮುಸಲ್ಮಾನರನ್ನು, ಶಿಯಾ ಮತ್ತು ಸುನ್ನಿಗಳನ್ನು ಒಂದು ಮಾಡ ಬೇಕು ಎಂಬ ಕನಸು ಆತನದ್ದಾಗಿತ್ತು. ಆತ ಗಣೇಶ-ಸರಸ್ವತಿ ಯನ್ನೂ, ಸೂಫಿ ಸಂತ “ಹಜರತ್‌ ಬಂದೇನವಾಜ್‌’ರನ್ನು ಏಕಕಾಲದಲ್ಲಿ ಹೊಗಳುವ ಮೂಲಕ ಏಕತಾಭಾವವನ್ನು ಪ್ರಚು ರಪಡಿಸಿದ. ಸಂಗೀತ ನಗರಿಯಲ್ಲಿನ ತನ್ನ ಅರಮನೆಯಲ್ಲಿ ಮಂದಿರ ನಿರ್ಮಿಸಿ ಕೋಮು ಸೌಹಾರ್ದತೆ ತರಲು ಪ್ರಯತ್ನಿ ಸಿದ. ಕನ್ನಡ, ಮರಾಠಿ, ದಕ್ಕನಿ ಮತ್ತು ಉರ್ದು ಭಾಷೆಗಳಲ್ಲಿ ಸಂವಹಿಸುತ್ತಿದ್ದ 2ನೇ ಇಬ್ರಾಹಿಂ ಆದಿಲ್‌ ಶಾಹ್‌, ನಿಜಕ್ಕೂ ಜಾತ್ಯಾತೀತ ಐಕ್ಯತೆಗೆ ಒಂದು ಮಾದರಿ. ಕರ್ನಾಟಕದ ಎಲ್ಲಾ ಪಕ್ಷಗಳ ನಾಯಕರೂ ಆತನ ಸ್ಮರಣೆಯತ್ತ ಗಮನಹರಿಸಬೇಕು. 

ಎರಡೂವರೆ ಶತಮಾನಗಳ ಹಿಂದಿನ ವೈವಿಧ್ಯಮಯ ಮತ್ತು ಗದ್ದಲದ ರಾಜಕೀಯ ವಾತಾವರಣದಲ್ಲಿ ಜೀವಿಸಿದ್ದ ಟಿಪ್ಪು ಸುಲ್ತಾನನ್ನು  ಇಂದಿನ ವಿವಿಧ ರಾಜಕೀಯ ಉದ್ದೇಶಗಳಿಗೆ ತಕ್ಕಂತೆ (ತಪ್ಪಾಗಿ)ನೋಡಲಾಗುತ್ತಿದೆ. ಹಿಂದಿನ ಜಾಗತಿಕ ವ್ಯಕ್ತಿತ್ವ ವನ್ನು ಇಂದಿನ “ರಾಷ್ಟ್ರದ’ ಕಾಂಟೆಕ್ಸ್ಟ್ನಲ್ಲಿ ನೋಡುವುದು ನಿಜಕ್ಕೂ ನ್ಯಾಯಯುತ ಮಾರ್ಗವಲ್ಲ. ಏಕೆಂದರೆ ಟಿಪ್ಪು ಸುಲ್ತಾನ ನಿಗೂ ಮತ್ತು “ಭಾರತದ ಪರಿಕಲ್ಪನೆಗೂ’ ನಡುವೆ ಒಂದು ಶತಮಾನಕ್ಕಿಂತಲೂ ಹೆಚ್ಚಿನ ಅಂತರವಿದೆ. ಆದರೆ ಒಂದು ಸಂಗತಿ ಯಂತೂ ಸ್ಪಷ್ಟ: ಟಿಪ್ಪು ಸುಲ್ತಾನ ಪ್ರಾದೇಶಿಕ ನಿಯಂತ್ರಣ ಸಾಧಿಸಲು ಬಯಸುತ್ತಿದ್ದ ಒಬ್ಬ ವ್ಯೂಹಾತ್ಮಕ ಆಡಳಿತಗಾರನಾ ಗಿದ್ದ, ಆತ ಬ್ರಿಟಿಷರು ಸೇರಿದಂತೆ ಎಲ್ಲಾ ಧರ್ಮದ ಎದುರಾಳಿ ಗಳ ವಿರುದ್ಧವೂ ಅನೇಕ ಬಾರಿ ಯುದ್ಧ ಮಾಡಿದ್ದ. 

ಇಂದು ಟಿಪ್ಪುವನ್ನು ಕೇವಲ ಮುಸಲ್ಮಾನರ ಐಡೆಂಟಿಟಿ ಯಾಗಿ ಸೀಮಿತಗೊಳಿಸಿದರೆ ಆ ಐಕಾನ್‌ಗೆ ನಾವು ನ್ಯಾಯವೊದಗಿಸಿ ದಂತಾಗುವುದಿಲ್ಲ. ಆತನ ವ್ಯಕ್ತಿತ್ವವನ್ನು 18ನೇ ಶತಮಾನದ ನಾವಿನ್ಯತೆಯ(ಇನ್ನೋವೇಷನ್‌) ರೂಪದಲ್ಲಿ ಗುರುತಿಸಿದಾಗ ಮಾತ್ರ ನ್ಯಾಯ ಒದಗಿಸಬಲ್ಲೆವು.

ಚೇತನ್‌ ಅಹಿಂಸಾ, ನಟ

Advertisement

Udayavani is now on Telegram. Click here to join our channel and stay updated with the latest news.

Next