ಹೌದು .. ನೀನಿಲ್ಲದೇ ನನಗೇನಿದೆ ? ಈ ಮಾತನ್ನು ನಿನಗೆ ಅದೆಷ್ಟು ಬಾರಿ ಹೇಳಿರುವೆ. ನಿನಗೆ ನೆನಪಿದೆಯೆ ? ನಿಜವಾಗಿಯೂ ನಾನು ನಿನ್ನ, ಅದೆಷ್ಟು ಪ್ರೀತಿಸುತ್ತೇನೆ ಎಂದರೆ ಅದನ್ನು ವಿವರಿಸಿ ಹೇಳಲು ಸಾಧ್ಯವೇ ಇಲ್ಲ. ಒಮ್ಮೆ ನಿನ್ನ ಅಂತರಾಳವನ್ನು ಕೇಳಿಕೊ, ನಿನ್ನ ಮನಸ್ಸು ಖಂಡಿತ ನನ್ನ ಪ್ರೀತಿಯ ಬಗ್ಗೆ ವಿವರಿಸಿ ಹೇಳದೇ ಇದ್ದರೆ ಕೇಳು.
ತುಂಬಾ ದಿನಗಳಾಯಿತು ನಿನ್ನ ನೋಡಿ. ನಿನ್ನ ಮೇಸೆಜ್‌ಗಾಗಿ ಸದಾ ಕಾಯುತ್ತಾ ಕೂತಿರುವ ಪ್ರೇಮಿ ನಾನು.
ಪ್ರೀತಿಯ ಆರಂಭದ ದಿನಗಳಲ್ಲಿ ನೀನೇ ನನ್ನನ್ನು ಪೀಡಿಸುತ್ತಿ¨ªೆ. ಆದರೆ, ಆ ದಿನಗಳಂದು ನನಗೆ ನಿನ್ನ ಪ್ರೀತಿಯ ಮಹತ್ವ ಅರ್ಥವಾಗದೇ ಹೋಯಿತು. ನೀ ದೂರವಾದ ನಂತರ ನಿನ್ನ ಪ್ರೀತಿಯ ಸೆಳೆತ ಜೋರಾಗುತ್ತಿದೆ. ಮತ್ತೆ ನನ್ನ ಜೀವನದಲ್ಲಿ ಬರಲಾರೆಯಾ ?
ನೀನಿಗ ಎಲ್ಲಿರುವೆಯೋ, ಹೇಗಿರುವೆಯೋ, ನಿಜವಾಗಿಯೂ ತಿಳಿಯದು. ಈ ನನ್ನ ಹೃದಯ ಮಾತ್ರ ಸದಾ ನಿನ್ನ ಜಪಿಸುತ್ತಿದೆ. ನಿನ್ನನ್ನೇ ಹೃದಯಕ್ಕೆ ಸಂಪರ್ಕ ಸಾಧಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ನನ್ನ ನೆನಪಾದರೆ ದಯಮಾಡಿ ಈ ಪಾಪದ ಹುಡುಗನಿಗೊಂದು ಮೆಸೇಜ್ ಕಳುಹಿಸು. ನಿನ್ನ ಜೊತೆ ತುಂಬಾ ಮಾತನಾಡುವುದಿದೆ. ನನ್ನ ಮರೆಯಬೇಡ. ಮತ್ತೂಮ್ಮೆ ಅದೇ ಮನಸಿನ ಮಾತನ್ನೇ ಹೇಳುತ್ತಿದ್ದೇನೆ : ಈ ಜೀವನದಲ್ಲಿ ನೀನಿಲ್ಲದೆ ನನಗೇನಿದೆ ?
ವೆಂಕಟೇಶ ಚಾಗಿ