Advertisement

ಚಂದ್ರನ ಮೇಲಿಂದ ನೀಲ್‌ ಆರ್ಮ್ ಸ್ಟ್ರಾಂಗ್‌ ಹೇಳಿದ್ದೇನು?

10:00 AM Nov 01, 2019 | mahesh |

ಚಂದ್ರನ ಮೇಲೆ ಮೊದಲ ಹೆಜ್ಜೆ ಇಡುವಾಗ ನೀಲ್‌ ಹೇಳಿದ ಮಾತು ಜಗತ್ತಿನ ಸಾರ್ವಕಾಲಿಕ ಶ್ರೇಷ್ಟ ಹೇಳಿಕೆಗಳ ನಡುವೆ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಆದರೆ ಆ ಹೇಳಿಕೆಯನ್ನು ತಪ್ಪಾಗಿ ದಾಖಲಿಸಲಾಗಿದೆ ಎಂದು ಸ್ವತಃ ನೀಲ್‌ ಹೇಳಿದಾಗ ಜಗತ್ತೇ ದಂಗಾಗಿತ್ತು!

Advertisement

ಚಂದ್ರನ ಮೇಲೆ ಕಾಲಿಟ್ಟ ಮೊತ್ತ ಮೊದಲ ಮನುಷ್ಯ ನೀಲ್‌ ಆರ್ಮ್ ಸ್ಟ್ರಾಂಗ್‌. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆತ ಚಂದ್ರನ ಮೇಲೆ ಕಾಲಿಟ್ಟ ಘಳಿಗೆಯಲ್ಲಿ ಅಲ್ಲಿಂದಲೇ ಹೇಳಿದ್ದ ಒಂದು ಮಾತು ಜಗತøಸಿದ್ಧವಾಯಿತು. ಸಾರ್ವಕಾಲಿಕ ಹೇಳಿಕೆಗಳಲ್ಲಿ ಅದಕ್ಕೆ ಮಹತ್ತರವಾದ ಸ್ಥಾನವಿದೆ. ಅಂದು ಅವರಾಡಿದ ಮಾತು ಏನೆಂದರೆ “One small step for man, one giant leap for mankind’ ಎಂದು. ಅದರ ಅರ್ಥ “ಮನುಷ್ಯನ ಒಂದು ಪುಟ್ಟ ಹೆಜ್ಜೆ, ಮನುಷ್ಯ ಕುಲಕ್ಕೇ ಒಂದು ಮಹಾ ನೆಗೆತ’. ಈ ಮಾತಿನ ಭಾವಾರ್ಥ ಇಷ್ಟೇ. ನೀಲ್‌ ಆರ್ಮ್ ಸ್ಟ್ರಾಂಗ್‌ ಇಟ್ಟ ಹೆಜ್ಜೆ ಪುಟ್ಟದಾಗಿದ್ದಿರಬಹುದು. ಆದರೆ, ಅದು ಇಡೀ ಮನುಷ್ಯ ಕುಲಕ್ಕೇ ದೊಡ್ಡ ಸಾಧನೆ ಎನ್ನುವ ಅರ್ಥದಲ್ಲಿ “ಮಹಾ ನೆಗೆತ’ ಎನ್ನುವ ಪದವನ್ನು ಬಳಸಿದ್ದರು. ಅದುವರೆಗೂ ಮನುಷ್ಯ ಚಂದ್ರನನ್ನು ದುರ್ಬೀನಿನಲ್ಲಿ ಮಾತ್ರವೇ ನೋಡುತ್ತಿದ್ದ. ಅಲ್ಲಿಗೆ ಹೋಗುವುದು ಕನಸಿನ ಮಾತು ಎನ್ನುವಂಥ ಕಾಲದಲ್ಲಿ ನಿಜಕ್ಕೂ ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿದ್ದು ತಾಂತ್ರಿಕವಾಗಿ ಮನುಷ್ಯ ಕಂಡುಕೊಂಡ ಮಹಾ ಯಶಸ್ಸು ಎನ್ನುವುದು ನೀಲ್‌ ಮಾತಿನ ತಾತ್ಪರ್ಯವಾಗಿತ್ತು. ಆ ಹೇಳಿಕೆಯಲ್ಲಿ ನೀಲ್‌ ತಮ್ಮನ್ನು ಮನುಷ್ಯಕುಲದ ಪ್ರತಿನಿಧಿಯಂತೆ ತೋರ್ಪಡಿಸಿಕೊಂಡಿದ್ದರು!

ಏನದು ಕರೆಕ್ಷನ್‌?
ಒಂದು ವಾಕ್ಯದ ಕುರಿತು ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ… ನೀಲ್‌ ಆರ್ಮ್ ಸ್ಟ್ರಾಂಗ್‌ ಅನೇಕ ವರ್ಷಗಳ ನಂತರ ಸಂದರ್ಶನವೊಂದರಲ್ಲಿ ತನ್ನ ಹೇಳಿಕೆಯನ್ನು ತಪ್ಪಾಗಿ ದಾಖಲಿಸಲಾಗಿದೆ ಎಂದಿದ್ದು. ಅವರ ಪ್ರಕಾರ ಅಂದು ಅವರು ಚಂದ್ರನ ನೆಲದಿಂದ ಹೇಳಿದ್ದುª”one small step for a man, one giant lead for mankind’ ಎಂದು. ಎರಡೂ ಒಂದೇ ರೀತಿ ಇದೆಯಲ್ಲ ಎಂದು ಅನ್ನಿಸಬಹುದು. ಆದರೆ, “man’ ಪದದ ಮುಂಚೆ ಬರುವ “a’ ಅಕ್ಷರವನ್ನು ಗಮನಿಸಿ. ಅದೊಂದರಿಂದ ಏನು ಮಹಾ ಬದಲಾವಣೆಯಾಗುತ್ತದೆ ಎಂದುಕೊಳ್ಳದಿರಿ. ಅಷ್ಟರಿಂದಲೇ ಇಡೀ ವಾಕ್ಯದ ಭಾವಾರ್ಥ ಬದಲಾಗುತ್ತದೆ.

ಅದು ನಿಜವೇ ಆಗಿದ್ದರೆ ನೀಲ್‌ ಅವರು ತಮ್ನನ್ನು ಮನುಷ್ಯ ಕುಲದ ಪ್ರತಿನಿಧಿಯಾಗಿ ತೋರ್ಪಡಿಸಿಕೊಂಡಿರಲೇ ಇಲ್ಲ ಎಂಬುದು ಸಾಬೀತಾಗುತ್ತದೆ. ಅವರು ತಮ್ಮ ಒಂದು ಹೆಜ್ಜೆ ಮನುಷ್ಯ ಕುಲಕ್ಕೆ ಮಹಾ ನೆಗೆತ ಇದ್ದಂತೆ ಎಂದು ಹೇಳಿದಂತಾಗುತ್ತಿತ್ತು. ಆಗ ಈ ಸಾರ್ವಕಾಲಿಕ ವಾಕ್ಯದ ಸ್ವಾರಸ್ಯಕ್ಕೆ ಕೊಂಚ ಧಕ್ಕೆ ಬರುತ್ತಿತ್ತು. ಸ್ವತಃ ನೀಲ್‌ಗ‌ೂ ತಾನು “a’ ಹೇಳಿದ್ದರ ಕುರಿತು ಖಚಿತವಾದ ನಿಲುವು ಇರಲಿಲ್ಲ. ಅಲ್ಲದೆ, ಆ ಸಮಯದಲ್ಲಿ ಆಡಿಯೊ ಸಿಗ್ನಲ್‌ ದುರ್ಬಲವಾಗಿದ್ದರಿಂದ, ಸ್ಪಷ್ಟತೆಯೂ ಇರಲಿಲ್ಲ. ಹೀಗಾಗಿ ಈ ಸಾರ್ವಕಾಲಿಕ ಹೇಳಿಕೆಯ ಕುರಿತು ಅನೇಕ ಊಹಾಪೋಹಗಳು, ಚರ್ಚೆಗಳು ನಡೆದಿದ್ದವು.

ಗೊಂದಲಗಳಿಗೆ ಫ‌ುಲ್‌ಸ್ಟಾಪ್‌
ವಾದ ವಿವಾದಗಳ ನಡುವೆಯೇ, ಈ ಸಾರ್ವಕಾಲಿಕ ಹೇಳಿಕೆಗೆ ಪೂರ್ಣವಿರಾಮ ಹಾಕುವ ಸಮಯವೊಂದು ಬಂದಿತು. ಅದಕ್ಕೆ ಕಾರಣನಾಗಿದ್ದು ಪೀಟರ್‌ ಶನ್‌ ಎಂಬ ಕಂಪ್ಯೂಟರ್‌ ಪ್ರೋಗ್ರಾಮರ್‌. 2006ರಲ್ಲಿ ಆತನ ಬಳಿ ಒಂದು ಸಾಫ್ಟ್ವೇರ್‌ ಇತ್ತು. ಮಾತನಾಡಲು ಬಾರದ ಅಂಗವಿಕಲರ ಭಾಷೆಯನ್ನು, ಕಂಪ್ಯೂಟರ್‌ ಸಹಾಯದಿಂದ ಅರ್ಥ ಮಾಡಿಕೊಳ್ಳಲು ಅದು ಸಹಕರಿಸುತ್ತಿತ್ತು. ಮೊದಲು, ನೀಲ್‌ ಆರ್ಮ್ಸ್ಟ್ರಾಂಗ್‌ ಚಂದ್ರನ ನೆಲದಿಂದ ಬಿತ್ತರಿಸಿದ ಧ್ವನಿಯ ರೆಕಾರ್ಡಿಂಗ್‌ಅನ್ನು ಪೀಟರ್‌ ಅಂತರ್ಜಾಲದಲ್ಲಿ ಡೌನ್‌ಲೋಡ್‌ ಮಾಡಿಕೊಂಡ. ಅದನ್ನು ಆ ಯಂತ್ರಕ್ಕೆ ಫೀಡ್‌ ಮಾಡಿ ಅಧ್ಯಯನ ನಡೆಸಿದಾಗ ನೀಲ್‌ ತನ್ನ ಹೇಳಿಕೆಯಲ್ಲಿ “a’ ಸೇರಿಸಿದ್ದು ದೃಢಪಟ್ಟಿತ್ತು. ಆ ಸಮಯದಲ್ಲಿ ನೀಲ್‌ ಬದುಕಿದ್ದರು. ಅವರು ಪೀಟರ್‌ನ ಸಂಶೋಧನೆಯನ್ನು ಶ್ಲಾಘಿಸಿದರು.

Advertisement

– ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next