Advertisement
ಎಚ್‌ಡಿಎಫ್ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರ ರಿವಾರ್ಡ್ ಪಾಯಿಂಟ್ ಗಳಿಗೆ ಸಂಬಂಧಿಸಿ ಕೆಲವು ನಿಯಮಗಳಲ್ಲಿ ಬದಲಾವಣೆ ತಂದಿದೆ. ಹಲವಾರು ಕಾರ್ಡ್‌ಗಳಿಗೆ ನೀಡಲಾಗುವ ರಿವಾರ್ಡ್ ಪಾಯಿಂಟ್‌ಗಳನ್ನು ನಿಗದಿತ ಮೊತ್ತಕ್ಕೆ ಸೀಮಿತಗೊಳಿಸಲಾಗಿದೆ. ಥರ್ಡ್‌ಪಾರ್ಟಿ ಮರ್ಚೆಂಟ್‌ಗಳ ಮೂಲಕ ಪಾವತಿಸುವ ಬಾಡಿಗೆಗೆ ಒಟ್ಟು ವಹಿವಾಟು ಮೊತ್ತಕ್ಕೆ ಶೇ.1ರಷ್ಟು ಶುಲ್ಕ ನೀಡಬೇಕಾಗುತ್ತದೆ. ಅಂತಾರಾಷ್ಟ್ರೀಯ ವಹಿವಾಟಿಗೂ ಶುಲ್ಕ ತೆರಬೇಕಾಗುತ್ತದೆ.
Related Articles
Advertisement
ಇಂದಿನಿಂದ ಎಲ್ಲ ವಾಹನಗಳೂ ಕಡ್ಡಾಯವಾಗಿ ಅಧಿಕ ಭದ್ರತೆಯ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಪಿಆರ್) ಮತ್ತು ಕಲರ್-ಕೋಡೆಡ್ ಸ್ಟಿಕರ್‌ಗಳನ್ನು ಹೊಂದಬೇಕಾದ್ದು ಕಡ್ಡಾಯ. ದ್ವಿಚಕ್ರ ವಾಹನಗಳಿಗೆ ಎಚ್‌ಎಸ್‌ಪಿಆರ್ ಹಾಕಲು 356 ರೂ., ಮತ್ತು ನಾಲ್ಕು ಚಕ್ರದ ವಾಹನಗಳಿಗೆ 600ರೂ.ನಿಂದ 1,100 ರೂ.ವರೆಗೆ ಖರ್ಚಾಗುತ್ತದೆ. ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ, ಎಚ್‌ಎಸ್‌ಆರ್‌ಪಿ ಇಲ್ಲದೇ ಇದ್ದರೆ ನಿಮಗೆ 5 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ದಂಡ ಹಾಕಲಾಗುತ್ತದೆ.
ಎನ್‌ಪಿಎಸ್ ವಿತ್‌ಡ್ರಾವಲ್
ಕೊರೊನಾ ಹಿನ್ನೆಲೆಯಲ್ಲಿ 2021ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರಿಗೆ ಆನ್ ಲೈನ್ ಮೂಲಕ ತಮ್ಮ ಪಿಂಚಣಿಯನ್ನು ಭಾಗಶಃ ಪಡೆಯಲು ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಈ ಅವಕಾಶ ಇರುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗಿಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರು ಜ.1ರಿಂದ ಪಿಂಚಣಿಯನ್ನು ಭಾಗಶಃ ವಿತ್‌ಡ್ರಾ ಮಾಡಲು ಆಗುವುದಿಲ್ಲ.
ಜಿಎಸ್‌ಟಿ ಇನ್‌ವಾಯ್ಸ್
ಜಿಎಸ್‌ಟಿ ಇ-ಇನ್‌ವಾಯ್ಸಿಂಗ್ (ಎಲೆಕ್ಟ್ರಾನಿಕ್ ಬಿಲ್)ಗೆ ಇದ್ದ 20 ಕೋಟಿ ರೂ.ಗಳ ಮಿತಿಯನ್ನು ಸರ್ಕಾರ ಈಗ 5 ಕೋಟಿ ರೂ.ಗೆ ಇಳಿಕೆ ಮಾಡಿದೆ. ಭಾನುವಾರದಿಂದಲೇ ಇದು ಜಾರಿಯಾಗಲಿದೆ. ಅದರಂತೆ, ನಿಮ್ಮ ವಾರ್ಷಿಕ ವಹಿವಾಟು 5 ಕೋಟಿ ರೂ.ಗಿಂತ ಹೆಚ್ಚಿದ್ದರೆ, ನೀವು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಬಿಲ್ ಹೊಂದಿರಬೇಕು.
ಎಲ್‌ಪಿಜಿ-ಸಿಎನ್‌ಜಿ-ಪಿಎನ್‌ಜಿ ದರ
ತೈಲ ಮತ್ತು ಅನಿಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ದರ ಪರಿಷ್ಕರಣೆ ಘೋಷಿಸುತ್ತವೆ. ಅದರಂತೆ, ಇಂದು ಎಲ್‌ಪಿಜಿ ಸಿಲಿಂಡರ್, ಸಿಎನ್‌ಜಿ ಮತ್ತು ಪಿಎನ್‌ಜಿ ದರದಲ್ಲಿ ಏರಿಕೆ ಆಗಲೂಬಹುದು ಅಥವಾ ಇಳಿಕೆ ಆಗಲೂಬಹುದು.