Advertisement
ಇದರ ಬಾಲವೂ ತಲೆಯ ಆಕಾರದಲ್ಲೇ ಇದೆ. ಪ್ರಾಣಿ ಪ್ರಪಂಚದಲ್ಲಿ ಈ ರೀತಿ ಒರಿಜಿನಲ್, ಡೂಪ್ಲಿಕೇಟ್ ಭಾಗಗಳು ಯಾಕಿವೆ ಗೊತ್ತೆ? ಶತ್ರುಗಳನ್ನು ವಂಚಿಸಲು! ಹಿಂದೆ ಬೇಟೆಗೆ ಹೊರಡುವಾಗ ಬೇಟೆಗಾರರು ತಲೆಯ ಹಿಂದೆ ಮನುಷ್ಯರಮುಖವಾಡ ಧರಿಸಿ ಹೋಗುತ್ತಿದ್ದರು. ಏಕೆಂದರೆ ಹುಲಿ ಅಥವಾ ಯಾವುದೇ ಕ್ರೂರ ಪ್ರಾಣಿಗಳು ಹಿಂದಿನಿಂದ ದಾಳಿ ಮಾಡದಿರಲಿ ಎಂದು. ಈ ವಿಧಾನದ ಅಸಲೀಯತ್ತು ನಿಜವೆಂದು ಬಹಳಷ್ಟು ಸಲ ಸಾಬೀತೂ ಆಗಿದೆ. ಈ ಉಪಾಯ
ಪ್ರಕೃತಿಯಲ್ಲೇ ಇದೆಯೆನ್ನುವುದಕ್ಕೆ, “ಹೇರ್ ಸ್ಟ್ರೀಕ್ ಚಿಟ್ಟೆ’ ಮತ್ತು “ಉಂಗುರ ಕತ್ತಿನ ಹಾವು’ ಸಾಕ್ಷಿ. ಇವುಗಳ ಡೂಪ್ಲಿಕೇಟ್ ತಲೆಗಳನ್ನು ನಿಜವೆಂದು ಭ್ರಮಿಸಿ ಶತ್ರುಗಳು ಹೊಂಚು ಹಾಕಿದರೆ ತಪ್ಪಿಸಿಕೊಳ್ಳುವುದು ಇವುಗಳಿಗೆ ಅತ್ಯಂತ ಸುಲಭ. ಇದೇ ಎರಡು ತಲೆಯಿರುವುದರ ಹಿಂದಿನ ರಹಸ್ಯ ಮತ್ತು ಅದರಿಂದ ಆಗುವ ಉಪಯೋಗ.