Advertisement

ಶ್ರೀ ಕೃಷ್ಣ ಹೇಳಿದ 28 ತಣ್ತೀಗಳು ಯಾವುವು?

08:15 AM Dec 15, 2018 | |

ಜೀವನವು ಒಂದು ತಣ್ತೀವನ್ನು ಅನುಸರಿಸಿಕೊಂಡು ಹೋಗಬೇಕು. ತಣ್ತೀ ಎಂದರೆ ಸಿದ್ಧಾಂತ ಎಂದರ್ಥ. ಜೀವನದಲ್ಲಿ ಒಂದು ನಿರ್ಧಿಷ್ಟವಾದ ತಣ್ತೀ ಅಥವಾ ಸಿದ್ಧಾಂತವನ್ನು ಅಳವಡಿಸಿಕೊಂಡು ಅದನ್ನು ತಪ್ಪದೆ ಪಾಲಿಸಿಕೊಂಡು ಹೋಗಬೇಕು. ಆ ತಣ್ತೀವಾದರೂ ನಮ್ಮ ಹಾಗೂ ಪರರ ಜೀವನಕ್ಕೆ ಪೂರಕವಾಗಿ ಅನ್ಯರಿಗೆ ಅನ್ಯಾಯವಾಗದ ರೀತಿಯಲ್ಲಿ ನಮ್ಮ ಗುರಿಯನ್ನು ತಲುಪಿಸುವಂತಿರಬೇಕು. ಧರ್ಮಗಳೂ ಕೂಡ ಜೀವನ ವಿಧಾನವನ್ನು ಹೇಳುವ ಸರಳ ತಣ್ತೀಗಳಿಂದ ಕೂಡಿವೆ. ಈ ಜಗತ್ತು ಎಂಬುದೇ ಒಂದು ತಣ್ತೀ. ಜಗದ ಅಥವಾ ಯುಗದ ಹುಟ್ಟು, ಬೆಳವಣಿಗೆ ಮತ್ತು ವಿನಾಶವಾಗುವುದೂ ಈ ತಣ್ತೀಗಳಿಂದಲೇ.

Advertisement

ಶ್ರೀ ಕೃಷ್ಣನು ಸೃಷ್ಟಿಯು ಒಳಗೊಂಡಿರುವ ಮತ್ತು ಅವುಗಳಿಂದಲೇ ಆತ್ಮಕಲ್ಯಾಣವಾಗುವ ಇಪ್ಪತ್ತೆಂಟು ತಣ್ತೀಗಳನ್ನು ಹೇಳಿ¨ªಾನೆ. ಮೋಕ್ಷ$ಧರ್ಮವನ್ನು ಹೊಂದಬೇಕಾದರೆ ಜ್ಞಾನ ಮತ್ತು ವಿಜ್ಞಾನ ಭಾವಗಳಿಂದ ಪರಿಪೂರ್ಣನಾಗಬೇಕು. ಯಾಕೆಂದರೆ ಜ್ಞಾನ, ವಿಜ್ಞಾನ, ವೈರಾಗ್ಯ, ಶ್ರದ್ಧೆ, ಭಕ್ತಿ ಇವುಗಳಿಂದಲೇ ಮೋಕ್ಷ$ಧರ್ಮವು ಪರಿಪೂರ್ಣವಾದುದಾಗಿದೆ. ಹಾಗಾಗಿ ಇಪ್ಪತ್ತೆಂಟು ತಣ್ತೀಗಳಿಂದಲೇ ಈ ಮೋಕ್ಷ$ಧರ್ಮವನ್ನು ಪಡೆಯಲು ಸಾಧ್ಯ. ಆ ಇಪ್ಪತ್ತೆಂಟು ತಣ್ತೀಗಳೆಂದರೆ ಪ್ರಕೃತಿ, ಪುರುಷ, ಮಹತಣ್ತೀ,ಅಹಂಕಾರ, ಪಂಚತನ್ಮಾತ್ರೆಗಳು (ಒಟ್ಟು ಒಂಭತ್ತು), ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಒಂದು ಮನಸ್ಸು (ಒಟ್ಟು ಹನ್ನೊಂದು), ಪಂಚಮಹಾಭೂತಗಳು, ತ್ರಿಗುಣಗಳು (ಒಟ್ಟು ಎಂಟು). ಎಲ್ಲವೂ ಸೇರಿ ಒಟ್ಟಿಗೆ ಇಪ್ಪತ್ತೆಂಟು. ಆದರೆ ಎÇÉಾ ತಣ್ತೀಗಳು ಎಲ್ಲವುದರಲ್ಲೂ ಅಂತಭೂìತವಾಗಿರುವುದರಿಂದ ತಣ್ತೀಗಳನ್ನು ಕ್ರೋಢೀಕರಿಸಿ ಬೇರೆಬೇರೆ ಸಂಖ್ಯೆಯಲ್ಲಿ ಹೇಳಲಾಗಿದೆ. ಋಷಿಮುನಿಗಳು ಇಪ್ಪತ್ತಾರು ಎಂದೂ,  ಕೆಲವರು ಏಳು ಎಂತಲೂ, ಒಂಭತ್ತು ಎಂತಲೂ ನಾಲ್ಕು, ಆರು ಎಂದೂ ಸಂಖ್ಯೆಯನ್ನು ಹೇಳಿರುತ್ತಾರೆ.

ಬ್ರಹ್ಮನಿಂದ ಹಿಡಿದು ತೃಣದವರೆಗಿನ ಎಲ್ಲ ಕಾರ್ಯಗಳಲ್ಲಿಯೂ ಈ ಇಪ್ಪತ್ತೆಂಟು ತಣ್ತೀಗಳನ್ನು ಪರಾಂಬರಿಸುವುದೇ ಜ್ಞಾನವಾಗಿದೆ. ಈ ಎÇÉಾ ತಣ್ತೀಗಳಲ್ಲಿ ಅನುಗತವಾದ ಪರಮಾತ್ಮ ತಣ್ತೀವನ್ನು ನೋಡುವುದೇ ಅಥವಾ ಅರಿಯುವುದೇ ವಿಜ್ಞಾನವೆಂದು ಶ್ರೀಕೃಷ್ಣ ವಿವರಿಸುತ್ತಾನೆ. ಸರಳವಾಗಿ ಅಣುವಿನಿಂದ ಹಿಡಿದು ಬುದ್ಧಿವಂತ ಪ್ರಾಣಿ ಮನುಷ್ಯನ ತನಕವೂ, ಪ್ರಕೃತಿಯಲ್ಲಿನ ಚರಾಚರಗಳಲ್ಲಿನ ಆಗುಹೋಗುಗಳಲ್ಲಿಯೂ ಅಡಕವಾಗಿರುವ ಸೂಕ್ಷ್ಮ ಮತ್ತು ಕಾರ್ಯಕಾರಣ ಸಿದ್ಧಾಂತಗಳೇ ಈ ಇಪ್ಪತ್ತೆಂಟು ತಣ್ತೀಗಳು. ಕತ್ತಲೆಯಿಂದಾಗಿಯೇ ದೀಪಗಳು ಹುಟ್ಟಿಕೊಂಡವು. ಆದರೆ ಆ ದೀಪಗಳು ಉರಿಯುವ ಕಾಯಕಕ್ಕೆ ಪೂರಕವಾದ ಅಂಶಗಳು ಇರಲು ಕಾರಣ ಈ ತಣ್ತೀಗಳು. ಮತ್ತು ಇದುವೇ ಪರಮಾತ್ಮ.

ವಿಜ್ಞಾನ ಎನ್ನುವುದು ವಿಶೇಷವಾದ ಜ್ಞಾನ ಎಂಬುದರ ಸಂಕೀರ್ಣ ಪದ. ಈ ವಿಜ್ಞಾನ, ಕಾರಣ ಮತ್ತು ನಿರ್ಧಿಷ್ಟತೆ ಇ¨ªಾಗ ಮಾತ್ರ ಒಪ್ಪುತ್ತದೆ. ಇಪ್ಪತ್ತೆಂಟು ತಣ್ತೀಗಳೂ ಉತ್ಪತ್ತಿ, ಸ್ಥಿತಿ ಮತ್ತು ನಾಶವುಳ್ಳವುಗಳಾಗಿವೆ. ಸೃಷ್ಟಿ, ಸ್ಥಿತಿ ಮತ್ತು ಸಂಹಾರವು ಭಗವಂತನಿಂದಾಗುವಂತದ್ದು. ಅಂದರೆ ಪರಮಾತ್ಮ ತಣ್ತೀ ಇವುಗಳಿಗೆ ಕಾರಣ ಮತ್ತು ಇದೊಂದೇ ಶಾಶ್ವತ. ಶಾಶ್ವತವಾಗಿ ಅನುಗತವಾದುದೇ ವಿಜ್ಞಾನ ಎಂಬುದನ್ನು ಭಗವಂತನು ಹೇಳುತ್ತಾನೆ. ಜಗತ್ತಿನ ಉದಯ, ಉಳಿವು ಮತ್ತು ಅಳಿವಿಗೆ ಕಾರಣವಾಗಿ ಜಗತ್ತನ್ನು ತನ್ನಲ್ಲಿ ಲೀನವಾಗಿಸಿಕೊಂಡು ಉಳಿಯುವುದೇ ಸತ್‌ ತಣ್ತೀ ಅಂದರೆ ಪರಮಾತ್ಮ ತಣ್ತೀ.

ಇಪ್ಪತ್ತೆಂಟು ತಣ್ತೀಗಳೂ ನಮ್ಮ ಜೀವನದ ಗುಟ್ಟನ್ನು ಹೇಳುತ್ತವೆ. ವೈಶಾಖದ ಸುಡುಬಿಸಿಲಿಗೆ ಬರಡಾದ ಭೂಮಿಯಲ್ಲಿ ಹನಿಮಳೆಯೊಂದು ಬಿ¨ªಾಕ್ಷಣ ಚಿಗುರಿ ನಿಲ್ಲುವ ಹಸಿರಿಗೂ ಈ ತಣ್ತೀಗಳೇ ಕಾರಣ. ಜೀವನದ ನಡೆನುಡಿಗಳೂ ತತ್ತಾ$Ìನುಸಾರ ಇ¨ªಾಗ, ಆ ತಣ್ತೀಗಳು ಪರಮಾತ್ಮ ಅಂದರೆ ಸಣ್ತೀಗುಣಸಹಿತವಿ¨ªಾಗ ಮೋಕ್ಷಕ್ಕಿಂತಲೂ ಮಿಗಿಲಾದ ಪರಂಧಾಮ ಸಾಧ್ಯ.

Advertisement

ಬಿದ್ದ ಮಳೆಗೆ ನೆಲದ ತುಂಬೆಲ್ಲ ಹಸಿರು ಚಿಗುರಿದೆ
ಬೀಜ ಉತ್ತವರಾರೋ ಗೊತ್ತಿಲ್ಲ!
ಸಕಲಕೂ ಕಾರಣ ಪರಮಾತ್ಮ ತಣ್ತೀ!

ವಿಷ್ಣು ಭಟ್‌ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next