ಹೊಸದಿಲ್ಲಿ: 2022-23ರ ಆರ್ಥಿಕ ವರ್ಷದ ಒಂದು ತಿಂಗಳನ್ನು ಪೂರ್ಣಗೊಳಿಸಿ ಎರಡನೇ ತಿಂಗಳಿಗೆ ಕಾಲಿಟ್ಟಾಗಿದೆ. ಕಾರ್ಮಿಕರ ದಿನಾಚರಣೆಯೂ ಆಗಿರುವ ಇಂದು ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಅವು ಈ ಕೆಳಗಿನಂತಿವೆ.
ಆರೋಗ್ಯ ಸಂಜೀವಿನಿ ದುಪ್ಪಟ್ಟು
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ “ಆರೋಗ್ಯ ಸಂಜೀವಿನಿ ವಿಮೆ’ಯ ಕವರೇಜ್‌ನ್ನು 10 ಲಕ್ಷ ರೂ.ಗೆ ಏರಿಸಲಾಗಿದೆ. ಈವರೆಗೆ ಈ ವಿಮೆಯ ಕವರೇಜ್ ಮೊತ್ತ ಕೇವಲ 5 ಲಕ್ಷ ರೂ. ಇತ್ತು.
ಆ್ಯಕಿಸ್ ಬ್ಯಾಂಕ್ ಸೇವೆ ದುಬಾರಿ
ಆ್ಯಕ್ಸಿಸ್ ಬ್ಯಾಂಕ್ ತನ್ನ ಎಲ್ಲ ಸೇವೆಗಳ ಶುಲ್ಕಗಳನ್ನು ದುಬಾರಿ ಮಾಡಿದೆ. ಹಾಗೆಯೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ 10,000 ರೂ. ಇದ್ದ ಕನಿಷ್ಠ ಠೇವಣಿಯನ್ನು ಇಂದಿನಿಂದ 15,000 ರೂ.ಗೆ ಏರಿಸಲಾಗಿದೆ. ಕನಿಷ್ಠ ಠೇವಣಿ ಇಡದವರಿಗೆ ದಂಡ ವಿಧಿಸಲಾಗುತ್ತದೆ.
ಐಪಿಒ-ಯುಪಿಐ ಸಿಹಿ
ಷೇರು ಮಾರುಕಟ್ಟೆ ಪ್ರಿಯರಿಗೆ ಯುಪಿಐ ಸಿಹಿ ಸುದ್ದಿ ಕೊಟ್ಟಿದೆ. ಯುಪಿಐ ಮೂಲಕ ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡುವವರಿಗೆ ಗರಿಷ್ಠ ಬಿಡ್ ಮೊತ್ತವನ್ನು 2 ಲಕ್ಷ ರೂ. ಇಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಗ್ಯಾಸ್ ಬೆಲೆ ಏರಿಕೆ
ಭಾರತದ ಎಲ್ಲ ಗ್ಯಾಸ್ ಸಿಲಿಂಡರ್ ಸಂಸ್ಥೆಗಳು ತಿಂಗಳ ಮೊದಲ ದಿನದಂದು ಬೆಲೆಗಳಲ್ಲಿ ಬದಲಾವಣೆ ತರುತ್ತವೆ. ಹಾಗಾಗಿ ಇಂದು ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ.