Advertisement
ಗ್ರಾಚುಯಿಟಿ ಎನ್ನುವುದು, ಉದ್ಯೋಗದಾತನು ತನ್ನ ಉದ್ಯೋ ಗಿಗೆ, ಅವನು ನಿವೃತ್ತನಾದಾಗ, ರಾಜೀನಾಮೆ ನೀಡಿದಾಗ ಅಥವಾ ಯಾವುದೇ ಕಾರಣಕ್ಕೆ ಕೆಲಸ ಬಿಟ್ಟಾಗ ನಿವೃತ್ತಿ ಸೌಲಭ್ಯ ಎಂದು ನೀಡುವ ಮೊತ್ತ. ಇದು ಕೆಲವು ಷರತ್ತುಗಳಿಗೆ, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಉದ್ಯೋಗಿಯು ಕನಿಷ್ಠ ಐದು ವರ್ಷಗಳ ಕಾಲ ಆ ಕಂಪೆನಿಯಲ್ಲಿ ಸೇವೆ ಸಲ್ಲಿಸಿರಬೇಕು. ಅಕಸ್ಮಾತ್ ಐದು ವರ್ಷ ಸೇವೆ ಸಲ್ಲಿಸುವ ಮೊದಲೇ ನಿಧನ ಹೊಂದಿದರೆ, ಸೇವೆಯ ಅವಧಿಯ ಅನುಪಾತದಲ್ಲಿ ಈ ಮೊತ್ತವನ್ನು ನೀಡಲಾಗುವುದು.
ಹೀಗೆ ಪರಿಹಾರದ ರೂಪದಲ್ಲಿ ಸಿಗುವ ಗ್ರಾಚುಯಿಟಿ ಹಣದ ಮೊತ್ತ ಒಬ್ಬ ಉದ್ಯೋಗಿಯ ಸೇವೆಯ ಕೊನೇ ತಿಂಗಳ ಸಂಬಳ ಮತ್ತು ಆತನ ಒಟ್ಟೂ ಸೇವೆಯ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಸೇವೆಯ ಅವಧಿ ಆರು ತಿಂಗಳುಗಳಿಗಿಂತ ಹೆಚ್ಚು ಇದ್ದರೆ ಅದನ್ನು ಪೂರ್ಣ ವರ್ಷವಾಗಿ ಪರಿಗಣಿಸಲಾಗುವುದು. ಪೂರ್ಣಗೊಳಿಸಿದ ಪ್ರತಿಯೊಂದು ವರ್ಷಕ್ಕೆ 15 ದಿನಗಳ ಸಂಬಳವನ್ನು ನೀಡಲಾಗುವುದು. ಉದ್ಯೋಗಿಯು 25 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದರೆ, ಆ ಸೇವಾ ಅವಧಿಯನ್ನು 26 ವರ್ಷ ಎಂದು ಪರಿಗಣಿಸಲಾಗುತ್ತದೆ. ಸಂಸ್ಥೆ ನೀಡುವ ಗಿಫ್ಟ್!
ಗ್ರಾಚುಯಿಟಿ ಲೆಕ್ಕ ಹಾಕುವಾಗ ಮೊತ್ತ ಎಷ್ಟೇ ಅದರೂ ಗರಿಷ್ಠ ಮೊತ್ತ 20 ಲಕ್ಷವನ್ನು ಮೀರ ಬಾರದು ಗ್ರಾಚುಯಿಟಿಯನ್ನು ತನ್ನ ಉದ್ಯೋಗಿಗೆ ಸಂಸ್ಥೆಯು ನೀಡುವ ಗಿಫ್ಟ್ ಎಂದು ಪರಿಗಣಿಸಲಾಗುತ್ತಿದ್ದು, ಇದನ್ನು ಉದ್ಯೋಗಿಯ ಯಾವುದೇ ಬಾಕಿಗೆ ಅಟ್ಯಾಚ್ ಮಾಡಲಾಗದು. ಆದರೆ ಉದ್ಯೋಗಿಯು ತನ್ನ ಕೃತ್ಯ ದಿಂದ ಅಥವಾ ಕರ್ತವ್ಯ ಎಸಗದೇ ಸಂಸ್ಥೆಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ, ಆ ಹಾನಿಯ ಮೊತ್ತವನ್ನು ಗ್ರಾಚುಯಿಟಿಯಿಂದ ಕಡಿತ ಮಾಡಬಹುದು. ಹಾಗೆಯೇ ಉದ್ಯೋ
ಗಿಯು ಯಾವುದಾದರೂ ನೀಚತನದ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅಂಥ ಸಂದರ್ಭದಲ್ಲಿ ಗ್ರಾಚುಯಿಟಿಯನ್ನು ತಡೆಹಿಡಿಯಲೂಬಹುದು.
Related Articles
Advertisement