Advertisement
ಕೂದಲು ಹಸಿಯಾಗಿರುವಾಗ ಹೀಗೆಲ್ಲಾ ಮಾಡಬೇಡಿ… -ಕಠಿಣವಾಗಿ ಬಾಚಬೇಡಿ
ಕೂದಲು ಹಸಿ ಇರುವಾಗ, ಬಾಚಣಿಗೆ ಉಪಯೋಗಿಸಲೇಬಾರದು. ಜೋರಾಗಿ ಒತ್ತಿ ಬಾಚಿದರೆ ಕೂದಲು ಉದುರಲು, ಕವಲೊಡೆಯಲು ಶುರುವಾಗುತ್ತದೆ. ಅಗತ್ಯವಿದ್ದಲ್ಲಿ, ಉದ್ದ ಹಲ್ಲಿನ ಬಾಚಣಿಗೆಯ ಬದಲು, ಅಗಲ ಹಲ್ಲಿನ ಬಾಚಣಿಗೆಯನ್ನು ಮಾತ್ರ ಬಳಸಿ.
ಕಾಲೇಜು-ಆಫೀಸ್‌ಗೆ ಹೋಗುವವರು, ಗಡಿಬಿಡಿಯಲ್ಲಿ ಕೂದಲನ್ನು ಬಿಸಿಗಾಳಿ (ಹೇರ್ ಡ್ರೈಯರ್) ಮೂಲಕ ಒಣಗಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬಿಸಿಗಾಳಿ ನೇರವಾಗಿ ತಲೆಗೆ ತಾಗುವುದರಿಂದ, ಕೂದಲಿನ ಬುಡ ಶುಷ್ಕವಾಗಿ ತಲೆಹೊಟ್ಟು ಪ್ರಾರಂಭವಾಗುತ್ತದೆ. -ತಕ್ಷಣ ಹೊರಗೆ ಹೋಗಬೇಡಿ
ಬಿಸಿಲಿನಿಂದಾಗಿ ಒದ್ದೆ ಕೂದಲು ಬೇಗ ರಫ್ ಆಗಿ ಬಿಡುತ್ತದೆ. ಕೂದಲಿನ ತೇವವನ್ನು ಶಾಖ ಹೀರಿಕೊಂಡಾಗ ತಲೆನೋವು ಬರುವ, ಕೂದಲು ಉದುರುವ ಸಾಧ್ಯತೆ ಹೆಚ್ಚು.
Related Articles
ಒಣಗಿದ ಕೂದಲಿಗಿಂತ ಒದ್ದೆ ಕೂದಲು 3 ಪಟ್ಟು ಹೆಚ್ಚು ಬಲಹೀನವಾಗಿರುತ್ತದೆ. ಹೀಗಾಗಿ ಬೆರಳುಗಳಿಂದ ಕೂದಲ ಸಿಕ್ಕನ್ನು ಬಿಡಿಸುವುದರಿಂದ ಕೂದಲು ಉದುರುವುದು ತಪ್ಪುತ್ತದೆ.
Advertisement
-ಹೇರ್‌ಬ್ಯಾಂಡ್‌ನಿಂದ ಬಿಗಿಯಬಾರದುಒದ್ದೆ ಕೂದಲು ತುಂಬಾ ಸೂಕ್ಷ್ಮವಾಗಿರುತ್ತದೆ. ಅದನ್ನು, ಹೇರ್‌ಬ್ಯಾಂಡ್‌ನಿಂದ ಬಿಗಿಯಾಗಿ ಕಟ್ಟಿದರೆ, ಕೂದಲು ಉದುರುವುದು ಹೆಚ್ಚುತ್ತದೆ. – ಟವೆಲ್ ಕಟ್ಟಬೇಡಿ
ಒದ್ದೆ ಕೂದಲಿಗೆ ತುಂಬಾ ಹೊತ್ತು ಟಾವೆಲ್ ಕಟ್ಟುವುದರಿಂದಲು ಕೂದಲು ಸಹಜವಾಗಿ ಒಣಗುವುದಕ್ಕೆ, ತಡೆಯಾಗುತ್ತದೆ. ಇದರಿಂದ ಕೂದಲು, ತೇವಾಂಶವನ್ನು ಹೀರಿಕೊಂಡು ಒರಟಾಗುತ್ತದೆ. -ಸುಲಭಾ ಆರ್. ಭಟ್