Advertisement
ಕೆಲವು ವರ್ಷಗಳಿಂದ ಪಶ್ಚಿಮಘಟ್ಟ ವ್ಯಾಪ್ತಿಯ ದಕ್ಷಿಣಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಪ್ರಕರಣಗಳು ಜನರಲ್ಲಿ ತೀವ್ರ ಆತಂಕ ಉಂಟು ಮಾಡಿವೆ. ಕಳೆದ ವರ್ಷ ನಡೆದ ಶಿರೂರು ಗುಡ್ಡ ಕುಸಿತ ಪ್ರಕರಣವಂತೂ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳ ದುಷ್ಪರಿಣಾಮಕ್ಕೆ ಉದಾಹರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಭೂ ಕುಸಿತ ತಡೆಯುವುದಕ್ಕಾಗಿ ಶಾಶ್ವತ ಪರಿಹಾರ ಕ್ರಮಗಳನ್ನು ಹುಡುಕುವುದಕ್ಕೆ ಮುಂದಾಗಿದ್ದು, ಎಸ್‌ಡಿಎಂಎಫ್ (ಸ್ಟೇಟ್ ಡಿಸಾಸ್ಟರ್ ಮಿಟಿಗೇಶನ್ ಫಂಡ್) ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಯೋಜನೆ ರೂಪಿಸಿದೆ.
Related Articles
ಶಾಶ್ವತ ಪರಿಹಾರವೆಂದರೆ ಮತ್ತೆ ಗುಡ್ಡ ಅಗೆಯುವುದು ಅಥವಾ ನಿರ್ಮಾಣ ಕಾರ್ಯವಲ್ಲ. ಭೂ ಕುಸಿತದ ಭೀತಿ ಇರುವ ಕಡೆಗಳಲ್ಲಿ ಆರ್‌ಸಿಸಿ ಕೇಸ್ ಹಾಕಲಾಗುತ್ತದೆ. ಇಲ್ಲವಾದರೆ ಹುಲ್ಲು, ಗಿಡ, ಬೇರು ಗಟ್ಟಿ ಇರುವ ತಳಿಯ ಸಸ್ಯಗಳನ್ನು ಆ ಪ್ರದೇಶದಲ್ಲಿ ಬೆಳೆಸಿ ಮಣ್ಣಿಗೆ ನೈಸರ್ಗಿಕ ರಕ್ಷಣ ಕವಚ ನಿರ್ಮಿಸಲಾಗುತ್ತದೆ. ರಸ್ತೆ ಕಾಮಗಾರಿಯಿಂದ ಗುಡ್ಡ ಕೊರೆದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಇಳಿಜಾರು ತಗ್ಗಿಸಲಾಗುತ್ತದೆ.
Advertisement
ತೀರಾ ಇಳಿಜಾರಾಗಿ ಗುಡ್ಡ ಕೊರೆದಿರುವುದರಿಂದಲೇ ಕುಸಿತ ಹೆಚ್ಚುತ್ತಿದೆ. ಜತೆಗೆ ನೀರಿನ ಹರಿವು ಕಾಮಗಾರಿಗಳಿಂದ ಅಡ್ಡಗಟ್ಟಲ್ಪಟ್ಟಿದ್ದರೆ ಅವುಗಳನ್ನು ತೆರವು ಮಾಡಲಾಗುತ್ತದೆ. ಈ 6 ಜಿಲ್ಲೆಗಳಲ್ಲಿ ಇಂಥ ಸಾವಿರಾರು ಸ್ಥಳಗಳನ್ನು ಗುರುತಿಸಲಾಗಿದ್ದು, ಇನ್ನು ಮುಂದೆ ಯಾವುದೇ ಬೃಹತ್ ಕಾಮಗಾರಿ ಪ್ರಾರಂಭಿಸುವಾಗಲೇ ಭೂಕುಸಿತ ಪರಿಹಾರದ ಬಗ್ಗೆ ಪೂರ್ವಭಾವಿ ಉಪಕ್ರಮವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ನಿಯಮ ವಿಧಿಸುವುದಕ್ಕೂ ಕಂದಾಯ ಇಲಾಖೆ ಚಿಂತಿಸಿದೆ.
ಗಡ್ಕರಿಗೆ ಶೀಘ್ರ ಪತ್ರಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗಳಿಂದಲೇ ಭೂಕುಸಿತ ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಕಂದಾಯ ಇಲಾಖೆ ಕಳುಹಿಸಿದೆ. ಇದರ ಆಧಾರದ ಮೇಲೆ ಪರಿಹಾರ ಕಾಮಗಾರಿಯಲ್ಲಿ ಕೈಜೋಡಿಸಿ ಎಂಬ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಎನ್‌ಎಚ್‌ಎ ಈ ಬಗ್ಗೆ ಗಮನ ಹರಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುವುದಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತ ಹೆಚ್ಚುತ್ತಿರುವುದು ಆತಂಕಕಾರಿ. ಇದನ್ನು ತಡೆಯುವುದಕ್ಕೆ ಯೋಜನೆ ರೂಪಿಸುವುದು ಸರಕಾರದ ಕರ್ತವ್ಯ. ರಾಜ್ಯ ಸರಕಾರದ ಸಂಚಿತ ನಿಧಿಗಳಿಂದಲೇ ಹಣ ಹೊಂದಿಸುತ್ತೇವೆ. ಸಾಧ್ಯವಾಗದೆ ಇದ್ದರೆ ವಿಶ್ವಬ್ಯಾಂಕ್ ಸಹಯೋಗ ಪಡೆಯುತ್ತೇವೆ. ಈ ಕಾಮಗಾರಿಗಳು ನೆಪ ಮಾತ್ರಕ್ಕಲ್ಲ, ವಾಸ್ತವವಾಗಿ ಸಮಸ್ಯೆ ನಿವಾರಣೆ ಮಾಡುತ್ತದೆ ಎಂಬ ವಿಶ್ವಾಸವಿದೆ. -ಕೃಷ್ಣಬೈರೇಗೌಡ, ಕಂದಾಯ ಸಚಿವ ಭೂಕುಸಿತದ ರಕ್ಷಣೆ ಹೇಗೆ?
– ದ. ಕನ್ನಡ, ಉಡುಪಿ, ಉ. ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಭೂಕುಸಿತ ಸಮಸ್ಯೆ
– ಭೂ ಕುಸಿತದ ಭೀತಿ ಇರುವ ಕಡೆಗಳಲ್ಲಿ ಆರ್‌ಸಿಸಿ ಕೇಸ್ ರಚನೆ ಅಥವಾ ಗಟ್ಟಿ ಬೇರಿನ ಮರಗಿಡ ಬೆಳೆಸಲು ಯೋಜನೆ
– ರಸ್ತೆ ಕಾಮಗಾರಿಯಿಂದ ಗುಡ್ಡ ಕೊರೆದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಇಳಿಜಾರು ತಗ್ಗಿಸುವುದು
– ನೀರಿನ ಹರಿವು ಕಾಮಗಾರಿಗಳಿಂದ ಅಡ್ಡಗಟ್ಟಲ್ಪಟ್ಟಿದ್ದರೆ ಅವುಗಳನ್ನು ತೆರವುಗೊಳಿಸುವುದು
– ಬೃಹತ್ ಕಾಮಗಾರಿ ಪ್ರಾರಂಭಿಸುವಾಗಲೇ ಭೂಕುಸಿತ ಪರಿಹಾರ ಉಪಕ್ರಮ ಕಡ್ಡಾಯ