ಪಶ್ಚಿಮ ಬಂಗಾಳ: ಉದ್ಘಾಟನೆಯಾದ ನಾಲ್ಕನೇ ದಿನಕ್ಕೆ ಹೌರಾ-ನ್ಯೂ ಜಲ್ಪೈಗುರಿ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಕುರಿತು ಎನ್‌ಐಎ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿದೆ.
ಸೋಮವಾರ ಸಂಜೆ ಮಾಲ್ಡಾ ಪಟ್ಟಣದಿಂದ ಸುಮಾರು 50 ಕಿಮೀ ದೂರದಲ್ಲಿರುವ ಕುಮಾರ್‌ಗಂಜ್ ರೈಲು ನಿಲ್ದಾಣದ ಬಳಿ ಘಟನೆ ನಡೆದಿದ್ದು ಯಾವುದೇ ಗಾಯಗಳಾಗಿರುವ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲ್ಲೆಸೆತದಿಂದ ರೈಲಿನ ಕೋಚ್ ಸಂಖ್ಯೆ C13 ನ ಗಾಜಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Related Articles
ಇದನ್ನೂ ಓದಿ: ಸರ್ಕಾರಿ ಗೌರವದ ನಂತರವೂ ಶ್ರೀಗಳ ದರ್ಶನ ಇರಲಿದೆ: ಸಿಎಂ ಬೊಮ್ಮಾಯಿ
ಸೋಮವಾರ ಸಂಜೆ 5.10 ಕ್ಕೆ ಈ ಘಟನೆ ನಡೆದ ನಂತರ ರೈಲನ್ನು ಮಧ್ಯದಲ್ಲಿ ಎಲ್ಲಿಯೂ ನಿಲ್ಲಿಸದೆ ಮಾಲ್ಡಾ ಟೌನ್ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.