Advertisement

ಕಿವೀಸ್‌ಗೆ ಸೋಲುಣಿಸಿದ ವಿಂಡೀಸ್‌

02:17 AM May 30, 2019 | Sriram |

ಬ್ರಿಸ್ಟಲ್: ವೆಸ್ಟ್‌ ಇಂಡೀಸಿನ ಬೃಹತ್‌ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಭಾರೀ ಹೋರಾಟ ನಡೆಸಿದ ನ್ಯೂಜಿಲ್ಯಾಂಡ್‌ ಅಂತಿಮವಾಗಿ 91 ರನ್ನುಗಳಿಂದ ಶರಣಾಗಿದೆ.

Advertisement

ಮಂಗಳವಾರದ ಬ್ರಿಸ್ಟಲ್ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 421 ರನ್‌ ಪೇರಿಸಿ ಸವಾಲೊಡ್ಡಿತ್ತು. ಜವಾಬಿತ್ತ ನ್ಯೂಜಿಲ್ಯಾಂಡ್‌ 47.2 ಓವರ್‌ಗಳಲ್ಲಿ 330ಕ್ಕೆ ಆಲೌಟ್ ಆಯಿತು.

ಕೆರಿಬಿಯನ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ವಿಕೆಟ್ ಕೀಪರ್‌ ಟಾಮ್‌ ಬ್ಲಿಂಡೆಲ್ 106 ರನ್‌ ಬಾರಿಸಿ ಅಬ್ಬರಿಸಿದರು (89 ಎಸೆತ, 8 ಬೌಂಡರಿ, 5 ಸಿಕ್ಸರ್‌). ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಉತ್ತಮ ಬ್ಯಾಟಿಂಗ್‌ ನಡೆಸಿ 64 ಎಸೆತಗಳಿಂದ 85 ರನ್‌ ಮಾಡಿದರು (11 ಬೌಂಡರಿ, 2 ಸಿಕ್ಸರ್‌). 39 ರನ್‌ ಮಾಡಿದ ಐಶ್‌ ಸೋಧಿ ಅವರದು ಅನಂತರದ ಹೆಚ್ಚಿನ ಗಳಿಕೆ.

ವೆಸ್ಟ್‌ ಇಂಡೀಸ್‌ ಪರ ಕಾರ್ಲೋಸ್‌ ಬ್ರಾತ್‌ವೇಟ್ 3, ಫ್ಯಾಬಿಯನ್‌ ಅಲೆನ್‌ 2 ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌-49.2 ಓವರ್‌ಗಳಲ್ಲಿ 421. ನ್ಯೂಜಿಲ್ಯಾಂಡ್‌-47.2 ಓವರ್‌ಗಳಲ್ಲಿ 330 (ಬ್ಲಿಂಡೆಲ್ 106, ವಿಲಿಯಮ್ಸನ್‌ 85, ಬ್ರಾತ್‌ವೇಟ್ 75ಕ್ಕೆ 3, ಅಲೆನ್‌ 47ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next