ಡಬ್ಲಿನ್: ಮುನ್ನೂರು ಪ್ಲಸ್ ಮೊತ್ತದ ಏಕದಿನ ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ಆತಿಥೇಯ ಐರ್ಲೆಂಡ್‌ಗೆ 5 ವಿಕೆಟ್‌ಗಳ ಸೋಲುಣಿಸಿದೆ.
ಶನಿವಾರ ನಡೆದ ತ್ರಿಕೋನ ಸರಣಿಯ ಈ ದೊಡ್ಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 5 ವಿಕೆಟಿಗೆ 327 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 47.5 ಓವರ್‌ಗಳಲ್ಲಿ 5 ವಿಕೆಟಿಗೆ 331 ರನ್ ಬಾರಿಸಿ ಗೆದ್ದು ಬಂದಿತು.
ಆರಂಭಕಾರ ಸುನೀಲ್ ಆ್ಯಂಬ್ರಿಸ್ ಅವರ ಅಮೋಘ 148 ರನ್ (126 ಎಸೆತ, 19 ಬೌಂಡರಿ, 1 ಸಿಕ್ಸರ್) ವಿಂಡೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ವೆಸ್ಟ್ ಇಂಡೀಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಆ್ಯಂಬ್ರಿಸ್ ಪಾಲಿಗೆ ಇದು ಮೊದಲ ಶತಕ ಸಂಭ್ರಮ.
ಐರ್ಲೆಂಡ್‌ನ ಬೃಹತ್ ಮೊತ್ತಕ್ಕೆ ಕಾರಣವಾದದ್ದು ವನ್‌ಡೌನ್ ಬ್ಯಾಟ್ಸ್ ಮನ್ ಆ್ಯಂಡ್ರೂ ಬಾಲ್ಬಿರ್ನಿ ಬಾರಿಸಿದ ಅತ್ಯಾಕರ್ಷಕ ಶತಕ. 124 ಎಸೆತ, 11 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಆರಂಭಕಾರ ಪಾಲ್ ಸ್ಟರ್ಲಿಂಗ್ 77 ರನ್, ಅನುಭವಿ ಬ್ಯಾಟ್ಸ್‌ಮನ್ ಕೆವಿನ್ ಓ ಬ್ರಿಯಾನ್ 63 ರನ್ ಕೊಡುಗೆ ಸಲ್ಲಿಸಿದರು.
ಸಂಕ್ಷಿಪ್ತ ಸ್ಕೋರ್: ಐರ್ಲೆಂಡ್-5 ವಿಕೆಟಿಗೆ 327 (ಬಾಲ್ಬಿರ್ನಿ 135, ಸ್ಟರ್ಲಿಂಗ್ 77, ಕೆವಿನ್ 63, ಗ್ಯಾಬ್ರಿಯಲ್ 47ಕ್ಕೆ 2). ವೆಸ್ಟ್ ಇಂಡೀಸ್-47.5 ಓವರ್‌ಗಳಲ್ಲಿ 5 ವಿಕೆಟಿಗೆ 331 (ಆ್ಯಂಬ್ರಿಸ್ 148, ಚೇಸ್ 48, ಕಾರ್ಟರ್ ಔಟಾಗದೆ 43, ರ್‍ಯಾಂಕಿನ್ 65ಕ್ಕೆ 3).
ಪಂದ್ಯಶ್ರೇಷ್ಠ: ಸುನೀಲ್ ಆ್ಯಂಬ್ರಿಸ್.