Advertisement

ಭಾರತ ತಂಡದ ವಿಂಡೀಸ್‌ ಪ್ರವಾಸ

11:27 PM Jun 13, 2019 | Sriram |

ಸೇಂಟ್‌ ಜಾನ್ಸ್‌ (ಆಂಟಿಗುವಾ): ಭಾರತ ಕ್ರಿಕೆಟ್‌ ತಂಡ ಆಗಸ್ಟ್‌ನಲ್ಲಿ ಟೆಸ್ಟ್‌ ಸರಣಿಗಾಗಿ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ತೆರಳಲಿದೆ. ಇದು ಈ ವರ್ಷ ವಿದೇಶದಲ್ಲಿ ಭಾರತ ಆಡಲಿರುವ ಏಕೈಕ ಟೆಸ್ಟ್‌ ಸರಣಿ. ಗಮನಾರ್ಹ ಸಂಗತಿಯೆಂದರೆ, ಇದೇ ವರ್ಷದಿಂದ ಆರಂಭವಾಗಲಿರುವ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಅನ್ನು ಭಾರತ ಈ ಪ್ರವಾಸದಿಂದಲೇ ಆರಂಭಿಸಲಿದೆ.

Advertisement

ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ 2 ವರ್ಷ ಸತತವಾಗಿ ನಡೆಯಲಿದೆ. ಸ್ವದೇಶ ಮತ್ತು ವಿದೇಶದಲ್ಲಿ ಎಲ್ಲ ತಂಡಗಳು ಆಡಲಿವೆ. 2 ವರ್ಷದ ಬಳಿಕ ಒಟ್ಟಾರೆ ಫ‌ಲಿತಾಂಶದ ಆಧಾರದಲ್ಲಿ ಚಾಂಪಿಯನ್‌ ತಂಡವನ್ನು ನಿರ್ಧರಿಸಲಾಗುತ್ತದೆ. ಭಾರತ ಆ. 22ರಿಂದ 26ರ ವರೆಗೆ ಸೇಂಟ್‌ಜಾನ್ಸ್‌ನಲ್ಲಿ ಮೊದಲ ಟೆಸ್ಟ್‌, ಆ. 30ರಿಂದ ಸಬೀನಾ ಪಾರ್ಕ್‌ನಲ್ಲಿ 2ನೇ ಪಂದ್ಯವನ್ನು ಆಡಲಿದೆ.

ವಿಂಡೀಸ್‌ ಪ್ರವಾಸ ಟಿ20 ಸರಣಿಯಿಂದ ಆರಂಭವಾಗಲಿದೆ. ಮೊದಲೆರಡು ಪಂದ್ಯ ಆ. 3 ಮತ್ತು 4ರಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿದೆ. ಅಮೆರಿಕದಲ್ಲಿ ಭಾರೀ ಪ್ರಮಾಣದ ಭಾರತೀಯರಿರುವುದರಿಂದ ಅವರನ್ನು ಈ ಮೂಲಕ ಸೆಳೆಯಲು ಯತ್ನಿಸಲಾಗಿದೆ. 3ನೇ ಪಂದ್ಯ ಆ. 6ರಂದು ಗಯಾನದಲ್ಲಿ ನಡೆಯಲಿದೆ.

ಏಕದಿನ ಸರಣಿ
ಆ. 8ರಂದು ಮೊದಲನೇ ಏಕದಿನ ಪಂದ್ಯ ದಕ್ಷಿಣ ಅಮೆರಿಕದಲ್ಲಿ ನಡೆಯಲಿದೆ. ಇದು ಮುಗಿದೊಡನೆ ಸರಣಿ ವಿಂಡೀಸ್‌ನಲ್ಲಿ ಮುಂದುವರಿಯಲಿದೆ. ಆ. 11 ಮತ್ತು 14ರಂದು ಟ್ರಿನಿಡಾಡ್‌ನ‌ ಕ್ವೀನ್ಸ್‌ಪಾರ್ಕ್‌ನಲ್ಲಿ 2 ಮತ್ತು 3ನೇ ಪಂದ್ಯನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next