Advertisement

ಕಳಪೆ ತೀರ್ಪು: ಹೋಲ್ಡಿಂಗ್‌ ತರಾಟೆ

11:40 PM Jun 13, 2019 | Team Udayavani |

ಲಂಡನ್‌: ಕಮೆಂಟರಿ ಹೇಳುವಾಗ ಅಂಪಾಯರ್‌ಗಳನ್ನು ಟೀಕಿಸಬಾರದು ಎಂದಿರುವ ಐಸಿಸಿಯನ್ನು ವೆಸ್ಟ್‌ ಇಂಡೀಸ್‌ನ ಮಾಜಿ ವೇಗಿ ಹಾಗೂ ಪ್ರಸ್ತುತ ಕಮೆಂಟೇಟರ್‌ ಆಗಿರುವ ಮೈಕೆಲ್‌ ಹೋಲ್ಡಿಂಗ್‌ ಇ-ಮೈಲ್‌ ಒಂದರಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ವೆಸ್ಟ್‌ ಇಂಡೀಸ್‌-ಆಸ್ಟ್ರೇಲಿಯ ಪಂದ್ಯದಲ್ಲಿ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಗೆರೆ ದಾಟಿದ್ದರೂ ಅಂಪಾಯರ್‌ ಅದನ್ನು ಗಮನಿಸದೆ ಮುಂದಿನ ಬಾಲ್‌ನಲ್ಲಿ ಕ್ರಿಸ್‌ ಗೇಲ್‌ಗೆ ಎಲ್‌ಬಿಡಬ್ಲ್ಯು ತೀರ್ಪು ನೀಡಿರುವ ಪ್ರಸಂಗವನ್ನು ಉಲ್ಲೇಖೀಸಿರುವ ಹೋಲ್ಡಿಂಗ್‌, “ನಿಜವಾಗಿ ಮೊದಲಿನ ಎಸೆತದಲ್ಲಿ ಬೌಲರ್‌ ಗೆರೆ ದಾಟಿ ರುವುದರಿಂದ ಅನಂತರದ ಎಸೆತ ಫ್ರೀ ಹಿಟ್‌ ಆಗಬೇಕಿತ್ತು. ಇದನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆ?’ ಎಂದು ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯದವರು ಪದೇ ಪದೇ ಅಪೀಲು ಮಾಡಿ ಒತ್ತಡ ಹಾಕಿದಾಗ ಔಟ್‌ ನೀಡುವ ಅಂಪಾಯರ್‌ಗಳನ್ನೂ ಹೋಲ್ಡಿಂಗ್‌ ಟೀಕಿಸಿದ್ದಾರೆ.

ಐಸಿಸಿಯ ಪ್ರಸಾರ ಹಕ್ಕುಗಳ ಪಾಲುದಾರರಾಗಿರುವ ಹು ಬೆವನ್‌, ಕಮೆಂಟ್ರಿ ಹೇಳುವ ಸಂದರ್ಭದಲ್ಲಿ ಹೋಲ್ಡಿಂಗ್‌ ಅಂಪಾಯರ್‌ಗಳನ್ನು ಟೀಕಿಸಿರುವುದನ್ನು ಆಕ್ಷೇಪಿಸಿ ಇ-ಮೇಲ್‌ ರವಾನಿಸಿದ್ದರು.

ಕ್ರಿಕೆಟ್‌ ಘನತೆ ಕಾಪಾಡಿ…
ಇದಕ್ಕೆ ಪ್ರತಿಕ್ರಿಯಿಸಿದ ಹೋಲ್ಡಿಂಗ್‌, “ಈ ಅಂಪಾಯರ್‌ಗಳು ಒಂದು ವೇಳೆ ಫಿಫಾದಲ್ಲಿದ್ದಿದ್ದರೆ ಗಂಟುಮೂಟೆ ಕಟ್ಟಿಕೊಂಡು ಮನೆಗೆ ಹೋಗಬೇಕಿತ್ತು. ಅವರಿಗೆ ಇನ್ನೊಂದು ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತಿರಲಿಲ್ಲ. ಮಾಜಿ ಕ್ರಿಕೆಟಿಗನಾಗಿ ನನಗೆ ಅನಿಸುವುದೇನೆಂದರೆ, ಕ್ರಿಕೆಟಿನ ಘನತೆಯನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಉದ್ದೇಶ ತಪ್ಪು ಮಾಡಿರುವ ಅಂಪಾಯರ್‌ಗಳನ್ನು ರಕ್ಷಿಸುವುದೇ?’ ಎಂದು ಖಾರವಾಗಿ ಕೇಳಿದ್ದಾರೆ.

Advertisement

ಆದರೆ ಈ ಚಕಮಕಿಯ ಬಳಿಕ ಐಸಿಸಿ ಮತ್ತು ಹೋಲ್ಡಿಂಗ್‌ ಇಬ್ಬರೂ ವಿವಾದ ಮುಕ್ತಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next