Advertisement

ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಸೌಹಾರ್ದ ಸಹಕಾರಿ ಸಂಘ: ಚುನಾವಣಾ ಪ್ರಚಾರ ಜೋರು

12:39 PM Dec 15, 2021 | Team Udayavani |

ದಾಂಡೇಲಿ: ಟ್ಯಾಕ್ಟರ್, ಹೊಲಿಗೆ ಯಂತ್ರ, ಕಂಪ್ಯೂಟರ್, ಸ್ಟೀಲ್ ಪಾತ್ರೆ, ತಾಮ್ರದ ಕೊಡ ,ಬಾಣ ಮೊದಲಾದವುಗಳು ಇಲ್ಲಿವೆ. ಇದು ಮಾರಾಟಕ್ಕೆಂತಾ ಅಂದ್ಕೊಂಡ್ರಾ, ಅದು ಮಾರಾಟಕ್ಕಲ್ರಿ, ಇದು ಬಂಗೂರನಗರದಲ್ಲಿರುವ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇಂದು ಡಿಲಕ್ಸ್ ಸಭಾಭವನದಲ್ಲಿ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ಮತಗಟ್ಟೆಯ ಹೊರಗಡೆ ಅಭ್ಯರ್ಥಿಗಳು ತಮ್ಮ ತಮ್ಮ ಮತ ಪ್ರಚಾರಕ್ಕಾಗಿ ನಡೆಸಿದ ಕಟ್ಟ ಕಡೆಯ ಪ್ರಯತ್ನ.

Advertisement

10 ಸ್ಥಾನಗಳಿಗೆ ನಡೆಯುತ್ತಿರುವ ಮತದಾನದ ಹಿನ್ನಲೆಯಲ್ಲಿ ಡಿಲಕ್ಸ್ ಸಭಾಭವನದ ಹೊರಗಡೆ ಅಭ್ಯರ್ಥಿಗಳು ತಮ್ಮ ತಮ್ಮ ಚಿಹ್ನೆಗಳು ಮತದಾರರನ್ನು ಸುಲಭವಾಗಿ ಸೆಳೆಯಲೆಂದು ತಮ್ಮ ತಮ್ಮ ಪ್ರಚಾರದ ಕೌಂಟರ್ ಗಳಲ್ಲಿ ಟ್ರ್ಯಾಕ್ಟರ್, ಹೊಲಿಗೆ ಯಂತ್ರ, ತಾಮ್ರದ ಕೊಡ, ಸ್ಟೀಲ್ ಪಾತ್ರೆ, ಬಾಣ, ಕಂಪ್ಯೂಟರ್ ಮೊದಲಾದವುಗಳನ್ನು ಮತ ಪ್ರಚಾರಕ್ಕೆ ಬಳಸಿ ಮತದಾರರನ್ನು ತನ್ನತ್ತ ಸೆಳೆಯಲು ಮುಂದಾಗಿದ್ದಾರೆ.

ಮತಗಟ್ಟೆಯ ಸುತ್ತಲು ಕಿಕ್ಕಿರಿದು ಜನ ಸೇರಿದ್ದು, 46 ಅಭ್ಯರ್ಥಿಗಳ ಪರವಾಗಿ ಅವರವರ ಬೆಂಬಲಿಗರು ತಮ್ಮದೇ ಆದ ಶೈಲಿಯಲ್ಲಿ ಮತ ಯಾಚಿಸುತ್ತಿರುವುದು ಕಂಡು ಬಂದಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next