Advertisement
ಎಡರಂಗ ಮತ್ತು ಟಿಎಂಸಿ ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿದೆ. 25 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಕಮ್ಯುನಿಸ್ಟ್ ಪಕ್ಷದ ನಾಯಕ. ಈ ಒಂದೇ ಇತಿಹಾಸ ಬಂಗಾಲದಲ್ಲಿ ಎಡರಂಗದ ಬಲಾ-ಬಲವನ್ನು ಹೇಳುತ್ತದೆ. ಆದರೆ ಕಮ್ಯನಿಸ್ಟ್ ಸಾಮರ್ಥ್ಯವನ್ನು ಮಣಿಸಿ ಕಾಂಗ್ರೆಸ್ ಕೆಲವು ಅವಧಿಗೆ ಸರಕಾರವನ್ನು ನೀಡಿದ್ದರೆ, ಬಳಿಕ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿತ್ತು. ಮಹಾಘಟ್‌ಬಂಧನ್ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸುತ್ತಿವೆ.
ಪಶ್ಚಿಮ ಬಂಗಾಲ ಈ ಬಾರಿ ತೀವ್ರ ಹಣಾ ಹಣಿಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್ ಮತ್ತು ಎಡರಂಗ ಮೈತ್ರಿ ಮಾತುಕತೆ ನಡೆಸಿತ್ತಾದರೂ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡದ ಕಾರಣ ಬರೀ ಕೈಯಲ್ಲಿ ಹಿಂದಿರುಗಿದವು. ಬಂಗಾಲದಲ್ಲಿ ಯಾವುದೇ ಮೈತ್ರಿ ಏರ್ಪಡದೆ ಇರುವುದು ಟಿಎಂಸಿಗೆ ರಹದಾರಿಯಾಗುವ ಸಾಧ್ಯತೆ ಹೆಚ್ಚು. ಮಮತಾಗೆ ಬಿಜೆಪಿಯ ಚಿಂತೆ
2016ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದೆ. ಇದು ಸಹಜವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಿದ್ದೆ ಕೆಡಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 17 ಮತಗಳಿಸಿ, 2 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಇದಾದ 2 ವರ್ಷಗಳ ಬಳಿಕ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆಯ ಪ್ರಮಾಣ ಶೇ. 10ಕ್ಕೆ ಇಳಿದರೂ 3 ಕ್ಷೇತ್ರಗಳಲ್ಲಿ ವಿಜಯದ ಪತಾಕೆ ಹಾರಿಸಿತ್ತು.
Related Articles
Advertisement
ಮದರಿಹತ್, ಕಾಂಘಾಪುರ್ ಸದರ್, ಬಸಿನಾಬ್ ನಗರ್ ಅಧಿಕ ವೋಟ್ ಶೇರ್ ಗಳಿಸುವ ಮೂಲಕ ಕಮಲ ಪಾಳಯದಲ್ಲಿ ಗೆಲುವಿನ ನಗೆ ಕಂಡರು. ಉತ್ತರ ಬಂಗಾಳದ ಮದರಿಹತ್ ವಿಧಾನಸಭಾ ಕ್ಷೇತ್ರದಲ್ಲಿ 44 ಶೇ. ಮತಗಳಿಸುವ ಮೂಲಕ ಮನೋಜ್ ಟಿಗ್ಗ ಎಂಬವರು ದಾಖಲೆ ನಿರ್ಮಿಸಿದ್ದರು. ಇದು ಎಡರಂಗದ “ರೆವಲ್ಯೂಶನರಿ ಸೋಷಿಯಲ್ ಪಾರ್ಟಿ’ಯ ಕೈಯಲ್ಲಿತ್ತು.
ಬಳಿಕ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಎಂಸಿ ಅನ್ನು ಕೆಲವೆಡೆ ಪರಾಜಯ ಗೊಳಿಸಿದರೆ, ಕೆಲವೆಡೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾ ಯಿತು. ವಿಧಾನಸಭೆಗೆ ನಡೆದ ಮಹಾಸ್ಥಳ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಎಂಸಿ ಜಯಗಳಿಸಿದ್ದರೆ, ಬಿಜೆಪಿ ಕೇವಲ 62,827 ಮತಗಳ ಅಂತರದಲ್ಲಿ ಸೋಲೊಪ್ಪಿಕೊಳ್ಳುವುದರ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಮೂಲಕ ಕಾಂಗ್ರೆಸ್ ಹಾಗೂ ಎಡರಂಗವನ್ನು ಮೂರನೇ ಸ್ಥಾನಕ್ಕೆ ದೂಡಿತ್ತು.