Advertisement

ರೈತರ ಮನೆಯಿಂದ 1 ಹಿಡಿ ಅಕ್ಕಿ ಸಂಗ್ರಹ

01:39 AM Jan 10, 2021 | Team Udayavani |

ಕಾಟ್ವಾ: ಪ. ಬಂಗಾಲದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ರೈತ ಬ್ರಹ್ಮಾಸ್ತ್ರ ಪ್ರಯೋ ಗಕ್ಕೆ ಬಿಜೆಪಿ ಮುಂದಾ ಗಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ “ಕೃಷಿಕ್‌ ಸುರಕ್ಷಾ’ ಮತ್ತು “ಏಕ್‌ ಮುಟ್ಟಿ ಚಾವಲ್‌’ (ಒಂದು ಹಿಡಿ ಅಕ್ಕಿ) ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

Advertisement

ನೂತನ ಕಾಯ್ದೆ ಬಗ್ಗೆ ವಿವರಿಸಿ, ಪ್ರತಿ ರೈತನ ಮನೆಯಿಂದ ಒಂದು ಹಿಡಿ ಅಕ್ಕಿ ಯನ್ನು ಬಿಜೆಪಿ ಸಂಗ್ರಹಿಸಲಿದೆ. ದಿಲ್ಲಿ ಯಲ್ಲಿನ ರೈತ ಪ್ರತಿಭಟನೆ ಹೊತ್ತಿನಲ್ಲೇ ಕೇಸರಿ ಪಾಳಯದ ಈ ರಣತಂತ್ರ ಪ. ಬಂಗಾಲದ ಚುನಾವಣ ಕಣದಲ್ಲಿ ಹೈವೋಲ್ಟೆàಜ್‌ ಸೃಷ್ಟಿಸಿದೆ.

ಭಾರೀ ತಡವಾಯಿತು!: ಈ ವೇಳೆ ಮಾತನಾ ಡಿದ ನಡ್ಡಾ, “ಪಿಎಂ ಕಿಸಾನ್‌ ಯೋಜನೆಯ ಹಣವನ್ನು ಇಷ್ಟು ದಿನ ತಡೆದಿದ್ದ ದೀದಿ ಈಗ ಅದನ್ನು ಬಿಡುಗಡೆ ಮಾಡಲು ಮುಂದಾ ಗಿದ್ದಾರೆ. ಆದರೆ ದೀದೀ… ಭಾರೀ ತಡವಾಗಿ ಈ ನಿರ್ಧಾರ ಕೈಗೊಂಡಿದ್ದೀರಿ. ಸೋಲುವ ಸಮಯದಲ್ಲಿ ನಿಮಗೆ ಜ್ಞಾನೋದಯ ವಾದಂತಿದೆ’ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದರು.

ಮೋದಿ ರೈತಪರ: “ಹಿಂದಿನ ಸರಕಾರ 2013ರ ಬಜೆಟ್‌ನಲ್ಲಿ ಕೃಷಿರಂಗಕ್ಕೆ ಕೇವಲ 22 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು. ಪ್ರಧಾನಿ ಮೋದಿ ಈ ಅನುದಾನವನ್ನು 6 ಪಟ್ಟು ಹೆಚ್ಚಿಸಿದ್ದು, ಈಗ 1,34,000 ಕೋಟಿ ರೂ. ಮೀಸಲಿಡಲಾಗಿದೆ. ಎಂಎಸ್‌ಪಿಯನ್ನು ಕೂಡ ಮೋದಿ 1.5ರಷ್ಟು ಹೆಚ್ಚಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೇತಾಜಿ 125ನೇ ವರ್ಷಾಚರಣೆಗೆ ಯೋಜನೆ :

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಪ. ಬಂಗಾಲದಲ್ಲಿ ನೇತಾಜಿ ಸುಭಾಶ್‌ಚಂದ್ರ ಬೋಸ್‌ರ 125ನೇ ಜನ್ಮವರ್ಷಾಚರಣೆಗೆ ಅದ್ದೂರಿ ಯೋಜನೆ ಕೈಗೊಂಡಿದ್ದಾರೆ. ಜ.23ರಂದು ನೇತಾಜಿಯ 125ನೇ ಜನ್ಮ ವರ್ಷಾಚರಣೆ ಆರಂಭಗೊಳ್ಳಲಿದ್ದು, ಇದಕ್ಕಾಗಿ 85 ಸದಸ್ಯರ ಸಮಿತಿ ರಚನೆಯಾಗಿದೆ. ಇದರಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಕಮ್ಯುನಿಸ್ಟ್‌ ನೇತಾರ ಬುದ್ಧದೇವ ಭಟ್ಟಾಚಾರ್‌ಜೀ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಸುವೇಂದು ಅಧಿಕಾರಿ ಅವರಿಗೂ ಸ್ಥಾನ ಕಲ್ಪಿಸಲಾಗಿದೆ.

ಕೇಂದ್ರದ ಕೃಷಿ ಕಾಯ್ದೆ ಪರ ಸುಪ್ರೀಂಗೆ ಅರ್ಜಿ ಸಲ್ಲಿಕೆ :

ಕೃಷಿ ಕಾಯ್ದೆಗಳು ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದ್ದು, ಈ ಕಾಯ್ದೆಗಳ ಕುರಿತ ಅರ್ಜಿಗಳೊಂದಿಗೆ ನಮ್ಮನ್ನೂ ದಾವೆಗೆ ಸೇರಿಸಿ ಎಂದು ಕೋರಿ ರೈತ ಸಂಘಟನೆಗಳ ಒಕ್ಕೂಟ ಶನಿವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಜತೆಗೆ, ವಿಚಾರಣೆ ವೇಳೆ ಇತರೆ ರೈತ ಸಂಘಟನೆಗಳಿಗೂ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಜ. 11ರಂದು ಕೃಷಿ ಕಾಯ್ದೆ ಕುರಿತ ಅರ್ಜಿಗಳ ವಿಚಾರಣೆ ಸುಪ್ರೀಂನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next