Advertisement

ಪುತ್ಥಳಿ ಹೆಸರಲ್ಲಿ ರಾಜಕೀಯ ಜಟಾಪಟಿ

01:10 AM May 17, 2019 | mahesh |

ಹೊಸದಿಲ್ಲಿ/ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ಬಳಿಕ ನಡೆದ ಹಿಂಸಾಚಾರದಿಂದ ಎದ್ದ ರಾಜಕೀಯ ಬೆಂಕಿಯು ಸದ್ಯಕ್ಕೆ ಆರುವ ಲಕ್ಷಣ ಕಾಣುತ್ತಿಲ್ಲ. ಹಿಂಸಾಚಾರ ಪ್ರಕರಣದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವಿನ ಜಟಾಪಟಿ ಮುಂದುವರಿದಿದೆ.

Advertisement

ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪರಸ್ಪರ ಕೆಸರೆರಚಾಟ ನಡೆಸಿಕೊಂಡಿದ್ದಾರೆ. “ಟಿಎಂಸಿ ಗೂಂಡಾಗಳು ಧ್ವಂಸಗೈದ ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಬೃಹತ್‌ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ನಿರ್ಮಾಣ ಮಾಡುತ್ತೇನೆ’ ಎಂದು ಪ್ರಧಾನಿ ಮೋದಿ ಘೋಷಿಸಿ ದರೆ, “ಬಿಜೆಪಿ ಕಾರ್ಯಕರ್ತರಿಂದ ಧ್ವಂಸವಾದ ವಿದ್ಯಾ ಸಾಗರ್‌ರ ಪ್ರತಿಮೆಯ ಮರುನಿರ್ಮಾಣಕ್ಕೆ ನಿಮ್ಮಿಂದ ಒಂದು ಪೈಸೆಯೂ ಬೇಕಾಗಿಲ್ಲ’ ಎಂದು ಮಮತಾ ಗುಡುಗಿದ್ದಾರೆ.

ಪಂಚಲೋಹದ ಪ್ರತಿಮೆ ನಿರ್ಮಾಣ: ಉತ್ತರ ಪ್ರದೇಶದಲ್ಲಿ ಗುರುವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ದೀರ್ಘ‌ಕ ಾಲದಿಂದ ನಾವು ದೀದಿಯ ವರ್ತನೆ ಗಳನ್ನು ನೋಡುತ್ತಾ ಬಂದಿದ್ದೇವೆ. ಈಗ ಇಡೀ ದೇಶವೇ ಅದನ್ನು ನೋಡಿದೆ. ಈಶ್ವರಚಂದ್ರ ವಿದ್ಯಾ  ಸಾಗರ್‌ ಅವರ ಚಿಂತನೆಗೆ ನಮ್ಮ ಸರಕಾರ ಬದ್ಧವಾಗಿದೆ. ಅವರ ಪ್ರತಿಮೆ ಧ್ವಂಸವಾದ ಅದೇ ಸ್ಥಳದಲ್ಲಿ ನಾವು ವಿದ್ಯಾಸಾಗರ್‌ ಅವರ ಬೃಹತ್‌ ಪಂಚ ಲೋಹದ ಪ್ರತಿಮೆ ನಿರ್ಮಾಣ ಮಾಡು ತ್ತೇವೆ. ಆ ಮೂಲಕ ಟಿಎಂಸಿ ಗೂಂಡಾಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ’ ಎಂದಿದ್ದಾರೆ. ಅಲ್ಲದೆ, ಪ.ಬಂಗಾಳದ ದಮ್‌ ದಮ್‌ನಲ್ಲಿ ನನ್ನ ರ್ಯಾಲಿ ನಡೆ ಯ ಲಿದ್ದು, ನನ್ನ ಹೆಲಿಕಾಪ್ಟರ್‌ ಲ್ಯಾಂಡ್‌ ಆಗಲು ದೀದಿ ಅವಕಾಶ ನೀಡುತ್ತಾರೋ, ಇಲ್ಲವೋ ನೋಡ ಬೇಕು ಎಂದೂ ಹೇಳಿದ್ದಾರೆ.

2 00 ವರ್ಷಗಳ ಪರಂಪರೆಗೆ ಧಕ್ಕೆ: ಪ್ರಧಾನಿ ಮೋದಿ ಹೇಳಿಕೆಗೆ ಪ.ಬಂಗಾಳದಲ್ಲಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ವಿದ್ಯಾಸಾಗರ್‌ ಅವರ ಪ್ರತಿಮೆ ನಿರ್ಮಿಸುತ್ತೇನೆ ಎಂದು ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ನಿಂತು ಹೇಳುತ್ತಿದ್ದಾರೆ. ವಿದ್ಯಾ ಸಾಗರ್‌ರ ಪ್ರತಿಮೆ ನಿರ್ಮಿಸಲು ನಮಗೆ ಬಿಜೆ ಪಿ ಯ ಹಣ ಬೇಕಿಲ್ಲ. ಬಂಗಾಲದಲ್ಲಿ ಸಾಕಷ್ಟು ಸಂಪ ನ್ಮೂಲಗಳಿವೆ. ನಿಮ್ಮ ಮುಂದೆ ಕೈಚಾಚಲು ಬಂಗಾಲ ಸಿದ್ಧವಿಲ್ಲ’ ಎಂದಿದ್ದಾರೆ. ಜತೆಗೆ, ಪ್ರತಿಮೆ ನಿರ್ಮಿಸುವುದಾಗಿ ಹೇಳಿರುವ ನೀವು ಪ.ಬಂಗಾಲದ 200 ವರ್ಷಗಳ ಪರಂಪರೆಗೆ ಧಕ್ಕೆ ತಂದಿದ್ದೀರಿ. ನಿಮ್ಮ ಪಕ್ಷವನ್ನು ಬೆಂಬಲಿಸುವವರನ್ನು ಈ ಸಮಾಜ ಸ್ವೀಕರಿಸುವುದಿಲ್ಲ ಎಂದೂ ದೀದಿ ಹೇಳಿದ್ದಾರೆ. ಅಲ್ಲದೆ, ಪ್ರತಿಮೆಯನ್ನು ಧ್ವಂಸಗೈದಿದ್ದು ಬಿಜೆಪಿ ಕಾರ್ಯ ಕರ್ತರು ಎನ್ನುವುದಕ್ಕೆ ನಮ್ಮ ಬಳಿ ವೀಡಿಯೋ ಸಾಕ್ಷ್ಯಗಳಿವೆ. ಆದರೆ ನೀವು ಟಿಎಂಸಿಯವರ ಕೃತ್ಯ ಎಂದು ಹೇಳುತ್ತಿದ್ದೀರಿ. ಅದಕ್ಕೆ ಪುರಾವೆ ತೋರಿಸಿ. ಈ ರೀತಿಯ ಹಸಿ ಸುಳ್ಳುಗಳನ್ನು ಹೇಳುತ್ತಿರುವ ಪ್ರಧಾನಿ ಒಂದು ಬಾರಿಯಲ್ಲ, ಸಾವಿರಾರು ಬಾರಿ ತಮ್ಮ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಯಬೇಕು ಎಂದೂ ಮಮತಾ ಹೇಳಿದ್ದಾರೆ.

ಆಯೋಗದ ವಿರುದ್ಧ ಗರಂ: ನಿನ್ನೆ ರಾತ್ರಿ ನರೇಂದ್ರ ಮೋದಿಯವರ ಪ್ರಚಾರ ರ್ಯಾಲಿ ಬಳಿಕ ಟಿಎಂಸಿಗೆ ಯಾವುದೇ ಸಭೆ ನಡೆಸಲು ಅವಕಾಶ ನೀಡ ಬಾರದು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಸಲ್ಲಿಸಿದೆಯಂತೆ. ಚುನಾವಣಾ ಆಯೋ ಗವು ಬಿಜೆಪಿಯ ಸಹೋದರನಂತೆ ಕೆಲಸ ಮಾಡುತ್ತಿದೆ. ಹಿಂದೆಲ್ಲ ಆಯೋಗ ನಿಷ್ಪಕ್ಷಪಾತ ದಿಂದ ಕೆಲಸ ಮಾಡುತ್ತಿತ್ತು. ಆದರೆ, ಈಗ ಬಿಜೆ ಪಿಯ ಕೈಗೊಂಬೆಯಾಗಿದೆ. ಆಯೋಗವು ಬಿಜೆಪಿಗೆ ತನ್ನನ್ನು ತಾನು ಮಾರಿಕೊಂಡಿದೆ. ಈ ರೀತಿ ಹೇಳಿ ದ್ದಕ್ಕೆ ನನ್ನನ್ನು ಜೈಲಿಗಟ್ಟಿದರೆ, ಜೈಲಿಗೆ ಹೋಗಲೂ ನಾನು ಸಿದ್ಧ ಎಂದೂ ಮಮತಾ ಹೇಳಿದ್ದಾರೆ.

Advertisement

ದೀದಿ ಬೆನ್ನಿಗೆ ನಿಂತ ವಿಪಕ್ಷಗಳು: ಪ. ಬಂಗಾಳ ದಲ್ಲಿ ಒಂದು ದಿನ ಮುಂಚಿತವಾಗಿಯೇ ಚುನಾ ವಣಾ ಪ್ರಚಾರಕ್ಕೆ ತೆರೆ ಎಳೆದ ಚುನಾವಣಾ ಆಯೋಗದ ಮೇಲೆ ವಿಪಕ್ಷಗಳು ಮುಗಿಬಿದ್ದಿವೆ. ಆಯೋಗದ ನಿರ್ಧಾರವನ್ನು ಬಿಎಸ್ಪಿ ನಾಯಕಿ ಮಾಯಾ ವತಿ, ಡಿಎಂಕೆಯ ಸ್ಟಾಲಿನ್‌, ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ದಿಲ್ಲಿ ಸಿಎಂ ಕೇಜ್ರಿವಾಲ್‌ ಸೇರಿದಂತೆ ಪ್ರತಿಪಕ್ಷಗಳ ಹಲವು ನಾಯಕರು ಖಂಡಿಸಿದ್ದು, ಸಿಎಂ ಮಮತಾಗೆ ಬೆಂಬಲ ಸೂಚಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಕೂಡ ಆಯೋಗದ ವಿರುದ್ಧ ಕಿಡಿಕಾರಿದ್ದು, ಆಯೋಗವು ತನ್ನ ವಿಶ್ವಾ ಸಾರ್ಹತೆ ಮತ್ತು ಸ್ವಾತಂತ್ರ್ಯವನ್ನೇ ಕಳೆದುಕೊಂಡಿದೆ. ಆಯೋಗಕ್ಕೆ ನೇಮಕ ಪ್ರಕ್ರಿಯೆ ಪರಿಷ್ಕರಿಸಬೇಕಾದ ಸಮಯ ಬಂದಿದೆ ಎಂದೂ ಹೇಳಿದೆ. ಇದೇ ವೇಳೆ, ಪ.ಬಂಗಾಲದಲ್ಲಿ ನ್ಯಾಯಸಮ್ಮತ ಚುನಾ ವಣೆ ನಡೆಸುವಂತೆ ಬಿಜೆಪಿ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಸಾಕ್ಷ್ಯ ನಾಶಕ್ಕೆ ಯತ್ನ: ಪ್ರಧಾನಿ ಮೋದಿ
ಪ್ರತಿಮೆ ಧ್ವಂಸ ಪ್ರಕರಣದ ಸಾಕ್ಷ್ಯ ನಾಶಕ್ಕೆ ಪ.ಬಂಗಾಳ ಪೊಲೀಸರು ಯತ್ನಿಸು ತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಬಂಗಾಲದ ಮಥುರಾ ಪುರದಲ್ಲಿ ಗುರುವಾರ ರ್ಯಾಲಿ ನಡೆಸಿದ ಮೋದಿ, “ಸೋಲು ಖಚಿತ ಎಂಬುದು ಗೊತ್ತಾಗಿ ದೀದಿಗೆ ಹತಾಶೆಯಾಗಿದೆ. ಅದಕ್ಕಾಗಿ ಅವರು ನನ್ನನ್ನೂ ಜೈಲಿಗೆ ಅಟ್ಟುವ ಬಗ್ಗೆ ಮಾತನಾಡುತ್ತಿದ್ದಾರೆ. ವಿದ್ಯಾಸಾಗರ್‌ರ ಪ್ರತಿಮೆ ಧ್ವಂಸ ಮಾಡಿದ್ದು ಟಿಎಂಸಿ ಗೂಂಡಾಗಳು. ಆದರೆ, ಪೊಲೀಸರು ಸಾಕ್ಷ್ಯ ನಾಶಕ್ಕೆ ಯತ್ನಿ ಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಇಲ್ಲಿ ದುರ್ಗಾ ಪೂಜೆಯೂ ಸಮಸ್ಯೆ, ಸರಸ್ವತಿ ಪೂಜೆ ಮಾಡಿ ದರೂ ಸಮಸ್ಯೆ, ಜೈ ಶ್ರೀ ರಾಂ ಎಂದು ಕೂಗಿದರೂ ಸಮಸ್ಯೆ. ಒಟ್ಟಿನಲ್ಲಿ ಬಂಗಾಲವನ್ನು ನರಕವನ್ನಾಗಿ ಪರಿವರ್ತಿಸಲಾಗಿದೆ ಎಂದೂ ಮೋದಿ ಕಿಡಿಕಾರಿದ್ದಾರೆ.

ಕಲಾವಿದನ ಪಡಿಪಾಟಲು!
ರಾಜಕೀಯ ದೊಂಬರಾಟದಲ್ಲಿ ಜನಸಾಮಾನ್ಯರು ಹೇಗೆ ದಾಳಗಳಾಗುತ್ತಾರೆ ಎಂಬುದಕ್ಕೆ ನಿದರ್ಶನ ಇಲ್ಲಿದೆ. ದಕ್ಷಿಣ ಕೋಲ್ಕತಾದ ಬಿಜೆಪಿ ಅಭ್ಯರ್ಥಿ ಚಂದ್ರ ಬೋಸ್‌ ಅವರು ಹಿರಿಯ ಕಲಾವಿದ ಕೃಷ್ಣಾ ಬೈರಾಗಿಗೆ ವಿದ್ಯಾಸಾಗರ್‌ ಅವರ ವೇಷಭೂಷಣ ತೊಡಿಸಿ ಪ್ರಚಾರಕ್ಕೆ ಕೊಂಡೊಯ್ಯಲು ಸಿದ್ಧವಾಗಿದ್ದರು. ಈ ವಿಷಯ ಹತ್ತಿರದ ಜಾಧವ್‌ಪುರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಮ್‌ ಹಾಜ್ರಾಗೆ ಗೊತ್ತಾಗಿ, ತಮ್ಮ ಕಡೆಯವರಿಂದ ವಿದ್ಯಾಸಾಗರ್‌ ವೇಷದಲ್ಲಿದ್ದ ಬೈರಾಗಿಯವರನ್ನು ಅಪ ಹರಿಸಿ ತಂದು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಿದ್ದಾರೆ!

ಫ‌ಲಿತಾಂಶದ ದಿನವೇ ವಿಪಕ್ಷಗಳ ಸಭೆ
ಈ ಚುನಾವಣೆ ವೇಳೆ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾವಣೆ ಫ‌ಲಿತಾಂಶ ಸಮೀಪಿಸುತ್ತಿ ದ್ದಂತೆ ಚುರುಕಾಗಿದ್ದಾರೆ. ಯಾವುದೇ ಪಕ್ಷಕ್ಕೆ ಬಹು ಮತ ಬರದೇ ಇದ್ದ ಸನ್ನಿವೇಶ ಎದು ರಾಗಬಹುದಾದ್ದರಿಂದ ಈಗಾಗಲೇ ಕಾಂಗ್ರೆಸ್‌ ಪರ ಒಲವು ಹೊಂದಿರುವ ಎಲ್ಲ ಪಕ್ಷಗಳ ಮುಖಂ ಡರ ಜೊತೆ ಮಾತುಕತೆ ನಡೆಸಲು ನಿರ್ಧ  ರಿಸಿದ್ದಾರೆ. ಡಿಎಂಕೆಯ ಸ್ಟಾಲಿನ್‌, ಬಿಜೆ ಡಿಯ ಪಾಟ್ನಾಯಕ್‌, ವೈಎಸ್‌ಆರ್‌ ಮುಖ್ಯಸ್ಥ ಜಗನ್‌, ಟಿಆರ್‌ಎಸ್‌ನ ಕೆಸಿಆರ್‌ರನ್ನು ಭೇಟಿ ಮಾಡುವಂತೆ ಆಪ್ತರನ್ನು ಕಳುಹಿಸಿದ್ದಾರೆ. ಜೆಡಿ ಎಸ್‌, ಎನ್‌ಸಿಪಿ, ಎಸ್‌ಪಿ, ಬಿಎಸ್‌ಪಿ ಜೊತೆಗೂ ಮಾತು ಕತೆ ನಡೆಸಲಾಗುತ್ತಿದೆ. ಕಾಂಗ್ರೆಸ್‌ ಪರ ಮೃದು ಧೋರಣೆ ಹೊಂದಿರುವ ಯಾವ ಪಕ್ಷವನ್ನೂ ಕೈಬಿಡಬಾರದು ಎಂಬ ನಿಲುವನ್ನು ಕಾಂಗ್ರೆಸ್‌ ಹೊಂದಿದ್ದು, ಫ‌ಲಿತಾಂಶದ ದಿನವೇ ವಿಪಕ್ಷಗಳ ಸಭೆ ನಡೆಸಲು ಸೋನಿಯಾ ನಿರ್ಧರಿಸಿದ್ದಾರೆ.

ಹಳದಿ ಸೀರೆಯ ಮಹಿಳೆಗೆ ಬಿಗ್‌ಬಾಸ್‌ಗೆ ಹೋಗುವ ಆಸೆ!
ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಕ್ಲಿಕ್ಕಿಸಿದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗುತ್ತಿದ್ದಂತೆ, ಉತ್ತರ ಪ್ರದೇಶದ ಪಿಡಬ್ಲೂಡಿ ಅಧ ಕಾರಿ ರೀನಾ ದ್ವಿವೇದಿಗೆ ಬಿಗ್‌ಬಾಸ್‌ನ ಮುಂದಿನ ಸೀಸನ್‌ಗೆ ಸ್ಪರ್ಧಿ ಯಾಗಿ ಹೋಗುವ ಮನಸಾಗಿದೆಯಂತೆ. ನನ್ನ ಕುಟುಂಬ ನನ್ನ ಬೆಂಬಲಕ್ಕಿದೆ. ಸೋಷಿ ಯಲ್‌ ಮೀಡಿಯಾದಲ್ಲಿ ನನಗೆ ಸಿಕ್ಕ ಪ್ರತಿಕ್ರಿಯೆಗೆ ನನ್ನ ಕುಟುಂಬ ಖುಷಿ ಯಾಗಿದೆ. ಬಿಗ್‌ಬಾಸ್‌ಗೆ ಆಹ್ವಾನ ಬಂದರೆ ನಾನು ಸ್ಪರ್ಧಿಯಾಗಿ ಹೋಗಲು ಬಯಸಿದ್ದೇನೆ ಎಂದು ಹೇಳಿದ್ದಾರೆ. ಹಳದಿ ಸೀರೆಯುಟ್ಟು ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಕ್ಲಿಕ್ಕಿಸಿದ ಇವರ ಫೋಟೋ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಭಾರೀ ವೈರಲ್‌ ಆಗಿತ್ತು. ಅಂದಹಾಗೆ, ಇವರ ಪುತ್ರ 9ನೇ ತರಗತಿಯಲ್ಲಿ ಓದುತ್ತಿದ್ದಾನೆ!

ಮೋದಿ ಪುಸ್ತಕಕ್ಕೆ ಭಾರೀ ಬೇಡಿಕೆ
ಕೊನೆಯ ಹಂತದ ಮತದಾನಕ್ಕೆ ಅಣಿಯಾಗುತ್ತಿರುವ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ವ್ಯಾಪಕವಾಗಿದೆ. ಇಲ್ಲಿನ ಪ್ರತಿ ಗಲ್ಲಿಯಲ್ಲೂ ಮೋದಿ ಹವಾ ಇದೆ. ಮೋದಿ ಬಗ್ಗೆ ಬರೆದ ಪುಸ್ತಕಗಳಿಗಂತೂ ಇಲ್ಲಿ ಎಲ್ಲಿಲ್ಲದ ಬೇಡಿಕೆ. ದಿ ರಿಯಲ್‌ ಮೋದಿ ಮತ್ತು ನರೇಂದ್ರ ಮೋದಿ: ಏಕ್‌ ಸಕಾರಾತ್ಮಕ್‌ ಸೋಚ್‌ ಎಂಬ ಪುಸ್ತಕಗಳು ಬಿಸಿ ಬಿಸಿ ಚಹಾ ರೀತಿ ಮಾರಾಟವಾಗುತ್ತಿವೆ. ಖಾದಿ ಕುರ್ತಾ ಧರಿಸಿದ ಮೋದಿಯ ಫೋಟೋ ವನ್ನು ಈ ಪುಸ್ತಕಗಳು ಮುಖ ಪುಟದಲ್ಲಿ ಹೊಂದಿವೆ. ಮೋದಿ ನಾಮಪತ್ರ ಸಲ್ಲಿಸುವ ವೇಳೆ ರ್ಯಾಲಿ ಯಲ್ಲಿ ಈ ಪುಸ್ತಕದ ಬೃಹತ್‌ ಪ್ರತಿಯನ್ನು ಪ್ರದರ್ಶಿಸಲಾಗಿತ್ತು. ಈ ಕೃತಿಗಳಲ್ಲಿ ಪ್ರಧಾನಿ ಮೋದಿ ಅವಧಿಯಲ್ಲಿ ಸರಕಾರದ ಸಾಧನೆ ಗಳು ಹಾಗೂ ಅವರ ಜೀವನ ಕುರಿತ ವಿವರ ಗಳಿವೆ. ಸಾಮಾನ್ಯ ವಾಗಿ ರಿಯಲ್‌ ಮೋದಿ ಪುಸ್ತಕ ಇಡೀ ವರ್ಷವೂ ಚೆನ್ನಾಗಿ ಮಾರಾಟ ವಾಗುತ್ತದೆ. ಆದರೆ ಈಗ ಚುನಾವಣೆ ಸಮಯ ಬರು ತ್ತಿದ್ದಂತೆ ಮಾರಾಟದ ಭರಾಟೆ ಜೋರಾಗಿದೆ ಎಂದು ಪುಸ್ತಕ ಮಾರಾಟ ಗಾರರು ಹೇಳುತ್ತಾರೆ.

ಯೋಗಿ ತದ್ರೂಪಿ ಜತೆ ಅಖೀಲೇಶ್‌ ಭೋಜನ!
ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಅವರ ಇತ್ತೀಚಿನ ಎಲ್ಲಾ ರ್ಯಾಲಿಗಳಲ್ಲಿ ಅವರೊಂದಿಗೆ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್‌ ಅವರನ್ನೇ ಹೋಲುವ ವ್ಯಕ್ತಿಯ ಜತೆಗೆ ಅಖೀಲೇಶ್‌ ಅವರು ತಮ್ಮ ಖಾಸಗಿ ವಿಮಾನದಲ್ಲಿ ಊಟ ಮಾಡುತ್ತಿರುವ ಫೋಟೋವೊಂದು ಅಂತರ್ಜಾಲದಲ್ಲಿ ಎಲ್ಲರನ್ನೂ ಆಕರ್ಷಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅಖೀಲೇಶ್‌, “ನಾನು ಸಿಎಂ ಕಾರ್ಯಾಲಯದಿಂದ ಹೊರನಡೆಯುತ್ತಲೇ ಯೋಗಿ ಆದಿತ್ಯನಾಥ್‌ ಅವರು ಕಚೇರಿಯನ್ನು ಶುದ್ಧೀಕರಿಸಿದ್ದರು. ಅವತ್ತೇ ನಾನು ಅವರಿಗೆ ಪೂರಿ ತಿನ್ನಿಸುತ್ತೇನೆಂದು ನಿರ್ಧರಿಸಿದ್ದೆ’ ಎಂದು ಬರೆದಿ ದ್ದಾರೆ. ಸುರೇಶ್‌ ಠಾಕೂರ್‌ ಎಂಬ ಇವರು ನೋಡಲು ಯೋಗಿ ಅವರಂ ತೆಯೇ ಇದ್ದು, ಕಾವಿಯನ್ನೇ ಧರಿಸುವುದರಿಂದ ಅನೇಕರನ್ನು ಇವರು ತಬ್ಬಿಬ್ಬು ಗೊಳಿಸಿದ್ದೂ ಉಂಟು. ರ್ಯಾಲಿಯಲ್ಲೆಲ್ಲೂ ಇವರು ಭಾಷಣ ಮಾಡಿಲ್ಲ. ಆದರೆ, ಅಖೀಲೇಶ್‌ ಅವರು ತಮ್ಮ ಪ್ರತಿ ಭಾಷಣದಲ್ಲೂ ಇವ ರನ್ನು ತೋರಿಸಿ, ಇವರು ಬಾಬಾಜಿ ಎಂದು ಪರಿಚಯಿಸಿ, ಸರಕಾರದ ಲೋಪ ದೋಷಗಳನ್ನು ಇವರ ಬಾಯಿಂದಲೇ ಹೇಳಿಸುತ್ತಾರೆ.

ನಿಮ್ಮ ಹೃದಯ ಎಲ್ಲಿದೆ?: ಪ್ರಿಯಾಂಕಾ
“ಪ್ರಧಾನಿ ಮೋದಿಯವರೇ, ನೀವು ನಿಮಗೆ 56 ಇಂಚಿನ ಎದೆಯಿದೆ ಎಂದು ಹೇಳಿಕೊಳ್ಳುತ್ತೀರಿ. ಆದರೆ, ನಿಮ್ಮ ಹೃದಯ ಎಲ್ಲಿದೆ?’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪ್ರಶ್ನಿಸಿದ್ದಾರೆ. ಗುರುವಾರ ಉತ್ತರಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, “ರಾಷ್ಟ್ರೀಯವಾದ ಎಂಬ ವಿಷಯ ಎತ್ತಿದ ತಕ್ಷಣ ಮೋದಿಯವರು ಪಾಕಿಸ್ಥಾನದ ಬಗ್ಗೆ ಪ್ರಸ್ತಾಪಿಸುತ್ತಾರೆ. ಅವರ ಪ್ರಕಾರ, ರಾಷ್ಟ್ರೀಯವಾದವೆಂದರೆ ಪಾಕ್‌ ವಿರುದ್ಧ ಮಾಡಿದ ಕೆಲಸ ಅಷ್ಟೆ. ಉದ್ಯೋಗ ಹಾಗೂ ರೈತರ ಸಮಸ್ಯೆಗಳು ಅವರಿಗೆ ರಾಷ್ಟ್ರೀಯ ವಾದವಲ್ಲ’ ಎಂದು ಟೀಕಿಸಿದ್ದಾರೆ. ಇದೇ ವೇಳೆ ಬಿಹಾರದಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮೇ 23ರಂದು ಪ್ರಧಾನಿ ಮೋದಿಗೆ ಬೈ ಬೈ ಹೇಳಲಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ ಎಂದಿದ್ದಾರೆ.

ರಾಹುಲ್‌ಗೆ ಮುಜುಗರ
ಮೋದಿಲೈ ಎಂಬ ಶಬ್ದ ವನ್ನು ಹೊಂದಿರುವ ಆಕ್ಸ್‌ಫ‌ರ್ಡ್‌ ಡಿಕ್ಷನರಿ ವೆಬ್‌ಸೈಟ್‌ನ ಪುಟ ವನ್ನೇ ಹೋಲುವ ಪೇಜ್‌ನ ಸ್ಕ್ರೀನ್‌ಶಾಟ್‌ನ್ನು ಪ್ರಕಟಿಸಿದ್ದ ರಾಹುಲ್‌ ಗಾಂಧಿಗೆ ಆಕ್ಸ್‌ ಫ‌ರ್ಡ್‌ ಡಿಕ್ಷನರಿ ತಿರುಗೇಟು ನೀಡಿದೆ. ಮೋದಿಲೈ (ಸುಳ್ಳ ಮೋದಿ) ಎಂಬ ಶಬ್ದಕ್ಕೆ “ಪದೇ ಪದೆ ಸತ್ಯವನ್ನು ಮೋದಿಯಂತೆ ತಿರು ಚುವುದು’ ಎಂಬ ಅರ್ಥವನ್ನು ಉಲ್ಲೇಖೀ ಸಿದ ಪುಟ ಟ್ವೀಟ್‌ ಮಾಡಿದ್ದ ರಾಹುಲ್‌, ಇಂಗ್ಲಿಷ್‌ ಡಿಕ್ಷನರಿಯಲ್ಲಿ ಇದೊಂದು ಹೊಸ ಶಬ್ದ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆಕ್ಸ್‌ಫ‌ರ್ಡ್‌ ಇಂತಹ ಯಾವುದೇ ಶಬ್ದ ನಮ್ಮ ಡಿಕ್ಷನರಿಯಲ್ಲಿಲ್ಲ ಎಂದಿದೆ.

ಎಲ್ಲರಿಗೂ ಏಕೆ ಶಿಕ್ಷೆ: ಕಾಂಗ್ರೆಸ್‌ ಪ್ರಶ್ನೆ
ಅಭಿಷೇಕ್‌ ಮನು ಸಿಂಘ್ವಿ ನೇತೃತ್ವದ ಕಾಂಗ್ರೆಸ್‌ ನಿಯೋಗ ಗುರುವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಬಂಗಾಲದಲ್ಲಿ ಪ್ರಚಾರಕ್ಕೆ ತೆರೆ ಎಳೆದಿದ್ದನ್ನು ಪ್ರಶ್ನಿಸಿದೆ. ಹಿಂಸಾಚಾರ ನಡೆಸಿರುವುದು ಬಿಜೆಪಿಯಾಗಿರುವಾಗ, ಇತರೆ ಪಕ್ಷಗಳಿಗೇಕೆ ಸಮಸ್ಯೆ ಉಂಟು ಮಾಡುತ್ತೀರಿ? ಎಲ್ಲರಿಗೂ ಶಿಕ್ಷೆ ಏಕೆ ವಿಧಿಸು ತ್ತೀರಿ ಎಂದೂ ಕೇಳಿದೆ. ಜತೆಗೆ, ಈ ವಿಚಾರ ದಲ್ಲಿ ಕೋರ್ಟ್‌ ಮೆಟ್ಟಿಲೇರುವ ಅಧಿಕಾ ರವೂ ನಮಗಿದೆ ಎಂದು ಸಿಂ ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಬೆಂಬಲದೊಂದಿಗೆ ಸರಕಾರ ರಚಿಸುವ ಸಾಧ್ಯತೆಯನ್ನು ನಾವು ಅಲ್ಲಗಳೆ ಯುವುದಿಲ್ಲ. ಆದರೆ ಅಂಥ ಸರಕಾರ ಹೆಚ್ಚು ಸ್ಥಿರವಾಗಿರು ವುದಿಲ್ಲ ಮತ್ತು ಹೆಚ್ಚು ದಿನ ನಡೆಯುವುದಿಲ್ಲ. ಮೈತ್ರಿ ಕೂಟದ ಸರ್ಕಾರ ಯಶಸ್ವಿಯಾಗಬೇಕಾದರೆ ಒಂದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸಬೇಕು.
ಎಂ.ವೀರಪ್ಪ ಮೊಲಿ,ಕಾಂಗ್ರೆಸ್‌ ನಾಯಕ

ಸೋಲಿನ ಭೀತಿಯಿಂದಾಗಿ ಚುನಾವಣಾ ಆಯೋಗದ ಮೇಲೆ ವಿಪಕ್ಷಗಳು ದಾಳಿ ಮಾಡುತ್ತಿವೆ. ದೇಶದ ಜನರು ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆಯೇ ಹೊರತು, ಭ್ರಷ್ಟ ಹಾಗೂ ವ್ಯಗ್ರ ವ್ಯವಸ್ಥೆಯನ್ನಲ್ಲ.
ಅರುಣ್‌ ಜೇಟ್ಲಿ, ವಿತ್ತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next