Advertisement
ಇನ್ನೊಂದೆಡೆ, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಮೃತದೇಹವು ಸರ್ಪೋಟಾ ಗ್ರಾಮದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Related Articles
ವಿದ್ಯಾಸಾಗರ್ ಪುತ್ಥಳಿ ಮರುಸ್ಥಾಪನೆ ಕಾರ್ಯಕ್ರಮದ ಬಳಿಕ ಮಾತನಾ ಡಿದ ಸಿಎಂ ಮಮತಾ, ಚುನಾವಣೋತ್ತರ ಹಿಂಸಾಚಾರ ದಲ್ಲಿ ಮಡಿದ 10 ಮಂದಿಯ ಪೈಕಿ 8 ಮಂದಿ ಟಿಎಂಸಿ ಕಾರ್ಯಕರ್ತರು, ಉಳಿದ ಇಬ್ಬರು ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ್ದಾರೆ. ಜತೆಗೆ, ಪ್ರತಿಯೊಂದು ಸಾವೂ ದುರದೃಷ್ಟಕರ. ಎಲ್ಲ 10 ಮಂದಿಯ ಕುಟುಂಬಕ್ಕೂ ಪರಿಹಾರ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದೂ ದೀದಿ ತಿಳಿಸಿದ್ದಾರೆ. ಇದೇ ವೇಳೆ, ಬಿಜೆಪಿ ಬಂಗಾಲವನ್ನು ಗುಜರಾತ್ ಮಾಡಲು ಹೊರಟಿದೆ. ಆದರೆ, ನಾನು ಜೈಲಿಗೆ ಬೇಕಿದ್ದರೂ ಹೋಗುತ್ತೇನೆಯೇ ಹೊರತು, ಬಿಜೆಪಿಯ ಯೋಜನೆ ಸಫಲವಾಗಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.
Advertisement
ದೀದಿ ಭಾಷಣವೇ ಘರ್ಷಣೆಗೆ ಕಾರಣ: ಬಿಜೆಪಿಮೂವರ ಸಾವಿಗೆ ಕಾರಣವಾದ ಸಂದೇಶ್‌ಖಾಲಿ ಹಿಂಸಾಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಪ್ರದೀಪ್ ಮತ್ತು ಸುಕಾಂತಾ ಅವರು ಮನೆಗಳಲ್ಲಿ ಮಲಗಿದ್ದರು. ಟಿಎಂಸಿ ಕಾರ್ಯಕರ್ತರು ಅವರನ್ನು ಹೊರಗೆ ಎಳೆದೊಯ್ದು ಹತ್ಯೆಗೈದರು. ಮಮತಾ ಅವರ ನಿರ್ದೇಶನದ ಮೇರೆಗೆ ತಪ್ಪಿತಸ್ಥರನ್ನು ಇನ್ನೂ ಪೊಲೀಸರು ಬಂಧಿಸುತ್ತಿಲ್ಲ ಎಂದು ರಾಯ್ ಆರೋಪಿಸಿದ್ದಾರೆ.