Advertisement

ವನಿತಾ ಕ್ರಿಕೆಟಿಗರ ಮೇಲೆ ಕಾಮೆಂಟ್‌; ಇಬ್ಬರು ಕಾಮೆಂಟೇಟರ್‌ಗಳಿಗೆ ನಿಷೇಧ ಸುದ್ದಿ ಸುಳ್ಳು

09:35 PM Mar 11, 2023 | Team Udayavani |

ಮುಂಬಯಿ : ವನಿತಾ ಪ್ರೀಮಿಯರ್ ಲೀಗ್ (WPL-2023) ಅನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದ್ದು, ವಿಶ್ವದ ದೊಡ್ಡ ತಂಡಗಳ ಮಹಿಳಾ ಕ್ರಿಕೆಟಿಗರೂ ಈ ಟಿ20 ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮಾರ್ಚ್ 4ರಿಂದ ಆರಂಭವಾದ ಈ ಲೀಗ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಲೀಗ್‌ನಲ್ಲಿ ಕಾಮೆಂಟರಿ ಮಾಡುತ್ತಿದ್ದ ಇಬ್ಬರನ್ನು ವಜಾ ಮಾಡಲಾಗಿದೆ ಎಂದು ಕ್ರಿಕೆಟ್ ವಲಯದಲ್ಲಿ ಭಾರಿ ಸುದ್ದಿಯಾಗಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಗ್ರಾಫಿಕ್ ಒಂದನ್ನು ಹೆಚ್ಚು ಶೇರ್ ಮಾಡಲಾಗುತ್ತಿದ್ದು, ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಮಹಿಳೆಯರ ಫೀಲ್ಡಿಂಗ್ ಪ್ರತಿಭೆಯ ಬಗ್ಗೆ ಕಾಮೆಂಟ್ ಮಾಡಿದ ಕಾರಣಕ್ಕಾಗಿ ಇಬ್ಬರು ಪುರುಷ ಕಾಮೆಂಟೆಟರ್‌ಗಳನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗಿದೆ. ಪಂದ್ಯವೊಂದರಲ್ಲಿ ಮಹಿಳಾ ಕ್ರಿಕೆಟಿಗರೊಬ್ಬರು ಕ್ಯಾಚ್ ಕೈಬಿಟ್ಟ ನಂತರ ಪುರುಷ ವಿವರಣೆಗಾರರು ನಗುತ್ತಾ,
ಆಕೆ ಮಹಿಳೆ, ಹಹ್ಹಹ್ಹ… ಎಂದು ಹೇಳಿದ್ದು, ಇದೆ ಕಾರಣ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲು
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಸ್ವರ ಎದ್ದಿತ್ತು. ಈ ಹಕ್ಕಿನ ಸತ್ಯವನ್ನು ತಿಳಿಯಲು ಜನರು ಎಲ್ಲಾ ಚಾನಲ್‌ಗಳು, ವೆಬ್‌ಸೈಟ್‌ಗಳನ್ನು ಹುಡುಕಲು ಪ್ರಾರಂಭಿಸಿದ್ದು , ಸಂಪೂರ್ಣವಾಗಿ ನಕಲಿ ಎಂದೂ ಹೇಳಲಾಗಿದೆ. ಈ ಪೋಸ್ಟ್ ಅನ್ನು ಟ್ವಿಟರ್, ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಸಂಪೂರ್ಣ ಸುಳ್ಳು

ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಇದು ಮೇಮ್ಸ್ ಮತ್ತು ಜೋಕ್‌ಗಳನ್ನು ಪೋಸ್ಟ್ ಮಾಡುವ ಸಾಮಾಜಿಕ ಮಾಧ್ಯಮ ಪುಟದಿಂದ ಹುಟ್ಟಿಕೊಂಡಿದೆ. ಪೋಸ್ಟ್ ಶೇರ್ ಮಾಡಿರುವ ಟ್ವಿಟ್ಟರ್ ಖಾತೆಯು ಹಾಸ್ಯಾಸ್ಪದ ಎಂದು ಕಾಮೆಂಟ್‌ಗಳಲ್ಲಿ ಸ್ಪಷ್ಟಪಡಿಸಿದೆ.

Advertisement

ಪೋಸ್ಟ್‌ಗೆ ಸಂಬಂಧಿಸಿದ ವೈರಲ್ ಚಿತ್ರವನ್ನು ಹುಡುಕಾಡಿದಾಗ 2019 ರ ಐಪಿಎಲ್ ನದ್ದು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next