Advertisement

ವೆನ್ಲಾಕ್‌ ಆಸ್ಪತ್ರೆ ಲಿಫ್ಟ್ ಸರಿಯಾಗಲಿ

11:30 AM Jun 02, 2019 | Team Udayavani |

ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ದಿನನಿತ್ಯ ಸಾವಿರಾರು ಮಂದಿ ಒಳರೋಗಿ ಹಾಗೂ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲೇ ಅತ್ಯುತ್ತಮ ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಈ ಆಸ್ಪತ್ರೆಗಿದೆ.

Advertisement

ಆದರೆ, ಇಂತಹ ಆಸ್ಪತ್ರೆಗಳಲ್ಲಿ ಕೆಲವೊಂದು ಸೌಲಭ್ಯಗಳು ಇದ್ದರೂ ಉಪಯೋಗಿಸಲಾಗದ ಪರಿಸ್ಥಿತಿಯಲ್ಲಿದೆ. ಪ್ರಮುಖವಾಗಿ ಆಸ್ಪತ್ರೆಯ ಲಿಫ್ಟ್‌. ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೇಲಿನ ಮಹಡಿಗಳಿಗೆ ಹೋಗಿ ಬರಲು ಲಿಫ್ಟ್‌ ವ್ಯವಸ್ಥೆ ಇದ್ದರೂ, ಇದು ಸುಸ್ಥಿತಿಯಲ್ಲಿ ಇಲ್ಲ. ಪದೇ ಪದೇ ಇಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿರುವ ರೋಗಿಗಳು ಹೇಳುವ ಪ್ರಕಾರ ಕಳೆದ ಎರಡು ವರ್ಷಗಳಿಂದಲೂ ಲಿಫ್ಟ್ ಸರಿಯಾಗಿಲ್ಲ. ಇದರಿಂದ ಸೌಲಭ್ಯ ಇದ್ದರೂ ಅದರ ಪ್ರಯೋಜನ ಪಡೆಯಲಾಗದ ಸ್ಥಿತಿಯಲ್ಲಿ ರೋಗಿಗಳಿದ್ದಾರೆ. ಇಲ್ಲಿ ಸುಸ್ತು, ಆಯಾಸ, ಕಾಲು, ಮೊಣಕಾಲು ನೋವಿನಿಂದ ಬಳಲುವ ರೋಗಿಗಳು ಅನೇಕರಿದ್ದಾರೆ. ಅಲ್ಲದೆ ನಡೆಯಲೇ ಸಾಧ್ಯವಾಗದ ರೋಗಿಗಳೂ ಇದ್ದಾರೆ. ಇವರನ್ನು ಮೇಲಿನ ಮಹಡಿಯಿಂದ ಕೆಳ ಭಾಗಕ್ಕೆ, ಕೆಳ ಮಹಡಿಯಿಂದ ಮೇಲ್ಭಾಗಕ್ಕೆ ವೀಲ್ಚೇರ್‌ ಮುಖಾಂತರ ಕೊಂಡೊಯ್ಯಲು ಲಿಫ್ಟ್‌ ಅವಶ್ಯವಾಗಿ ಬೇಕಾಗುತ್ತದೆ. ಆದರೆ ಲಿಫ್ಟ್‌ ಸುಸ್ಥಿತಿಯಲ್ಲಿ ಇಲ್ಲದ ಪರಿಣಾಮ ರೋಗಿಗಳು ಮತ್ತು ಸಂಬಂಧಿಕರು ಮೆಟ್ಟಿಲು ಬಳಸಿಕೊಂಡೇ ನಡೆದಾಡಬೇಕಾಗಿ ಬಂದಿದೆ.

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next