Advertisement

ಡಂಪಿಂಗ್‌ ಯಾರ್ಡ್‌ನಿಂದ ಮಂದಾರ ಪ್ರದೇಶದಲ್ಲಿ ಬಾವಿ ನೀರು ಕಲುಷಿತ

06:36 PM Mar 27, 2017 | Harsha Rao |

ಪಚ್ಚನಾಡಿ: ಹನಿ ನೀರಿಗಾಗಿ ಕಸರತ್ತು ಪಡುವ ಸ್ಥಿತಿಯಲ್ಲಿರುವಾಗ ಇಡೀ ನಗರಕ್ಕೇ ನೀರು ಪೂರೈಸುವ ಹೊಣೆ
ಹೊತ್ತಿರುವ ಮಹಾನಗರಪಾಲಿಕೆಯೇ ನೀರನ್ನು ಕಲುಷಿತಗೊಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಈ ಆರೋಪ ಕೇಳಿಬಂದಿರುವುದು ಪದವು ಪೂರ್ವ ವಾಡ್‌ಧಿìನಿಂದ. ಇದು ಸ್ವತಃ ಮೇಯರ್‌ ಕವಿತಾ ಸನಿಲ್‌
ಪ್ರತಿನಿಧಿಸುವ ವಾರ್ಡ್‌ನ ಪಕ್ಕದ ವಾಡ್‌ì ಆಗಿದೆ. ಪಾಲಿಕೆಯ ಬೇಜವಾಬ್ದಾರಿ ನಡವಳಿಕೆಯಿಂದ ಬಾವಿಯಲ್ಲಿ ನೀರಿ
ದ್ದರೂ ಬಳಸದ ಸ್ಥಿತಿ ಉದ್ಭವಿಸಿದೆ. ಪಾಲಿಕೆಯ ತ್ಯಾಜ್ಯ ವಿಲೇವಾರಿಯ ಪ್ರದೇಶವಾದ ಪಚ್ಚನಾಡಿಯಿಂದ ಕೆಳಗಿರುವ ಮಂದಾರ ಪ್ರದೇಶದಲ್ಲಿ ನೀರು ಕಲುಷಿತವಾಗುತ್ತಿದೆ. ಪಚ್ಚನಾಡಿಯಿಂದ ತ್ಯಾಜ್ಯ ನೀರು ಮಂದಾರ ಪ್ರದೇಶಕ್ಕೆ
ಹರಿಯುತ್ತಿರುವುದರಿಂದ ಇಲ್ಲಿನ ಬಾವಿ ಹಾಗೂ ತೋಡಿನ ನೀರು ಕಲುಷಿತಗೊಳ್ಳುತ್ತಿದೆ. ಇದನ್ನು ಒಪ್ಪದ ಪಾಲಿಕೆ,
ಡಂಪಿಂಗ್‌ ಯಾರ್ಡ್‌ನಿಂದ ನೀರು ಹರಿಯುತ್ತಿಲ್ಲ ಎಂದು ಹೇಳುತ್ತಿದೆ.

ವಿವಿಧ ಸಮಸ್ಯೆ
ಈ ಸಮಸ್ಯೆ ಇಂದಿನದಲ್ಲ. ಹಲವು ವರ್ಷಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ. ಡಂಪಿಂಗ್‌ ಯಾರ್ಡ್‌ನ ಸುತ್ತಮುತ್ತಲಿನಲ್ಲಿ ಸಂತೋಷನಗರ, ಮಂಗಳಾನಗರ
ಹಾಗೂ ಮಂದಾರ ಎಂಬ ಪ್ರದೇಶಗಳಿವೆ. ಇದರಲ್ಲಿ ಸಂತೋಷನಗರ ಹಾಗೂ ಮಂಗಳಾ ನಗರದ ನಾಗರಿಕರು
ದುರ್ನಾತ ಹಾಗೂ ಹೊಗೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಮಂದಾರಕ್ಕೆ ಈ ಕಲುಷಿತ ನೀರಿನ ಸಮಸ್ಯೆ.

ಮಳೆಗಾಲದಲ್ಲಿ ಹೇಳುವಂತಿಲ್ಲ
ಮಳೆಗಾಲದಲ್ಲಿ ಈ ಸಮಸ್ಯೆಯ ಕುರಿತು ಹೇಳುವಂತೆಯೇ ಇಲ್ಲ ಗಂಭೀರ ಸ್ವರೂಪ ತಾಳಿ, ಡಂಪಿಂಗ್‌ ಯಾರ್ಡ್‌ನಿಂದ ವಾಸನೆಯುಕ್ತ ಕೊಳಚೆ ನೀರು ಮಳೆ ನೀರಿನೊಂದಿಗೆ ಹರಿದು ಸ್ಥಳೀಯ ಬಾವಿಗಳಿಗೆ ಸೇರುತ್ತದೆ. ಹೀಗಾಗಿ ಈ ಬೇಸಗೆಯಲ್ಲೂ ಬಾವಿಯಲ್ಲಿ ನೀರಿದ್ದರೂ ಬಳಸದಂತಾಗಿದೆ. ಸುತ್ತಲಿನ ತೋಟಗಳ ಕೆರೆಗಳಲ್ಲೂ ಇದೇ ಸಮಸ್ಯೆ.

ತೋಡಿಗೆ ಸಂಪರ್ಕ ಕಲ್ಪಿಸಿ
ಈ ಭಾಗದಲ್ಲಿ ಹರಿಯುವ ತೋಡೊಂದಿದ್ದು, ಇದಕ್ಕೆ ಕೊಳಚೆ ನೀರಿನ ಸಂಪರ್ಕ ಕಲ್ಪಿಸಬೇಕು. ಇದರಿಂದ ಕೊಳಚೆ
ನೀರು ಸ್ಥಳೀಯ ತೋಟ, ಬಾವಿ, ಕೆರೆಗಳಿಗೆ ಸೇರುವುದು ತಪ್ಪುತ್ತದೆ ಎಂಬುದು ಸ್ಥಳೀಯರ ಆಗ್ರಹ. ಕಳೆದ ಮಳೆಗಾಲದಲ್ಲಿ ದೂರು ನೀಡಿದಾಗ, ಮಳೆಗಾಲವಾದ್ದರಿಂದ ಪ್ರಸ್ತುತ ಕಾಮಗಾರಿ ಸಾಧ್ಯವಿಲ್ಲ ಎಂದಿದ್ದರು.
ಆದರೆ ಈಗ ಬೇಸಗೆಯಾದರೂ ಕಾಮಗಾರಿ ನಡೆಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

Advertisement
Advertisement

Udayavani is now on Telegram. Click here to join our channel and stay updated with the latest news.

Next