Advertisement

ಯೋಜಿತ ನಗರಗಳಿಂದ ದೇಶದ ಚಿತ್ರಣ ಬದಲು: ಪ್ರಧಾನಿ ಮೋದಿ

09:13 PM Mar 01, 2023 | Team Udayavani |

ನವದೆಹಲಿ: ಸ್ವಾತಂತ್ರ್ಯಾನಂತರ ಕನಿಷ್ಠ 75 ನಗರಗಳನ್ನು ಯೋಜನಾಬದ್ಧವಾಗಿ ಬೆಳೆಸಿದ್ದರೆ ಇವತ್ತು ದೇಶದ ಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ಬಜೆಟ್‌ ಬಗ್ಗೆ ವೆಬಿನಾರ್‌ ಒಂದರಲ್ಲಿ ಮಾತನಾಡಿದ ಅವರು, ನಗರ ಯೋಜನೆ, ಅಭಿವೃದ್ಧಿ ಮತ್ತುಸ್ವಚ್ಛತೆ ಎಂಬ ಅಂಶವನ್ನು ಪ್ರಧಾನವಾಗಿ ಚರ್ಚಿಸಿದರು.

Advertisement

“ಸ್ವಾತಂತ್ರ್ಯಾನಂತರ ಕೇವಲ ಒಂದೆರಡು ನಗರಗಳನ್ನು ಮಾತ್ರ ವ್ಯವಸ್ಥಿತವಾಗಿ ಬೆಳೆಸಲಾಗಿದೆ. ಭಾರತ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಆದ್ದರಿಂದ ಭವಿಷ್ಯ ಗಮನಿಸಿ ಮೂಲ ಸೌಕರ್ಯಗಳನ್ನು ಬೆಳೆಸಬೇಕು. ಯೋಜಿತ ನಗರಗಳು ದೇಶದ ಭವಿಷ್ಯವನ್ನು ನಿರ್ಧರಿಸಲಿವೆ’ ಎಂದರು.

ಯಾವಾಗ ಯೋಜನೆ ಅತ್ಯುತ್ತಮವಾಗಿರುತ್ತದೋ, ಆಗ ನಗರಗಳು ವೈರುಧ್ಯದ ಹವಾಮಾನವನ್ನು ತಡೆದುಕೊಳ್ಳುತ್ತವೆ. ನೀರಿಗೂ ಸಮಸ್ಯೆಯಿರುವುದಿಲ್ಲ. ಆದ್ದರಿಂದ ಈ ಗೋಷ್ಠಿಯಲ್ಲಿ ಪಾಲ್ಗೊಂಡವರು, ರಾಜ್ಯಗಳಲ್ಲಿ ಯೋಜಿತ ನಗರ ವಾತಾವರಣವನ್ನು ವೃದ್ಧಿಸುವುದು, ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ತಜ್ಞರನ್ನು ಈ ಕೆಲಸದಲ್ಲಿ ಬಳಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next