Advertisement
ಉದಯವಾಣಿ ಸಮಾಚಾರಬಾಗಲಕೋಟೆ: ಆನ್‌ಲೈನ್ ವಂಚನೆಗೊಳಗಾದವರು ಯಾರೂ ಅನಕ್ಷರಸ್ಥರಲ್ಲ. ಸುಶಿಕ್ಷಿತರೇ. ಮೇಲಾಗಿ ಉದ್ಯಮಿಗಳು, ಸರ್ಕಾರಿ -ಖಾಸಗಿ ನೌಕರರೇ ವಂಚನೆಯ ಜಾಲಕ್ಕೆ ಬಿದ್ದಿದ್ದಾರೆ. ಕೆಲವರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರೆ, ಇನ್ನೂ ಹಲವು ಜನ, ಮಾನಕ್ಕೆ ಹೆದರಿ ಲಕ್ಷಾಂತರ ಹಣ ಕಳೆದುಕೊಂಡರೂ ಸುಮ್ಮನಿದ್ದಾರೆ.
ಪ್ರಕರಣಗಳಲ್ಲಿ ಬರೋಬ್ಬರಿ 4.39 ಕೋಟಿ ಹಣ ವಂಚನೆಗೆ ಒಳಗಾದವರಿದ್ದಾರೆ. ಅವರೆಲ್ಲ ವಿದ್ಯಾವಂತರು ಎಂಬುದು ವಿಶೇಷ.
Related Articles
ಯಿಂದ ವಂಚನೆಗೊಳಗಾದ ಹಣದಲ್ಲಿ 5,91,322 ರೂ. ಅನ್ನು ವಂಚಕರ ಖಾತೆಯಲ್ಲೇ ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಆ ಹಣವನ್ನು ನ್ಯಾಯಾಲಯ ಆದೇಶದ ಬಳಿಕ ಹಿಂದಿರುಗಿಸಲಾಗಿದೆ.
Advertisement
ಇನ್ನು 2020ರಲ್ಲಿ 2 ಪ್ರಕರಣದಲ್ಲಿ 1,00,22,207 ರೂ. ವಂಚನೆಗೆ ಒಳಗಾಗಿದ್ದು, ಅದರಲ್ಲಿ 42,82,756 ರೂ. ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಹಣದಲ್ಲಿ 42,82,756 ರೂ. ವಂಚನೆ ಗೊಳಗಾದವರಿಗೆ ಮರಳಿ ಕೊಡಿಸಲಾಗಿದೆ. 2021ರಲ್ಲಿ 11 ಪ್ರಕರಣದಲ್ಲಿ 65,22,774 ರೂ. ವಂಚನೆಗೊಳಗಾಗಿದ್ದು, ಅದರಲ್ಲಿ 14,63,556 ರೂ. ಸ್ಥಗಿತಗೊಳಿಸಲಾಗಿತ್ತು. ಅದರಲ್ಲಿ 14,63,556 ಹಣವನ್ನು ದೂರುದಾರರಿಗೆ ಹಿಂದುರಿಗಿಸಿ ಕೊಡಲಾಗಿದೆ.
ಮೂರೇ ವರ್ಷದಲ್ಲಿ 45 ಪ್ರಕರಣ: 2020ರವರೆಗೂ ಆನ್‌ಲೈನ್ ವಂಚನೆ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದವು. ಕೊರೊನಾ ಲಾಕ್‌ಡೌನ್ ಬಳಿಕ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಅದರಲ್ಲೂ ಲಾಕ್‌ಡೌನ್ ಬಳಿಕ ಆನ್‌ಲೈನ್ ಶ್ಯಾಪಿಂಗ್ ಕೂಡಾ ಹೆಚ್ಚಾಗಿದ್ದು, ಈ ಆನ್‌ಲೈನ್ ವಂಚನೆಗೆ ಇದೂ ಒಂದುಕಾರಣ ಎನ್ನಬಹುದಾಗಿದೆ. ಕಳೆದ 2022ರಲ್ಲಿ 14 ಪ್ರಕರಣದಲ್ಲಿ 69,67,583 ರೂ. ವಂಚನೆಗೆ ಒಳಗಾಗಿದ್ದು, ಅದರಲ್ಲಿ 35,31,829 ರೂ. ಸ್ಥಗಿತಗೊಳಿಸಲಾಗಿತ್ತು. ಅಷ್ಟೂ ಹಣವನ್ನು ಆ ವರ್ಷ ದೂರುದಾರರಿಗೆ ಹಿಂದುರಿಗಿಸಲಾಗಿದೆ. 2023ರಲ್ಲಿ 26 ಪ್ರಕರಣದಲ್ಲಿ 96,94,809 ರೂ. ವಂಚನೆಯಾಗಿದ್ದು, ಅದರಲ್ಲಿ 52,31,096 ರೂ. ಸ್ಥಗಿತಗೊಳಿಸಲಾಗಿತ್ತು. ಅದರಲ್ಲಿ 37,14,218 ರೂ. ಹಣವನ್ನು ದೂರುದಾರರಿಗೆ ಮರಳಿಸಲಾಗಿದೆ. ಇನ್ನು ಪ್ರಸಕ್ತ 2024ರ ಏಪ್ರಿಲ್ ಅಂತ್ಯದವರೆಗೆ ಒಟ್ಟು 5 ಪ್ರಕರಣ ನಡೆದಿದ್ದು, ಅದರಲ್ಲಿ 86,29,009 ರೂ. ವಂಚನೆಗೊಳಗಾಗಿದೆ. ಅದರಲ್ಲಿ 7,27,508 ಹಣವನ್ನು ವಂಚಿತರ ಹಾಕಿಕೊಂಡಿದ್ದ ಖಾತೆಯಲ್ಲೇ ಸ್ಥಗಿತಗೊಳಿಸಲಾಗಿದೆ. ಈ ಹಣ ನ್ಯಾಯಾಲಯ ಪ್ರಕ್ರಿಯೆ ಬಳಿಕ ದೂರುದಾರರಿಗೆ ಹಿಂದಿರುಗಿಸುವ ಕಾರ್ಯ ನಡೆಯಲಿದೆ. ವಂಚಿತರೆಲ್ಲ ವಿದ್ಯಾವಂತರು: ಜಿಲ್ಲೆಯಲ್ಲಿ ಈವರೆಗೆ ಆನ್‌ಲೈನ್ ವಂಚನೆಗೊಳಗಾದ ಪ್ರಕರಣಗಳಲ್ಲಿ ಶೇ.98 ವಿದ್ಯಾವಂತರೇ ಇದ್ದಾರೆ. ಮುಖ್ಯವಾಗಿ ಸರ್ಕಾರಿ ನೌಕರರು, ಉಪನ್ಯಾಸಕರು, ವರ್ಕ್ ಫಾರ್ಮ್ ಹೋಂ ನೌಕರರು, ಎಂಜಿನಿಯರ್‌ಗಳು, ಉದ್ಯಮಿಗಳೂ ಒಳಗೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಬ್ಯಾಂಕ್ ಅಧಿಕಾರಿಗಳು ನೂರಾರು ಜನರಿಗೆ ಸಾಲ ಕೊಡುವ ಅಧಿಕಾರ ಹೊಂದಿರುತ್ತಾರೆ. ಆದರೆ ಈ ಆನ್‌ಲೈನ್ ವಂಚನೆಗೆ ಬ್ಯಾಂಕ್ ಅಧಿಕಾರಿಗಳೂ ಬಿದ್ದಿದ್ದಾರೆ ಎಂದರೆ ನಂಬಲೇಬೇಕು. ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಹೆಚ್ಚು ವಿದ್ಯಾವಂತರೇ ಮೋಸಕ್ಕೊಳಗಾಗಿದ್ದಾರೆ. ಒಂದೆರಡು ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳೂ ಹಣ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣ ನಿಯಂತ್ರಣಕ್ಕಾಗಿ ಬ್ಯಾಂಕರ್ ಗಳ ಸಭೆಯೂ ನಡೆಸಲಾಗಿದೆ.
●ಅಮರನಾಥ ರಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ■ ಶ್ರೀಶೈಲ ಕೆ. ಬಿರಾದಾರ