Advertisement

ಮಡಿಕೇರಿಯಲ್ಲಿ ಮತ್ತೆ ಕಲ್ಯಾಣ ಆಂದೋಲನ; ಸಾಮರಸ್ಯ ನಡಿಗೆ

11:43 PM Jul 21, 2019 | Team Udayavani |

ಮಡಿಕೇರಿ: ಸಹಮತ ವೇದಿಕೆ ವತಿಯಿಂದ ಆ.5 ರಂದು ನಡೆಯಲಿರುವ ”ಮತ್ತೆ ಕಲ್ಯಾಣ ಆಂದೋಲನ” ಕುರಿತು ನಗರದ ಪತ್ರಿಕಾ ಭವನದಲ್ಲಿ ಪ್ರಮುಖರ ಸಭೆ ನಡೆಯಿತು.

Advertisement

ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್‌ ಅವರು ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು. ಮಹದೇವಪೇಟೆಯ ಬಸವೇಶ್ವರ ದೇವಾಲಯದಿಂದ ಕಾವೇರಿಹಾಲ್ ವರೆಗೆ ಎಲ್ಲಾ ಸಮುದಾಯಗಳನ್ನೊಳಗೊಂಡ ಸಾಮರಸ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಸಾಣೆ ಮಠದ ಪಂಡಿತರಾದ್ಯ ಶಿವಾ ಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲಾ ಧರ್ಮದ ಪ್ರಮುಖರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ನಡೆಸಲಾಗುವುದು. ಆ.5 ರಂದು ನಗರದಲ್ಲಿ ನಡೆಯುವ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಧರ್ಮದ ಮುಖಂಡರನ್ನು ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಇಬ್ಬರು ಅತಿಥಿ ಉಪನ್ಯಾಸಕರನ್ನು ಆಹ್ವಾನಿಸಲು ಸಭೆ ನಿರ್ಧರಿಸಿತು.

ಎಂ.ಇ.ಮೊಹಿದ್ದೀನ್‌, ಟಿ.ಎಂ.ಮುದ್ದಯ್ಯ, ಗೊಲ್ಲ ಸಮಾಜದ ಅಧ್ಯಕ್ಷ‌ ಎ.ಎಸ್‌.ನಾಣಯ್ಯ, ಅಹಿಂದ ಒಕ್ಕೂಟದ ಭಾಗಮಂಡಲ ಅಧ್ಯಕ್ಷ‌ ಬಿ.ಎನ್‌.ರಂಗಪ್ಪ, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್‌, ನಗರಸಭಾ ಮಾಜಿ ಸದಸ್ಯರಾದ ಎಂ.ಎ.ಉಸ್ಮಾನ್‌, ಹೆಚ್.ಎಸ್‌. ಯತೀಶ್‌, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್‌, ಜಿ.ಪಂ. ಸದಸ್ಯ ಕುಮುದಾ ಧರ್ಮಪ್ಪ ಪ್ರಮುಖರಾದ ಆರ್‌.ಪಿ. ಚಂದ್ರಶೇಖರ್‌ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next