Advertisement

ಹೈಕದಲ್ಲಿ ಇನ್ಮುಂದೆ ಕಲ್ಯಾಣದ ಉತ್ಸವ

12:29 PM Sep 17, 2019 | Suhan S |

ಕೊಪ್ಪಳ: ರಾಜ್ಯ ಸರ್ಕಾರ ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯನ್ನಾಗಿ ಮಾಡಲು ಆದೇಶ ಹೊರಡಿಸಿದೆ. ಇನ್ಮುಂದೆ ವಿಮೋಚನೆ ಬದಲು ಕಲ್ಯಾಣದ ಉತ್ಸವ ಹೈ-ಕ ಜಿಲ್ಲೆಯಲ್ಲಿ ಮೊಳಗಲಿದೆ.

Advertisement

ಹೌದು, ಹೈದ್ರಾಬಾದ್‌ ಕರ್ನಾಟಕದಲ್ಲಿ ವಿಮೋಚನೆ ಎನ್ನುವ ಪದ ಇತಿಹಾಸದ ಪುಟ ಸೇರಲಿದೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಹೈ-ಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ. ಕಲ್ಯಾಣದ ಉತ್ಸವ ಆಚರಣೆಗೆ ಆದೇಶ ಹೊರಡಿಸಿದ್ದಕ್ಕೆ ಹೈ-ಕದಲ್ಲಿ ಪರ-ವಿರೋಧ ಮಾತುಗಳು ವ್ಯಕ್ತವಾಗಿವೆ.

ದೇಶದ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ಬ್ರಿಟಿಷರ ಕಪಿಮುಷ್ಠಿಯಿಂದ ದೇಶಕ್ಕೆ 1974ರ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದೊರೆತಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ ಹೈದ್ರಾಬಾದ್‌ ಕರ್ನಾಟಕದಲ್ಲಿ ಮಾತ್ರ ಸ್ವಾತಂತ್ರ್ಯ ದೊರೆತಿರಲಿಲ್ಲ. ಇಲ್ಲಿನ್ನೂ ನಿಜಾಮರ ಆಳ್ವಿಕೆಯೇ ಮುಂದುವರೆದಿತ್ತು. ನಿಜಾಮ ಗುಲಾಮಗಿರಿಯಿಂದ ನಮಗೆ ಮುಕ್ತಿ ನೀಡಬೇಕೆಂದು ಈ ಭಾಗದ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮಾತ್ರ ಅವಿಸ್ಮರಣೀಯ.

ಅದರಲ್ಲೂ ಶಿರೂರು ವೀರಭದ್ರಪ್ಪ, ಮುಂಡರಗಿ ಭೀಮರಾಯ, ಶಿವಮೂರ್ತಿಸ್ವಾಮಿ ಅಳವಂಡಿ ಸೇರಿದಂತೆ ಹಲವು ಹೋರಾಟಗಾರರ ಫಲವಾಗಿ ಹೈ-ಕ ಭಾಗದಲ್ಲಿ ನಿಜಾಮರ ಆಳ್ವಿಕೆಯಿಂದ ವಿಮೋಚನೆ ದೊರೆಯಿತು. ಇವರ ಹೋರಾಟದ ಪ್ರತಿ ದಿನವೂ ಅವಿಸ್ಮರಣೀಯವಾಗಿವೆ. ನಿಜಕ್ಕೂ ಹೈ-ಕ ಹೋರಾಟಗಾರರ ಬಗ್ಗೆ ಸರ್ಕಾರ ಪ್ರತಿ ವರ್ಷ ವಿಮೋಚನಾ ದಿನಾಚರಣೆಯಂದು ಸ್ಮರಣೆ ಮಾಡಿ ಮತ್ತೆ ಮರೆಯುತ್ತಿವೆ. ಅವರ ಹೋರಾಟದ ಜೀವನಗಾಥೆಗಳನ್ನು ಹೊರತಂದಿಲ್ಲ.

ಹೋರಾಟದಲ್ಲಿನ ಕಷ್ಟ ನೋವು, ನಲಿವು, ಅವರ ಶ್ರಮದ ಕುರಿತು ಇಂದಿನ ಯುವ ಜನತೆಗೆ ಬಹುಪಾಲು ಮಾಹಿತಿಯೇ ಇಲ್ಲ. ಪುಸ್ತಕದ ರೂಪದಲ್ಲೂ ಹೊರ ಬಂದಿಲ್ಲ ಎಂಬುದೇ ಬೇಸರದ ಸಂಗತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next