Advertisement

ಪ್ರತಿ ದಿನ ಹೊಸ ಬೆಳಕನ್ನು ಸ್ವಾಗತಿಸಿ

10:48 PM Sep 15, 2019 | Sriram |

ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, “ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ’ ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು, ಸೌಂದರ್ಯ ಹೀಗೆ ಒಂದೊಂದು ಉತ್ತರ ಬಂತು. ಊಹುಂ ಇದ್ಯಾವುದೂ ಅಲ್ಲ ಎಂದು ಶಿಕ್ಷಕಿ ಹೇಳಿದರು.

Advertisement

ಕೊನೆಯಲ್ಲಿ ವಿದ್ಯಾರ್ಥಿಯೊಬ್ಬ ಎದ್ದು ನಿಂತು “ಆತ್ಮವಿಶ್ವಾಸ’ ಎಂದಾಗ ಶಿಕ್ಷಕಿಗೆ ಸಮಾಧಾನವಾಯಿತು. “ಸರಿಯುತ್ತರ’ ಎಂದು ವಿದ್ಯಾರ್ಥಿಯ ಬೆನ್ನು ತಟ್ಟಿದರು.

ಹೌದು, ಜೀವನದಲ್ಲಿ ಸಾಧನೆಯ ಶಿಖರಕ್ಕೇರಲು ಆತ್ಮವಿಶ್ವಾಸ ಎನ್ನುವುದು ಇರಲೇಬೇಕು. ಬೇರೆಲ್ಲ ಅಂಶಗಳಿದ್ದೂ ನಮ್ಮ ಮೇಲೆ ನಮಗೇ ವಿಶ್ವಾಸವಿಲ್ಲದಿದ್ದರೆ ಪ್ರಯೋಜನವಿಲ್ಲ.

ಅವಕಾಶ ಬಳಸಿಕೊಳ್ಳಿ
ಸಾಧನೆಗೆ ಬೇಕಾಗಿರುವ ಅವಕಾಶ ಎಲ್ಲರಿಗೂ ಒಂದೇ ರೀತಿ ಲಭಿಸುತ್ತದೆ. ಆದರೆ ಅದನ್ನು ಸದುಪಯೋಗಿಸುವುದು ಅವರವರ ಮನಸ್ಥಿತಿಗೆ ಬಿಟ್ಟಿದ್ದು. ಆತ್ಮವಿಶ್ವಾಸ ಇದ್ದವನ್ನು ಅವಕಾಶ ಉಪಯೋಗಿಸುತ್ತಾನೆ ನಿಮಗೆಲ್ಲ ಮಹಾಭಾರತದ ಕಥೆ ಗೊತ್ತಿರಬಹುದು. ಗುರುಗಳು ಪಾಂಡವರು-ಕೌರವರನ್ನು ಕರೆದು ಮರವೊಂದರಲ್ಲಿ ಗಿಳಿಯ ಗೊಂಬೆಯೊಂದನ್ನು ಇರಿಸಿ ಏನು ಕಾಣಿಸುತ್ತಿದೆ ಎಂದು ಕೇಳುತ್ತಾರೆ. ಆಗ ಒಬ್ಬೊಬ್ಬರು ಎಲೆ, ರೆಂಬೆ ಮುಂತಾದ ಉತ್ತರ ನೀಡಿದ್ದರೆ ಅರ್ಜುನ ಮಾತ್ರ ಗಿಳಿಯ ಕಣ್ಣು ಎಂದಿದ್ದ. ಯಾಕೆಂದರೆ ಗುರಿಯಿಟ್ಟು ಗಿಳಿಯ ಕಣ್ಣಿಗೆ ಬಾಣ ಬೀಡಬೇಕು ಎನ್ನುವುದು ಗುರುಗಳ ಸವಾಲಾಗಿತ್ತು. ಇಂತಹ ಶ್ರದ್ಧೆ ಪ್ರತಿಯೊಬ್ಬರಲ್ಲಿರಬೇಕು.

ಪ್ರತೀ ದಿನ ಹೊಸ ಬೆಳಗು
ಪ್ರತೀ ಸೂರ್ಯೋದಯ ನಿಮ್ಮ ಬಾಗಿಲಿಗೆ ಹೊಸ ದಿನ ಜತೆಗೆ ಹೊಸ ಭರವಸೆ, ಹೊಸ ನಿರೀಕ್ಷೆ, ಹೊಸ ಕನಸುಗಳನ್ನು ಹೊತ್ತು ತರುತ್ತದೆ. ಅದನ್ನು ಸಾಧನೆಯಿಂದ ಇನ್ನಷ್ಟು ಹೊಳೆಯುವಂತೆ ಮಾಡುವುದು ನಿಮಗೆ ಬಿಟ್ಟ ವಿಚಾರ. ಇವತ್ತು ಕೂಡಾ ಮಾಮೂಲಿ ದಿನ ಅಂದುಕೊಂಡರೆ ನಾಳೆ ಇದ್ದಲ್ಲೇ ಇರುತ್ತೀರಿ. ಬದಲಾಗಿ ಇದು ಇನ್ನೊಂದು ಅವಕಾಶದ ಬಾಗಿಲು ಅಂದುಕೊಂಡರೆ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೀರಿ ಎಂದರ್ಥ.

Advertisement

-  ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next