Advertisement

ಸಂಗೊಳ್ಳಿ ರಾಯಣ್ಣ ಜ್ಯೋತಿಯಾತ್ರೆಗೆ ಸ್ವಾಗತ

05:59 AM Jan 27, 2019 | |

ಬೈಲಹೊಂಗಲ: ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ರಾಷ್ಟ್ರಪ್ರೇಮ ಸೂರ್ಯ, ಚಂದ್ರ ಇರುವವರೆಗೆ ಅಜರಾಮರವಾಗಿರಲಿ ಎಂದು ಹುತಾತ್ಮ ದಿನವಾದ ಜ.26ರಂದು ರಾಯಣ್ಣನ ಗಲ್ಲಿಗೇರಿಸಿದ ಸ್ಥಳ ನಂದಗಡದಿಂದ ರಾಯಣ್ಣನ ಆತ್ಮ ಜ್ಯೋತಿ ತಂದು ಪಟ್ಟಣದ ವೀರರಾಣಿ ಕಿತ್ತೂರ ರಾಣಿ ಚನ್ನಮ್ಮನ ಸಮಾಧಿಗೆ ಅರ್ಪಿಸುವ ಕಾರ್ಯ ಶನಿವಾರ ಸಕಲ ವಾದ್ಯ ಮೇಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.

Advertisement

ಅಖೀಲ ಕರ್ನಾಟಕ ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಆಶ್ರಯದಲ್ಲಿ ರಾಯಣ್ಣನ 188ನೇ ಪುಣ್ಯತಿಥಿ ಅಂಗವಾಗಿ ನಡೆದ 20ನೇ ವರ್ಷದ ಜ್ಯೋತಿಯಾತ್ರೆ ರಾಷ್ಟ್ರಾಭಿಮಾನದ ಜಾಗೃತಿ ಉಂಟು ಮಾಡಿತು.

ಬೈಲಹೊಂಗಲಕ್ಕೆ ಆಗಮಿಸಿದ ಜ್ಯೋತಿಯನ್ನು ಸಂಸದೀಯ ಕಾರ್ಯದರ್ಶಿ ಮಹಾಂತೇಶ ಕೌಜಲಗಿ, ಸಂಸದ ಸುರೇಶ ಅಂಗಡಿ, ಎಸಿ ಶಿವಾನಂದ ಭಜಂತ್ರಿ, ತಹಶೀಲ್ದಾರ್‌ ಡಾ.ಡಿ.ಎಚ್. ಹೂಗಾರ, ಚಿತ್ರನಟ ಶಿವರಂಜನ ಬೋಳನ್ನವರ, ತಾಪಂ ಇಒ ಸಮೀರ್‌ ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪುರಸಭೆ ಸದಸ್ಯರು, ಪಿಎಸ್‌ಐ ಎಂ.ಎಸ್‌. ಹೂಗಾರ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಜ್ಯೋತಿ ಬರಮಾಡಿಕೊಂಡರು.

ಜಿಪಂ ಸದಸ್ಯ ಅನಿಲ ಮೆಕಲಮರ್ಡಿ, ಬಸವರಾಜ ಜನ್ಮಟ್ಟಿ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಮುರುಗೇಶ ಗುಂಡ್ಲೂರ, ವಿ.ಎಸ್‌. ಕೋರಿಮಠ, ಮಹೇಶ ಹರಕುಣಿ, ವಿರೂಪಾಕ್ಷ ವಾಲಿ, ಮಹಾಂತೇಶ ಗುಂಡ್ಲೂರ, ಮಹಾಂತೇಶ ಜಿಗಜಿನ್ನಿ, ಶಿವಾನಂದ ಬಡ್ಡಿಮನಿ, ಎಂ.ಬಿ. ಹಿರೇಮಠ, ಎಫ್‌.ಎಸ್‌. ಸಿದ್ದನಗೌಡರ, ರಾಜು ಕುಡಸೋಮಣ್ಣವರ, ಶಿವಾನಂದ ಕೋಲಕಾರ, ಸಾಗರ ಬಾವಿಮನಿ, ರಾಜು ನರಸನ್ನವರ, ಸುಭಾಶ ತುರಮರಿ, ಮಲ್ಲಿಕಾರ್ಜುನ ವಕ್ಕುಂದಮಠ, ಸಿದ್ದು ಮೂಗಿ, ರಾಯಣ್ಣನ ವಂಶಸ್ಥ ಬಸವರಾಜ ರೋಗನ್ನವರ, ಸಿದ್ಧಲಿಂಗ ಸಿದ್ಧಯ್ಯನವರ, ಈರಬಸ್ಸು ಮುನವಳ್ಳಿ, ಅಭಿಷೇಕ ಈಟಿ, ನಾಗಪ್ಪ ಮಾರಿಹಾಳ, ಮಾರುತಿ ಶೆರೆಗಾರ ನೇತೃತ್ವ ವಹಿಸಿದ್ದರು. ಐವತ್ತಕ್ಕೂ ಹೆಚ್ಚು ವಾಹನಗಳು ಜ್ಯೋತಿಯಾತ್ರೆ ಜತೆ ಸಾಲು ಸಾಲಾಗಿ ಸಾಗಿ ಜ್ಯೋತಿಗೆ ಗೌರವ ನೀಡಿದವು.

ರಾಯಣ್ಣ ಜ್ಯೋತಿ ಸಂಜೆ ಬೈಲಹೊಂಗಲಕ್ಕೆ ಆಗಮಿಸುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಡೊಳ್ಳು ಕುಣಿತ, ಜಾಂಜ್‌ಮೇಳ, ಜಾತ್ಯತೀತ ಮನೋಭಾವದಿಂದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಯುವ ಜನತೆ ಸ್ವಾತಂತ್ರ್ಯ ಸೇನಾನಿಗಳ ಜಯಘೋಷ ಹೇಳಿ ಸಂಭ್ರಮಿಸಿದರು. ಪಟಾಕಿ, ಸಿಡಿ ಮದ್ದುಗಳ ಆರ್ಭಟ ಕಳೆತಂದು ಕೊಟ್ಟಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next