Advertisement
ಮೈಸೂರು – ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಶ್ರೀರಂಗಪಟ್ಟಣದ ಸುತ್ತಲೂ ಕಾವೇರಿ ನದಿ ಸುತ್ತಲೂ ಹರಿಯುವುದರಿಂದ ಇದೊಂದು ದ್ವೀಪವೆಂದೇ ಹೇಳಬಹುದು. ಪ್ರತಿದಿನ ದೇಶ ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ.
Related Articles
Advertisement
ಅಧಿಕಾರಿಗಳ ನಿರ್ಲಕ್ಷ್ಯ: ರಸ್ತೆಯ ಎರಡೂ ಬದಿಯಲ್ಲಿ ಕಬ್ಬಿಣದ ಕಮಾನುಗಳನ್ನು ನೆಟ್ಟು ನಿರ್ಮಿಸಲಾಗಿತ್ತು. ಈಗ ಈ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಯಾವ ಸಂದರ್ಭದಲ್ಲಾದರೂ ಮುರಿದು ಬೀಳುವ ಅಪಾಯದ ಅಂಚಿನಲ್ಲಿವೆ. ಆದರೂ, ಪ್ರವಾಸೋದ್ಯಮ ಹಾಗೂ ಪುರಸಭೆ ಗಮನಹರಿಸುತ್ತಿಲ್ಲ.
ಈಗಾಗಲೇ ಪುರಸಭೆಯ ಅಧಿಕಾರಿಗಳಿಗೆ ಹಲವಾರು ಬಾರಿ ಪ್ರಗತಿಪರ ಸಂಘಟನೆಗಳ ಮುಖಂಡರು ದೂರು ನೀಡಿದ್ದರು ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸಿ ನಿರ್ಲಕ್ಷಿಸುತ್ತಿದ್ದಾರೆ.
ಬೀಳುವ ಹಂತದಲ್ಲಿ: ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿನ ಬೇಸಿಗೆ ಅರಮನೆ, ಗುಂಬಸ್, ಶ್ರೀನಿಮಿಷಾಂಬ ದೇವಾಲಯ, ಗೋಸಾಯಿ ಘಾಟ್ ಹಾಗೂ ಸಂಗಮಕ್ಕೆ ಹೋಗಬೇಕಿದ್ದು, ಇದೀಗ ಕಮಾನು ಗೇಟಿರುವ ಬಳಿಯಲ್ಲಿ ಆಟೋ ನಿಲ್ದಾಣಗಳಿವೆ.
ಆಟೋ ಚಾಲಕರು ಪ್ರಯಾಣಿಕರು ಆ ಸ್ಥಳದಲ್ಲೇ ಯಾವಾಗಲು ಇರುವುದರಿಂದ ಜನನಿಬಿಡದ ಪ್ರದೇಶವಾಗಿದೆ. ಅಕಸ್ಮಾತ್ ತುಕ್ಕು ಹಿಡಿದಿರುವ ಕಂಬಗಳು ಗಾಳಿ ಮಳೆಗೆ ಯಾವಾಗ ಬೇಕಾದರೂ ಬೀಳಬಹುದು. ಈಗಲಾದರೂ ಪುರಸಭೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.