ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ್ದು 3ನೇ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯ, ಇಂಗ್ಲೆಂಡ್ ಅನಂತರದ ಸ್ಥಾನದಲ್ಲಿ ಭಾರತ ಕಾಣಿಸಿಕೊಂಡಿದೆ. ಹೀಗಾಗಿ ಗೋಲ್ಡ್‌ಕೋಸ್ಟ್‌ನಲ್ಲೂ ಭಾರತದ ವೇಟ್‌ಲಿಫ್ಟರ್‌ಗಳ ಮೇಲೆ ಸಹಜವಾಗಿಯೇ ಹೆಚ್ಚು ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 16 ವಿಭಾಗಗಳಲ್ಲಿ ಸ್ಪರ್ಧೆ ಇದೆ. ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ತಲಾ ಎಂಟರಂತೆ ಸ್ಪರ್ಧೆಗಳು ನಡೆಯಲಿವೆ. ಭಾರತ ಇವೆಲ್ಲದರಲ್ಲೂ ಪಾಲ್ಗೊಳ್ಳಲಿದೆ. ಪ್ರತಿಯೊಂದು ವಿಭಾಗದಲ್ಲೂ ದೇಶದ ಒಬ್ಬೊಬ್ಬ ಸ್ಪರ್ಧಿಗಷ್ಟೇ ಅವಕಾಶವೆಂಬುದು ಗೇಮ್ಸ್ ನಿಯಮ. ಎಸ್. ಸತೀಶ್ ಕುಮಾರ್, ಸಾಯಿಕೋಮ್ ಮೀರಾಬಾಯಿ ಮತ್ತು ಕುಮುಕ್ಚಮ್ ಸಂಜಿತಾ ಚಾನು ಅವರು ದೇಶದ ಪದಕ ಭರವಸೆಗಳಾಗಿದ್ದಾರೆ.
ಸತೀಶ್ ಕಳೆದ ಗ್ಲಾಸೊ ಗೇಮ್ಸ್‌ನಲ್ಲಿ 328 ಕೆಜಿ ಭಾರವೆತ್ತಿ ನೂತನ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. 2016ರ ರಿಯೋಗೂ ಆಯ್ಕೆಯಾ ಗಿದ್ದ ಸತೀಶ್ ಅಲ್ಲಿ 77 ಕೆಜಿ ವಿಭಾಗದಲ್ಲಿ 11ನೆಯವರಾಗಿ ಸ್ಪರ್ಧೆ ಮುಗಿಸಿದ್ದರು.
2002ರ ಮ್ಯಾಂಚೆಸ್ಟರ್ ಗೇಮ್ಸ್ ಬಳಿಕ ವನಿತೆಯರ ವೇಟ್‌ಲಿಫ್ಟಿಂಗ್ ಸ್ಪರ್ಧೆ ಅಳವಡಿಸಲಾಯಿತು. ಅಲ್ಲಿಂದೀಚೆ ಭಾರತದ ಭಾರತದ ವನಿತೆಯರು ಪ್ರತಿಯೊಂದು ಗೇಮ್ಸ್‌ನಲ್ಲೂ ಪದಕ ಗೆಲ್ಲುತ್ತಲೇ ಬಂದಿದ್ದಾರೆ. ಸಂಜಿತಾ 2014ರಲ್ಲಿ ಚಿನ್ನ ಹಾಗೂ ಮೀರಾಬಾಯಿ ಬೆಳ್ಳಿ ಪದಕದಿಂದ ಸಿಂಗಾರಗೊಂಡಿದ್ದರು (48 ಕೆಜಿ). ಈ ಬಾರಿ ಮೀರಾಬಾಯಿ ಇದೇ ವಿಭಾಗದಲ್ಲಿದ್ದರೆ, ಸಂಜಿತಾ 53 ಕೆಜಿ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೇ ಮೊದಲ ಬಾರಿಗೆ ವೇಟ್‌ಲಿಫ್ಟರ್‌ಗಳಿಗೆ ಅರ್ಹತಾ ಸುತ್ತಿನ ಸ್ಪರ್ಧೆಗಳನ್ನು ಅಳವಡಿಸಲಾಗಿತ್ತು. 2017ರ ಕಾಮನ್ವೆಲ್ತ್ ಚಾಂಪಿಯನ್‌ಶಿಪ್ ಪದಕ ವಿಜೇತರು ನೇರ ಪ್ರವೇಶ ಪಡೆದಿದ್ದರು. ಇವರೆಂದರೆ ಸತೀಶ್ (77 ಕೆಜಿ), ಆರ್. ವೆಂಕಟ ರಾಹುಲ್ (85 ಕೆಜಿ), ಪ್ರದೀಪ್ ಸಿಂಗ್ (105 ಕೆಜಿ), ಮೀರಾಬಾಯಿ (48 ಕೆಜಿ) ಮತ್ತು ಸಂಜಿತಾ (53 ಕೆಜಿ). ಗ್ಲಾಸೊYàದಲ್ಲಿ ಚಿನ್ನ ಗೆದ್ದ ಸುಖೇನ್ ಡೇ ಅರ್ಹತಾ ಸುತ್ತಿನಲ್ಲಿ ವಿಫಲರಾದರು (56 ಕೆಜಿ). ಇವರ ಬದಲು ಗುರುರಾಜ ಪೂಜಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.