Advertisement
ರವಿವಾರ ನಡೆದ ಪುರುಷರ 67 ಕೆಜಿ ವಿಭಾಗದ “ಬಿ’ ಗುಂಪಿನ ಸ್ಪರ್ಧೆಯಲ್ಲಿ ಜೆರೆಮಿ, ಸ್ನಾಚ್ ವಿಭಾಗದಲ್ಲಿ ವಿಶ್ವದಾಖಲೆ, ಯೂತ್ ದಾಖಲೆ ನಿರ್ಮಿಸಿದರು.ಕ್ಲೀನ್ ಮತ್ತು ಜರ್ಕ್ ಸೇರಿ ಒಟ್ಟು 297 ಕೆಜಿ (134+163) ತೂಕ ಎತ್ತಿ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದರು. ಪಾಕಿಸ್ಥಾನದ ತಲ್ಹಾ ತಾಲಿಬ್ ಒಟ್ಟು 304 ಕೆಜಿ ತೂಕ ಎತ್ತಿ ಅಗ್ರಸ್ಥಾನ ಪಡೆದರು. ಈ ವಿಭಾಗದ ಅಂತಿಮ ಫಲಿತಾಂಶ “ಎ’ ಗುಂಪಿನ ಸ್ಪರ್ಧೆಯ ಅನಂತರ ತಿಳಿದು ಬರಲಿದೆ.
ಜೆರೆಮಿ ಸ್ನಾಚ್ ವಿಭಾಗದ 3 ಪ್ರಯತ್ನಗಳಲ್ಲಿ ಎರಡರಲ್ಲಿ ಯಶಸ್ವಿಯಾಗಿ (130 ಕೆಜಿ, 134 ಕೆಜಿ) ನೂತನ ಯೂತ್ ವಿಶ್ವದಾಖಲೆ ಬರೆದರು. ಹಿಂದಿನ ದಾಖಲೆ ಕೂಡ ಜೆರೆಮಿ ಹೆಸರಿನಲ್ಲಿತ್ತು. ಫೆಬ್ರವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ “ಇಜಿಎಟಿ ಕಪ್’ನಲ್ಲಿ 131 ಕೆಜಿ ತೂಕ ಎತ್ತಿ ದಾಖಲೆ ನಿರ್ಮಿಸಿದ್ದರು.
ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ತಮ್ಮ ದೇಹದ ತೂಕಕ್ಕಿಂತ ದುಪ್ಪಟ್ಟು ಭಾರ ಎತ್ತಿದ ಜೆರೆಮಿ (157 ಕೆಜಿ, 163 ಕೆಜಿ) ಕಜಕೀಸ್ಥಾನದ ವೇಟ್‌ಲಿಫ್ಟರ್ ಸೈಖಾನ್ ತೈಸುಯೇವ್ ಅವರ ಯೂತ್ ವಿಶ್ವ ದಾಖಲೆ ಮುರಿದರು (161 ಕೆಜಿ).
ಇದು ಜೆರೆಮಿ ಅವರ ವೈಯಕ್ತಿಕ ಉತ್ತಮ ಪ್ರದರ್ಶನ. ಅವರು “ಇಜಿಎಟಿ ಕಪ್’ ಕೂಟದಲ್ಲಿ ಯೂತ್ ವಿಶ್ವ ದಾಖಲೆಯಾದ 288 ಕೆಜಿ ಗಿಂತ 9 ಕೆಜಿ ಹೆಚ್ಚು ತೂಕ ಎತ್ತಿದ್ದಾರೆ. ಅಲ್ಲಿ ಅವರಿಗೆ ಬೆಳ್ಳಿ ಪದಕ ಒಲಿದಿತ್ತು. “ಏಶ್ಯನ್ ಚಾಂಪಿಯನ್‌ಶಿಪ್’ ಒಲಿಂಪಿಕ್ ಅರ್ಹತಾ ಸುತ್ತುಗಳಲ್ಲಿ ಒಂದಾಗಿದ್ದು, ಇಲ್ಲಿನ ಅಂಕ ಟೋಕಿಯೊ ಒಲಿಂಪಿಕ್ಸ್ ಅರ್ಹತೆಗೆ ನೆರವಾಗಲಿದೆ. ಭಾರತಕ್ಕೆ ಮೊದಲ ಪದಕ ತಂದ ಜಿಲ್ಲಿ ದಲಾಬೆಹೆರಾ
“ಏಶ್ಯನ್ ವೇಟ್‌ಲಿಪ್ಟಿಂಗ್ ಚಾಂಪಿಯನ್‌ಶಿಪ್’ ಕೂಟದಲ್ಲಿ ಭಾರತ ಪದಕದ ಖಾತೆ ತೆರೆದಿದೆ. ರವಿವಾರದ ವನಿತೆಯರ 45 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜಿಲ್ಲಿ ದಲಾಬೆಹೆರಾ 167 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು, ವಿಯೆಟ್ನಾಂನ ಹುಯೆನ್ ತಿ ವಿಜಾಂಗ್ ಚಿನ್ನ ಜಯಿಸಿದರು. ಕಳೆದ ವರ್ಷ ದಲಾಬೆಹೆರಾ “ಐಡಬ್ಲ್ಯುಎಫ್ ಜೂನಿಯರ್ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
Related Articles
49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ವೈಯಕ್ತಿಯ ದಾಖಲೆಯನ್ನು ಉತ್ತಮಗೊಳಿಸಿದ್ದರೂ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು.ಮೀರಾಬಾಯಿ ಸ್ನಾಚ್ ವಿಭಾಗದಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ವೈಯಕ್ತಿಕ ಉತ್ತಮ 113 ಕೆಜಿ ತೂಕ ಎತ್ತಿ (ಒಟ್ಟು 199 ಕೆಜಿ) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಫೆಬ್ರವರಿಯಲ್ಲಿ ನಡೆದ “ಇಜಿಎಟಿ ಕಪ್’ ನಲ್ಲಿ ಮೀರಾ 192 ಕೆಜಿ ತೂಕ ಎತ್ತಿದ್ದರು.
Advertisement