Advertisement
ಜೀರ್ಣಕ್ರಿಯೆಗೆ ಸಹಕಾರಿಈ ಹಣ್ಣಿನಲ್ಲಿ ಫೈಬರ್ ಹೇರಳವಾಗಿದ್ದು ಕರುಳುಗಳ ಮೂಲಕ ತ್ಯಾಜ್ಯದ ಮೃದುವಾದ ಚಲನೆಗೆ ಸಹಕಾರಿಯಾಗಿದೆ. ಮಲಬದ್ಧತೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಸಂಶೋಧನೆಗಳು ಫೈಬರ್ ಸೇವನೆ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಸಾಬೀತು ಪಡಿಸಿವೆ.
ಬೇಸಗೆ ಶಾಖದಿಂದ ದೇಹ ತಂಪಾಗಿಸಲು ಪರಿಪೂರ್ಣ ಪಾನೀಯವಲ್ಲದಿದ್ದರೂ ನೈಸರ್ಗಿಕ ಸಿಹಿ ಅಂಶವನ್ನು ಹೊಂದಿದೆ. ತೂಕ ಕಳೆದುಕೊಳ್ಳಲು ಇದು ಸೂಕ್ತ. ರುಚಿ ಹೆಚ್ಚಿಸಲು ರಸಕ್ಕೆ ಹೆಚ್ಚುವರಿ ಸಕ್ಕರೆಯನ್ನು ಸೇರಿಸುವ ಅಗತ್ಯವಿಲ್ಲ. ತೂಕ ಇಳಿಕೆಗೆ ಹೆಚ್ಚು ಸಕ್ಕರೆ ಎಂದಿಗೂ ಪೂರಕವಲ್ಲ. ಕ್ಯಾಲೋರಿಗೆ ಗುಡ್‌ಬೈ
ವ್ಯಾಯಾಮದ ಅನಂತರ ಎನರ್ಜಿ ಪಾನೀಯಕ್ಕಾಗಿ ಉತ್ತಮ ನೈಸರ್ಗಿಕ ಪಾನೀಯ ಹುಡುಕುತ್ತಿದ್ದರೇ ಈ ಹಣ್ಣಿನ ರಸವನ್ನು ಆಯ್ದುಕೊಳ್ಳಿ. ಫೈಬರ್ ಅಂಶವಿರುವ ಈ ಹಣ್ಣಿನ ರಸ ಕ್ಯಾಲೋರಿ ತಗ್ಗಿಸುತ್ತದೆ.ದೇಹದಲ್ಲಿನ ಆರಂಭಿಕ ನೀರಿನ ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. 250 ಎಂಎಲ್ ನಷ್ಟು ರಸ ಸುಮಾರು 140-150 ಕ್ಯಾಲೋರಿ ಹೊಂದಿದೆ. ಶಕ್ತಿ ಹೆಚ್ಚಳ ಒಂದು ಲೋಟದಷ್ಟು ಬಿಲ್ವ ಹಣ್ಣಿನ ರಸ ಟ್ಯಾನಿನ್, ಕ್ಯಾಲ್ಸಿಯಮ್, ಪಾಸ್ಫರಸ್, ಪ್ರೊಟೀನ್, ವಿಟಮಿನ್ ಸಿ ಹಾಗೂ ಕಬ್ಬಿಣದಂತ ಪೋಷಕಾಂಶಗಳಿಂದ ಕೂಡಿರುವುದರಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಣ್ಣಿನ ರಸ ಹೊಟ್ಟೆ ಪೂರ್ಣವಾಗಿರುವ ಅನುಭವವನ್ನು ನೀಡುತ್ತದೆ.
Related Articles
Advertisement
- ಆರ್.ಕೆ