Advertisement

ಬಸವಣ್ಣ ಮಹಾಂತ ಶ್ರೀ ಉಸಿರು

05:29 PM May 26, 2018 | |

ಬನಹಟ್ಟಿ: ವಿಶ್ವ ವಿಭೂತಿ ಮಹಾಂತಪ್ಪಗಳ ಭೌತಿಕವಾದ ಲಿಂಗ ಶರೀರ ಚಿರನಿದ್ರೆಯಲ್ಲಿದ್ದರೂ ಅವರ ಮಹಾನ್‌ ಬಸವ ಚೇತನ ನಮ್ಮೆಲ್ಲರಲ್ಲಿದೆ. ಅವರ ಮಾರ್ಗದರ್ಶನ ಲಿಂಗವಂತ, ಬಸವ ಭಕ್ತರಿಗೆ ದಾರಿ ದೀಪವಾಗಲಿ ಎಂದು ಮಹಾಂತಪ್ಪಗಳ ದಿವ್ಯ ಬಸವ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ನಾವೆಲ್ಲರೂ ಸಮರ್ಪಿಸೋಣ ಎಂದು ಬಸವ ಸಮಿತಿ ಅಧ್ಯಕ್ಷ ಶರಣ ಸದಾಶಿವ ಗಾಯಕವಾಡ ಹೇಳಿದರು.

Advertisement

ಸ್ಥಳೀಯ ಮುಮುಕ್ಷ ಮಠದಲ್ಲಿ ಬಸವ ಸಮಿತಿಯ ಆಶ್ರಯದಲ್ಲಿ ನಡೆದ ವಾರದ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾಂತ ಜೋಳಿಗೆ ಹರಿಕಾರರು, ವಚನ ಸಾಹಿತ್ಯದ ದಂಡನಾಯಕರು ಇಳಕಲ್ಲಿನ ಚಿತ್ತರಗಿ ಇಲಕಲ್ಲ ವಿಜಯ ಮಹಾಂತ ಸಂಸ್ಥಾನ ಮಠದ ಪೀಠಾಧಿಕಾರಿಗಳು ಡಾ.ವಿಜಯ ಮಹಾಂತ ಸ್ವಾಮಿಗಳು ಮೇ 19 ರಂದು ಬೆಳಗಾವಿಯ ಕೆಎಲ್‌ಇ ಅಸ್ಪತ್ರೆಯಲ್ಲಿ ಲಿಂಗ್ಯೆಕ್ಯರಾದ ಸುದ್ದಿ ತಿಳಿದಾಕ್ಷಣ ನಾಡಿನ ಜನತೆಗೆ ಬರಸಿಡಿಲು ಬಡಿದಂತಾಯಿತು.

1970ರಲ್ಲಿ ಅವರಿಗೆ ಇಳಕಲ್ಲಿನ ವಿಜಯ ಮಹಾಂತ ಮಠಕ್ಕೆ ಪಟ್ಟಾಭಿಷೇಕ ಮಾಡಿದ್ದರು. 48ವರುಷಗಳ ಕಾಲ ಮಹಾಂತಪ್ಪಗಳು ತಮ್ಮ ಇಡೀ ಜೀವನವೆಲ್ಲ ಸಮಾಜಕ್ಕೆ ಮುಡಿಪಾಗಿಟ್ಟವರು ಅವರು. ದೇಶ, ವಿದೇಶ ಹಾಗೂ ನಾಡಿನಾದ್ಯಂತ ಸಂಚರಿಸಿ ದವಸ ಧಾನ್ಯ ಸಿರಿ ಸಂಪತ್ತನ್ನು ಬೇಡದೆ ಜನರಲ್ಲಿರುವ ತಮ್ಮ ದುಶ್ಚಟಗಳಾದ ಸೇರೆ ಸಿಂದಿ, ಬಿಡಿ ತಂಬಾಕು, ಗುಟಕಾ ಎಲ್ಲವನ್ನು ನಮ್ಮ ಜೋಳಿಗೆ ಹಾಕ್ರಿ ಎಂದು ಸಮಾಜದ ಯುವಕರಿಗೆ ಹಿರಿಯರಲ್ಲಿ ಅವರ ಬೇಡಿಕೆಯಾಗಿತ್ತು ವ್ಯಸನ ಮುಕ್ತ ಸಮಾಜ ಅವರ ಗುರಿಯಾಗಿತ್ತು. ಅವರ ಇನ್ನೊಂದು ಆಶಯ ಎಲ್ಲರೂ ನಮ್ಮವರೆಂದು ಭಾವಿಸಿ ಇಷ್ಟಲಿಂಗದಾರಿಗಳಾಗಿರಿ ಲಿಂಗದೇವನ ಪೂಜಿಸಿ ಲಿಂಗವೇ ಆಗರಿ, ಎಂಬುದು ಅವರ ಕಳಕಳಿಯಾಗಿತ್ತು. ಕಂದಾಚಾರ, ಮೂಢನಂಬಿಕೆಯಿಂದಾ ದೂರಾ ಇರಿ ಎಂಬುದು ಅವರ ದೊಡ್ಡ ಆಶಯವಾಗಿತ್ತು.
ಕರ್ನಾಟಕ ಸರಕಾರ ಅವರ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆ ಮಾಡಿದ್ದು ವ್ಯಸನ ದುಶ್ಚಟಗಳನ್ನು ದೂರ ಇಡುವ ಅವರ ಸತತ ಪ್ರಯತ್ನವೆ ಅವರಿಗೆ ಸಂದ ಗೌರವ, ಎನ್ನಬೇಕು. ಇಂತಹ ಸಮಾಜೋದ್ದಾರ್ಮಿಕ ಕಾರ್ಯವನ್ನು ನೋಡಿಯೇ ಅತ್ಯುನ್ನತ ಪದವಿಯಾದ ಗೌರವ ಡಾಕ್ಟರೇಟ್‌ ಪದವಿ ನೀಡಿದ್ದು, ಅವರ ಉಸಿರು ಸದಾವಕಾಲ ಬಸವಾ ಬಸವಾ ಬಸವಾ ಎಂಬುದೆ ಆಗಿತ್ತು ಎಂದರು.

ಮಹೇಶ ಬಂಡಿಗಣಿ ಅಧ್ಯಕ್ಷತೆ ವಹಿಸಿದ್ದರು. ಶೇಖರ ಮಂಟೂರ, ಪರಪ್ಪ ಹಾದಿಮನಿ, ಸಂಜಯ ಬರಗಲ್ಲ, ವಿವೇಕಾನಂದ ಬೆಳಗಲಿ, ಶಂಕರ ನಾಗರಾಳ, ಮಲ್ಲು ಚಿಪ್ಪಾಡಿ, ಶಂಕರ ಹೊಳಗಿ ಚಂದ್ರು ಗಟನಟ್ಟಿ ಉಪಸ್ಥಿತರಿದ್ದರು. 

ಹುನಗುಂದ: ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ಚಿತ್ತರಗಿ ಸಂಸ್ಥಾನ ಮಠದ ಡಾ| ವಿಜಯ ಮಹಾಂತ ಶ್ರೀಗಳ ನಿಧನಕ್ಕೆ ನಗರದ ವಿ.ಎಂ. ವಸ್ತ್ರದ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

Advertisement

ಪದವಿ ಪ್ರಾಚಾರ್ಯ ಬಿ.ಎಂ. ಚಲವಾದಿ ಮಾತನಾಡಿ, ಮಹಾಂತ ಶ್ರೀಗಳ ಜೀವನ ಆದರ್ಶಮಯವಾಗಿದೆ. ಸಮಾಜಕ್ಕೆ ಅವರ ಸಂದೇಶ ಅನನ್ಯ. ಬಸವ ತತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡು ಅವುಗಳ ಅನುಷ್ಠಾನಕ್ಕಾಗಿ ಮಾಡಿದ ಕಾರ್ಯ ಅನುಪಮ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಮಹಾಂತ ಜೋಳಿಗೆ ಹಿಡಿದು ನಾಡಿನ ಅನೇಕ ಕುಟುಂಬಗಳ ಬಾಳಿಗೆ ಅವರು ಬೆಳಕಾಗಿದ್ದಾರೆ ಎಂದರು. ದೇಶ-ವಿದೇಶಗಳಲ್ಲಿ ಬಸವ ಧರ್ಮ ಪ್ರಚಾರ ಮಾಡಿದ ಶ್ರೇಯಸ್ಸಿಗೆ ರಾಜ್ಯ ಸರಕಾರ ಅವರಿಗೆ ಸಂಯಮ ಮತ್ತು ಬಸವ ಪ್ರಶಸ್ತಿ ನೀಡಿ ಸರ್ಕಾರ ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದರು. ಇದೆ ವೇಳೆ ಪಿಯು ಪ್ರಾಚಾರ್ಯರು ಎಂ.ಆರ್‌. ಕಾಂಬಳೆ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next