Advertisement

ಸೂಕ್ತ ಜಾಗವಿಲ್ಲದೆ ರಸ್ತೆಬದಿಯಲ್ಲಿ ವಾರದ ಸಂತೆ

10:36 AM Jun 14, 2019 | Team Udayavani |

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ಸಂತೆ ನಡೆಸಲು ಸೂಕ್ತ ಜಾಗವಿಲ್ಲದೆ ರಸ್ತೆಬದಿಯಲ್ಲಿ ವ್ಯಾಪಾರಸ್ಥರು ವ್ಯವಹಾರ ಮಾಡುತ್ತಿರುವುದು ಸಾರ್ವ ಜನಿಕರು- ವಾಹನ ಸವಾರರಿಗೆ ತೊಂದರೆಯಾಗು ತ್ತಿದೆ. ಸರಿಯಾದ ಮೈದಾನವಿಲ್ಲದೆ ಸೋಮವಾರದ ಸಂತೆಯು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಬಿ.ಎಚ್ ರಸ್ತೆಯಲ್ಲಿ ಸಂಚರಿಸುವ ವಾಹನ ಗಳಿಗೆ ತೊಂದರೆ ನೀಡುವಂತೆ ನಡೆಯುತ್ತಿದ್ದು, ವಾರಕ್ಕೊಮ್ಮೆ ನಡೆಯವ ಸಂತೆಗೆ ವ್ಯವಸ್ಥೆ ಇಲ್ಲದೇ ವ್ಯವಸ್ಥೆಯಿಂದ ಕೂಡಿದೆ.

Advertisement

ಶೆಟ್ಟಿಕೆರೆ, ಹಂದನಕೆರೆ, ಕಸಬಾ, ಹುಳಿಯಾರು ಹೋಬಳಿಗಳ ಬಹುತೇಕ ಹಳ್ಳಿಯ ಸಾವಿರಾರು ಜನರು ವಾರಕ್ಕೊಮ್ಮೆ ನಿತ್ಯದ ಸಾಮಗ್ರಿ ಕೊಳ್ಳಲು ಹಾಗೂ ಮಾರಾಟ ಮಾಡಲು ಬರುತ್ತಿದ್ದು. ಸೂಕ್ತ ಜಾಗವಿಲ್ಲದೆ ಗ್ರಾಹಕರು ಹಾಗೂ ಮಾರಾಟಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂತೆಯಲ್ಲಿ ಜನಜಂಗುಳಿಯಿಂದ ಕಳ್ಳತನ, ಅಪಘಾತಗಳು ಸಾಮಾನ್ಯವಾಗಿದೆ. ಜೊತೆಯಲ್ಲಿಯೇ ಗಾಳಿ, ಮಳೆ ಯಿಂದ ಸಂತೆ ವ್ಯಾಪಾರಸ್ಥರೂ ನಷ್ಟ ಅನುಭವಿ ಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಕಿರಿಕಿರಿ: ಸೋಮವಾರದ ಸಂತೆ ನಡೆ ಯುವ ಸಮೀಪದಲ್ಲಿ ಸರ್ಕಾರಿ ಕಾಲೇಜು ,ವಸತಿ ಶಾಲೆಗಳು ಇದ್ದು, ವಿದ್ಯಾರ್ಥಿಗಳು ಸಂತೆ ನಡೆಯುವ ರಸ್ತೆಯಲ್ಲಿ ದಿನನಿತ್ಯ ಓಡಾಡುತ್ತಿರುತ್ತಾರೆ. ಸೋಮ ವಾರ ನಡೆಯುವ ಸಂತೆಯಿಂದ ವಿದ್ಯಾರ್ಥಿಗಳಿಗೆ ಶಬ್ಧಮಾಲಿನ್ಯದ ಜೊತೆಗೆ ಕಿರಿಕಿರಿ ಉಂಟಾಗುತ್ತಿದ್ದು . ಸಂತೆ ಮುಗಿದ ದಿನ ಕೊಳೆತ ತರಕಾರಿಗಳು, ರಸ್ತೆಯಲ್ಲಿ ಬಿದ್ದಿರುತ್ತವೆ. ದುರ್ವಾಸನೆ ಬೀರುತ್ತಿರುತ್ತವೆ ವಿದ್ಯಾರ್ಥಿ ಗಳು ಮೂಗು ಮುಚ್ಚಿಕೊಂಡು ಶಾಲಾ -ಕಾಲೇಜು ಗಳಿಗೆ ಹೋಗುವ ಪರಿಸ್ಥಿತಿ ಸೋಮವಾರದ ಸಂತೆಯಿಂದ ಉಂಟಾಗಿದೆ.

ಸಂತೆ ವ್ಯಾಪಾರಸ್ಥರಿಗೂ ತೊಂದರೆ: ಮಳೆಗಾಲ ಆರಂಭವಾಗಿದ್ದು, ಸೋಮವಾರ ಸಂತೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವ ಕಾಶವಿಲ್ಲದೆ ರಸ್ತೆ ಅಕ್ಕಪಕ್ಕ ವ್ಯಾಪಾರ ಮಾಡಲು ಕುಳಿತಿ ರುತ್ತಾರೆ. ಸಾಲ ಮಾಡಿಕೊಂಡು ಸಂತೆ ಸಾಮಗ್ರಿಗಳನ್ನು ಸಂತೆಯಲ್ಲಿ ಮಾರಾಟ ಮಾಡಲು ತಂದಿದ್ದು, ಗಾಳಿ ಹಾಗೂ ಮಳೆಗೆ ವ್ಯಾಪಾರಸ್ಥರು ಸಿಕ್ಕಿಕೊಂಡು ಸಾಮಗ್ರಿ ಗಳು ನೀರುಪಾಲಾ ಗಿರುವ ಉದಾರಣೆಗಳು ಇವೆ. ಮಹಿಳಾ ವ್ಯಾಪಾರಸ್ಥರಿಗೆ ಶೌಚಗೃಹ ಸಮಸ್ಯೆ ಇದ್ದು, ಸೋಮವಾರದ ಸಂತೆ ನಡೆಯುವ ಜಾಗ ಸೂಕ್ತವಲ್ಲ ಎಂಬುದು ಸಾರ್ವ ಜನಿಕರ ಅಭಿಪ್ರಾಯ. ಬಿ.ಎಚ್.ರಸ್ತೆ ಬಳಿ ಸೋಮ ವಾರದ ಸಂತೆ ನಡೆಯುವುದರಿಂದ ರಸ್ತೆಯ ಬಳಿ ಜನಜಂಗುಳಿ ಹೆಚ್ಚಾ ಗಿದ್ದು, ವಾಹನಗಳು ರಸ್ತೆಯಲ್ಲಿ ಸಂಚರಿಸಲು ಕಷ್ಟ ವಾಗಿದೆ. ಸಂತೆಯ ಚಿಂತೆಯಲ್ಲಿ ಬರುವ ಸಾರ್ವ ಜನಿಕರು ವಾಹನಗಳು ಬರುವ ಗಮನ ಬಿಟ್ಟು ಓಡಾಡುತ್ತಿದ್ದು ಅಪಘಾತ ನಡೆಯುವ ಸಂಭವ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೋಮವಾರ ಸಂತೆ ನಡೆಸಲು ಸೂಕ್ತ ಸ್ಥಳ ನೀಡುವ ಮೂಲಕ ತೊಂದರೆ ತಪ್ಪಿಸಬೇಕಿದೆ.

● ಚೇತನ್‌ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next