Advertisement
ಅನಾಹುತಕ್ಕೆ ರಹದಾರಿಚತುಷ್ಪಥ ಹೆದ್ದಾರಿ ರಸ್ತೆ ವಿಸ್ತರಣೆಯಾಗಿ ಇಲ್ಲಿ ಸರ್ವೀಸ್ ರಸ್ತೆ, ಡಿವೈಡರ್ ನಿರ್ಮಾಣವಾಗಿದೆ. ಈಗ ಇದರಲ್ಲೂ ಸಂತೆ ನಡೆಯುತ್ತದೆ. ತಾತ್ಕಾಲಿಕ ಬಸ್ಸು ತಂಗುದಾಣದ ಒಳಗೆ ಹಾಗೂ ಸುತ್ತಮುತ್ತಲ ಜಾಗವನ್ನೇ ವ್ಯಾಪಿಸಿದೆ. ಸುತ್ತಮುತ್ತಲ ಊರುಗಳಿಗೆ ಸಂತೆಕಟ್ಟೆ ಜಂಕ್ಷನ್ ಆಗಿರುವುದರಿಂದ ಸಂತೆ ದೊಡ್ಡದಾಗಿ ಬೆಳೆದಿದೆ. ಜನಸಂದಣಿಯೂ ಅಧಿಕವಾಗಿರುತ್ತದೆ. ಈ ಸಂತೆ ಮಧ್ಯೆ ವಾಹನಗಳು ಸಾಗಬೇಕಾಗಿದೆ. ಒಂದು ವೇಳೆ ವಾಹನ ನಿಯಂತ್ರಣ ತಪ್ಪಿದರೆ ಅನಾಹುತ ಕಟ್ಟಿಟ್ಟದ್ದು.
ಸಂತೆಕಟ್ಟೆ ಜಂಕ್ಷನ್‌ನಲ್ಲಿ ಹೆದ್ದಾರಿಯೂ ತಿರುವಿನಿಂದ ಕೂಡಿದೆ. ಟ್ರಾಫಿಕ್ ಸಮಸ್ಯೆಯೂ ಇಲ್ಲಿದೆ. ಇದರ ನಡುವೆ ಸಂತೆ ಪೊಲೀಸರಿಗೆ ತಲೆನೋವಾಗಿದೆ. ಹಿಂದೊಮ್ಮೆ ರವಿವಾರದ ಸಂತೆಯ ದಿನ ಟ್ರಾಫಿಕ್‌ಗೆ ಸಮಸ್ಯೆಯಾಗಿದ್ದ ಕಾರಣ ಪೊಲೀಸರು ಲಾಠಿಚಾರ್ಜ್ ಮಾಡಿ ರಸ್ತೆ ವ್ಯಾಪಾರಸ್ಥರನ್ನು ಚದುರಿಸಿದ್ದರು. ಆದರೂ ಮತ್ತೆ ಅದೇ ರಾಗ ಎಂಬಂತಾಗಿದ್ದು. ಒಳಗೆ ಸಂತೆಗೆ ಜಾಗದ ಕೊರತೆ ಇರುವುದರಿಂದ ವ್ಯಾಪಾರಸ್ಥರು ರಸ್ತೆಯನ್ನೇ ಸಂತೆಯನ್ನಾಗಿ ಮಾಡಿಕೊಂಡಿದ್ದಾರೆ. ತರಕಾರಿ ಕೊಳ್ಳುವವರು, ಮಾರಾಟ ಮಾಡುವವರು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ವಾಹನ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುತ್ತಿದೆ. ‘ಮಾರುಕಟ್ಟೆ-ಸ್ಥಳಾಂತರವಾಗಲಿದೆ’
ಸಂತೆಕಟ್ಟೆ-ಕಲ್ಯಾಣಪುರ ಜಂಕ್ಷನ್‌ನಲ್ಲಿ ನಗರಸಭೆಯ ಜಾಗ ಸಾಲದೆ ಹೊರಗಡೆ ರಸ್ತೆಯಲ್ಲಿ ಸಂತೆ ನಡೆಯುತ್ತಿದೆ. ಇದರಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರಿದೆ. ಈಗಿರುವ ಜಾಗಕ್ಕಿಂತ ಸುಮಾರು 100 ಮೀ. ದೂರದಲ್ಲಿ ಮೌಂಟ್ ರೋಸರಿ ಚರ್ಚ್ ಮುಂಭಾಗ ಸರಕಾರಿ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರವಾಗಲಿದೆ. ಟೆಂಡರ್ ಕರೆಯಲಾಗಿದೆ. ಅನುದಾನವನ್ನೂ ನಿಗದಿಪಡಿಸಲಾಗಿದೆ. ಪಕ್ಕದಲ್ಲಿರುವ ಶ್ರೀ ವೀರಭದ್ರ ದೇವಸ್ಥಾನದವರು ತಪ್ಪು ತಿಳಿವಳಿಕೆಯಿಂದ ಮೊದಲು ವಿರೋಧಿಸಿದ್ದರು. ಸಭೆ ನಡೆಸಿ ಅವರ ಮನವೊಲಿಸಲಾಗಿದೆ. ಹಾಗಾಗಿ ಆದಷ್ಟು ಬೇಗನೆ ಸಂತೆ ಸ್ಥಳಾಂತರವಾಗಿ ಸಮಸ್ಯೆ ಪರಿಹಾರವಾಗುವುದು.
– ಚಂದ್ರಕಾಂತ್ ನಾಯಕ್, ನಗರಸಭೆ ಸದಸ್ಯರು (ಕಾಂಗ್ರೆಸ್)
Related Articles
ಸಂತೆಕಟ್ಟೆ ಮಾರುಕಟ್ಟೆಗೆ ಜಾಗ ಗೊತ್ತುಪಡಿಸಲಾಗಿದೆ. ಅಲ್ಲಿ ಇಂಟರ್‌ಲಾಕ್ ಅಳವಡಿಕೆ, ಕಾಂಪೌಂಡ್ ನಿರ್ಮಾಣ, ನೀರಿನ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ. ಆನಂತರದಲ್ಲಿ ಮಾರುಕಟ್ಟೆಯೊಳಗಿನ ಟೆಂಡರ್ ಮಾಡಲಾಗುವುದು. ಬಳಿಕ ಸಂತೆಕಟ್ಟೆ ಜಂಕ್ಷನ್ ಪಕ್ಕದ ವಾರದ ಸಂತೆ ಅಲ್ಲಿಗೆ ಸ್ಥಳಾಂತರವಾಗಲಿದೆ.
– ಡಿ. ಮಂಜುನಾಥಯ್ಯ, ನಗರಸಭೆ ಪೌರಾಯುಕ್ತರು
Advertisement
‘ಅನಾಹುತವಾದರೆ ನಗರಸಭೆಯೇ ಹೊಣೆ’ಉಡುಪಿಯ ಪ್ರಮುಖ ಸಂತೆಯಾಗಿದ್ದರೂ, ಇಲ್ಲಿ ನಗರಸಭೆ ಆಡಳಿತ ಏನೇನೂ ಕಾಳಜಿ ವಹಿಸಿಲ್ಲ. ರಾ.ಹೆ. ಬದಿ ಸಂತೆ ಮಾಡಬಾರದು ಎಂದಿದೆ. ಹೀಗಿರುವಾಗ ರಸ್ತೆಯಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತಲಿದೆ. ನಗರಸಭೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏನಾದರೂ ಅನಾಹುತವಾದರೆ ಅದಕ್ಕೆ ನಗರಸಭೆಯೇ ಹೊಣೆ.
– ಯಶಪಾಲ್ ಎ. ಸುವರ್ಣ, ನಗರಸಭೆ ಸದಸ್ಯರು (ಬಿಜೆಪಿ) – ಚೇತನ್ ಪಡುಬಿದ್ರಿ ; ಚಿತ್ರ: ಆಸ್ಟ್ರೋ ಮೋಹನ್